Koo App: ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳಿಗೆ ಕೂ ಯಿಂದ ಭರ್ಜರಿ ಆಫರ್

Twitter: ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳನ್ನು ಶೀಘ್ರದಲ್ಲೇ ನಾವು ನೇಮಿಸಿಕೊಳ್ಳುತ್ತೇವೆ ಎಂದು ಭಾರತದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ (Koo App) ಹೇಳಿದೆ.

Koo App: ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳಿಗೆ ಕೂ ಯಿಂದ ಭರ್ಜರಿ ಆಫರ್
Koo and Twitter
Follow us
TV9 Web
| Updated By: Vinay Bhat

Updated on:Nov 22, 2022 | 2:38 PM

ಎಲಾನ್ ಮಸ್ಕ್ (Elon Muck) ಟ್ವಿಟರ್ (Twitter)​ ಕಂಪನಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೆ ಮಸ್ಕ್ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದಿದ್ದಕ್ಕೆ ಸುಮಾರು 3,000 ಉದ್ಯೋಗಿಗಳು ಟ್ವಿಟರ್ ತೊರೆದಿದ್ದರು. ಇದೀಗ ಹೀಗೆ ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳನ್ನು ಶೀಘ್ರದಲ್ಲೇ ನಾವು ನೇಮಿಸಿಕೊಳ್ಳುತ್ತೇವೆ ಎಂದು ಭಾರತದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ (Koo App) ಹೇಳಿದೆ. ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕ ಟ್ವೀಟ್‌ ಮಾಡುವ ಮೂಲಕ ಟ್ವಿಟರ್​ನ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

“#RIPTwitter ಹಾಗೂ ಇದಕ್ಕೆ ಸಂಬಂಧಿಸಿದ ಹ್ಯಾಶ್​ಟ್ಯಾಗ್ ಅನ್ನು ನೋಡುವುದಕ್ಕೆ ತುಂಬಾ ಬೇಸರವಾಗುತ್ತದೆ. ನಾವು ಟ್ವಿಟರ್‌ನ ಮಾಜಿ ಉದ್ಯೋಗಿಗಳಲ್ಲಿ ಕೆಲವರನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ. ನಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಶ್ರಮವಹಿಸುತ್ತೇವೆ. ಇವರು ತಮ್ಮ ಪ್ರತಿಭೆಯನ್ನು ಗೌರವಿಸುವ ಸ್ಥಳದಲ್ಲಿ ಕೆಲಸ ಮಾಡಲು ಅರ್ಹರಾಗಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಜನರ ಶಕ್ತಿಗೆ ಸಂಬಂಧಿಸಿದ್ದಾಗಿದೆ,” ಎಂದು ಬಿಡವಟ್ಕ ಟ್ವೀಟ್ ಮಾಡಿದ್ದಾರೆ.

ಕೂ ಇಂದು ವಿಶ್ವದಲ್ಲಿ ಲಭ್ಯವಿರುವ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರ್ಚ್ 2020 ರಲ್ಲಿ ಪ್ರಾರಂಭವಾದ ಈ ಪ್ಲಾಟ್‌ಫಾರ್ಮ್ 50 ಮಿಲಿಯನ್​​ಗೂ ಅಧಿಕ ಡೌನ್‌ಲೋಡ್‌ ಕಂಡಿದೆ.

ಇದನ್ನೂ ಓದಿ
Image
Tech Tips: ಆಧಾರ್ ಕಾರ್ಡ್ ಕಳೆದು ಹೋದರೆ ತಕ್ಷಣ ಏನು ಮಾಡಬೇಕು?: ಮರಳಿ ಪಡೆಯುವುದು ಹೇಗೆ?
Image
Tech Tips: ನಿಮ್ಮ ಪಿಸಿ, ಲ್ಯಾಪ್​ಟಾಪ್ ಓವರ್ ಹೀಟ್, ಸ್ಲೋ ಆಗುತ್ತಾ?: ಈ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ
Image
App Store: ಐಫೋನ್ ಬಳಕೆದಾರರಿಗೆ ಸಿಗಲ್ಲ ಈ 7 ಪ್ರಮುಖ ಸರ್ಕಾರಿ ಆ್ಯಪ್​ಗಳು: ಯಾಕೆ ಗೊತ್ತೇ?
Image
WhatsApp Web: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ವಿಭಿನ್ನವಾದ ಸ್ಕ್ರೀನ್‌ ಲಾಕ್‌ ಫೀಚರ್: ವೆಬ್ ಬಳಕೆದಾರರು ಫುಲ್ ಖುಷ್

2 ಗಂಟೆ ಕೆಲಸ ಮಾಡುವಂತೆ ಆದೇಶ:

ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಮಾತನ್ನು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಮಸ್ಕ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಬಿಬಿಸಿ ವರದಿಯೊಂದರ ಪ್ರಕಾರ, ಟ್ವಿಟರ್‌ನಲ್ಲಿ ಸದ್ಯಕ್ಕೆ ಉಳಿಯಲಿರುವುದು ಎರಡು ಸಾವಿರ ಉದ್ಯೋಗಿಗಳು ಮಾತ್ರ. ಎಲಾನ್ ಮಸ್ಕ್ ಬರುವ ಮುನ್ನ ಟ್ವಿಟ್ಟರ್‌ನಲ್ಲಿ 7,500 ಉದ್ಯೋಗಿಗಳಿದ್ದರು. ಮಸ್ಕ್ ಬಂದಾಗಲೇ ಶೇ. 50ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆಯಂತೆ. ಈ ಎಲ್ಲ ಬೆಳವಣಿಗೆ ಜೊತೆಗೆ ಟ್ವಿಟರ್‌​ನ ಎಲ್ಲಾ ಕಚೇರಿಗಳು ತಾತ್ಕಾಲಿಕವಾಗಿ ಬಂದ್ ಅಗಿದೆ.

ಟ್ವಿಟರ್​ನಲ್ಲಿ ಹೊಸ ನಿಯಮ:

ಟ್ವಿಟರ್​ನ ಇತ್ತೀಚಿನ ನೀತಿ, ನಿಯಮಗಳ ಬಗ್ಗೆ ಅವರು ಸರಣಿ ಟ್ವೀಟ್​ ಮೂಲಕ ಎಲಾನ್ ಮಸ್ಕ್ ಮಾಹಿತಿ ನೀಡಿದ್ದಾರೆ. ನಕಾರಾತ್ಮಕ ಹಾಗೂ ದ್ವೇಷ ಹರಡುವ ಸಂದೇಶಗಳಿಗೆ ಟ್ವಿಟರ್ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ”ನಕಾರಾತ್ಮಕ ಹಾಗೂ ದ್ವೇಷದ ಸಂದೇಶ ಹೊಂದಿರುವ ಟ್ವೀಟ್​ಗಳನ್ನು ಗರಿಷ್ಠ ಮಟ್ಟದಲ್ಲಿ ಡಿಬೂಸ್ಟ್ ಹಾಗೂ ಡಿಮಾನಿಟೈಸ್ ಮಾಡಲಾಗುವುದು. ಆದ್ದರಿಂದ ಟ್ವಿಟರ್​ಗೆ ಯಾವುದೇ ಜಾಹೀರಾತು ಅಥವಾ ಆದಾಯ ಇರುವುದಿಲ್ಲ. ನೀವು ನಿರ್ದಿಷ್ಟವಾಗಿ ಹುಡುಕಿ ನೋಡದ ಹೊರತು ಅಂಥ ಟ್ವೀಟ್​ಗಳು ಕಾಣಿಸಲಾರವು. ಇದು ಆಯಾ ಟ್ವೀಟ್​ಗೆ ಅನ್ವಯಿಸುತ್ತದೆಯೇ ವಿನಃ ಇಡೀ ಟ್ವಿಟರ್ ಖಾತೆಗೆ ಅಲ್ಲ,” ಎಂದು ಮಸ್ಕ್ ತಿಳಿಸಿದ್ದಾರೆ.

Published On - 2:38 pm, Tue, 22 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ