ಇದು ಸ್ವದೇಶಿ ಸ್ಮಾರ್ಟ್​ಫೋನ್: ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ

|

Updated on: Sep 11, 2023 | 12:38 PM

Lava Blaze 2 Pro Launched in India: ದೇಶದಲ್ಲಿ ಲಾವಾ ಬ್ಲೇಜ್ 2 ಪ್ರೊ ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದು 8GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಫೋನ್ ಬೆಲೆ ಕೇವಲ 9,999 ರೂ. ಆಗಿದೆ. ಈ ಫೋನ್ ಆಕ್ಟಾ-ಕೋರ್ ಯುನಿಸಾಕ್ T616 ಪ್ರೊಸೆಸರ್ ಪ್ರೊಸೆಸರ್ ಮೂಲಕ ರನ್ ಆಗುತ್ತದೆ.

ಇದು ಸ್ವದೇಶಿ ಸ್ಮಾರ್ಟ್​ಫೋನ್: ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ
Lava Blaze 2 Pro
Follow us on

ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಭಾರತದ ಪ್ರಸಿದ್ಧ ಲಾವಾ ಕಂಪನಿ ಇದೀಗ ದೇಶದಲ್ಲಿ ಲಾವಾ ಬ್ಲೇಜ್ 2 ಪ್ರೊ (Lava Blaze 2 Pro) ಎಂಬ ಫೋನನ್ನು ಅನಾವರಣ ಮಾಡಿದೆ. ಬಜೆಟ್ ಬೆಲೆಗೆ ಲಭ್ಯವಿರುವ ಈ ಲಾವಾ ಹ್ಯಾಂಡ್‌ಸೆಟ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ ಆಕರ್ಷಕ ಕ್ಯಾಮೆರಾ, ಡಿಸ್ ಪ್ಲೇ ಆಯ್ಕೆಯನ್ನು ಕೂಡ ನೀಡಲಾಗಿದೆ. ಹಾಗಾದರೆ, ಲಾವಾ ಬ್ಲೇಜ್ 2 ಪ್ರೊ ಸ್ಮಾರ್ಟ್​ಫೋನ್​ನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಭಾರತದಲ್ಲಿ ಲಾವಾ ಬ್ಲೇಜ್ 2 ಪ್ರೊ ಬೆಲೆ, ಲಭ್ಯತೆ:

ದೇಶದಲ್ಲಿ ಲಾವಾ ಬ್ಲೇಜ್ 2 ಪ್ರೊ ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದು 8GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಫೋನ್ ಬೆಲೆ ಕೇವಲ 9,999 ರೂ. ಆಗಿದೆ. ಇದು ಥಂಡರ್ ಬ್ಲ್ಯಾಕ್, ಸ್ವಾಗ್ ಬ್ಲೂ ಮತ್ತು ಕೂಲ್ ಗ್ರೀನ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನ ಮಾರಾಟದ ದಿನಾಂಕ ಮತ್ತು ಲಭ್ಯತೆಯ ಬಗ್ಗೆ ಕಂಪನಿಯು ಇನ್ನೂ ಪ್ರಕಟಿಸಿಲ್ಲ.

ಲಾವಾ ಬ್ಲೇಜ್ 2 ಪ್ರೊ ಫೀಚರ್ಸ್:

ಲಾವಾ ಬ್ಲೇಜ್ 2 ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ. ಈ ಫೋನ್ 6.5-ಇಂಚಿನ IPS LCD ಡಿಸ್ ಪ್ಲೇ ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ. ಇದು 720×1600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ನೀಡುತ್ತದೆ. ಡಿಸ್ ಪ್ಲೇಯು ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಮೇಲಿನ ಮಧ್ಯಭಾಗದಲ್ಲಿ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದೆ.

ಇದನ್ನೂ ಓದಿ
ರೆಡ್ಮಿ ಪ್ರಿಯರಿಗಾಗಿ ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್
ಭಾರತಕ್ಕಿಂದು ಅಪ್ಪಳಿಸುತ್ತಿದೆ ನೋಕಿಯಾ G42 5G ಸ್ಮಾರ್ಟ್​ಫೋನ್
ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಕಂಪನಿ ಮೊಟ್ಟ ಮೊದಲ ಫ್ಲಿಪ್ ​ಫೋನ್
ನೀವು ಸ್ಮಾರ್ಟ್‌ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತೀರಾ?

ಜಿಯೋ 7ನೇ ವಾರ್ಷಿಕೋತ್ಸವ: ಪ್ರಿಪೇಯ್ಡ್ ಬಳಕೆದಾರರಿಗೆ ಲೈವ್ ಆಗಿದೆ ಧಮಾಕ ಆಫರ್

ಈ ಫೋನ್ ಆಕ್ಟಾ-ಕೋರ್ ಯುನಿಸಾಕ್ T616 ಪ್ರೊಸೆಸರ್ ಪ್ರೊಸೆಸರ್ ಮೂಲಕ ರನ್ ಆಗುತ್ತದೆ. ಇದು 8GB ಯ RAM ಮತ್ತು 128GB ಸಂಗ್ರಹದೊಂದಿಗೆ ಜೋಡಿಯಾಗಿದೆ. ಬಳಕೆದಾರರು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದು ಮತ್ತು ಮೆಮೊರಿ ಫ್ಯೂಷನ್ ತಂತ್ರಜ್ಞಾನವನ್ನು ಬಳಸಿಕೊಂಡು RAM ಅನ್ನು 8GB ವರೆಗೆ ಹೆಚ್ಚಿಸಬಹುದಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಲಾವಾ ಬ್ಲೇಜ್ 2 ಪ್ರೊ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಡ್ಯುಯಲ್ 2-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕಗಳಿಂದ ಕೂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಹೆಚ್ಚುವರಿಯಾಗಿ, ಈ ಫೋನ್ 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ. ಸಂಪರ್ಕಕ್ಕೆ ಸಂಬಂಧಿಸಿದಂತೆ, ಲಾವಾ ಬ್ಲೇಜ್ 2 ಪ್ರೊ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್ 5.0, GPS, USB ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಭದ್ರತೆಗಾಗಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಜೊತೆಗೆ ಫೇಸ್ ಅನ್‌ಲಾಕ್ ಫೀಚರ್ ಕೂಡ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ