ಮತದಾರರ ಗುರುತಿನ ಚೀಟಿಯ (Voter ID Card) ಮಹತ್ವವನ್ನು ಹೆಚ್ಚಾಗಿ ಹೇಳಬೇಕಿಲ್ಲ. ಎಲ್ಲರಿಗೂ ಇದರ ಅಗತ್ಯದ ಬಗ್ಗೆ ಗೊತ್ತು. ಇದನ್ನು ಭಾರತದ ಚುನಾವಣಾ ಆಯೋಗ ಹೊರಡಿಸಿದೆ. ಮತದಾರರ ಗುರುತಿನ ಚೀಟಿಯಲ್ಲಿ ಮತದಾರರ ಹೆಸರು, ಮತದಾರರ ಭಾವಚಿತ್ರ, ವಿಳಾಸ, ಜನ್ಮ ದಿನಾಂಕ ಇತ್ಯಾದಿಗಳು ಇರುತ್ತವೆ. ಅದನ್ನು ಬಳಸಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಒಬ್ಬರು ಯಾವುದೇ ಸರ್ಕಾರಿ ಯೋಜನೆಯನ್ನು ಪಡೆಯಬಹುದು, ಬ್ಯಾಂಕ್ ಖಾತೆ ತೆರೆಯಬಹುದು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಪಡೆಯಬಹುದು.
ಆದರೆ, ಈ ಮಹತ್ವದ ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಗತಿ?. ಹೀಗೆ ಕಳೆದುಹೋದ ಕಾರ್ಡ್ ಅನ್ನು ಹಿಂಪಡೆಯಲು ಒಂದು ಮಾರ್ಗವಿದೆ. ನೀವು ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯ ಪ್ರತಿಯನ್ನು ಪಡೆಯಬಹುದು. ಅದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಬಜೆಟ್ ಪ್ರಿಯರಿಗಾಗಿ ವಿಶೇಷ ಸ್ಮಾರ್ಟ್ಫೋನ್ ಮೋಟೋ G ಪ್ಲೇ (2024) ಬಿಡುಗಡೆ: ಬೆಲೆ ಎಷ್ಟು?
ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ನೀವು ಅದನ್ನು ಉಚಿತವಾಗಿ ಪಡೆಯಬಹುದು. ಮತದಾರರ ಗುರುತಿನ ಚೀಟಿ ಸಾಮಾನ್ಯವಾಗಿ 15-20 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ