ಮರೆಯಲಾಗದ ತಪ್ಪೆಸಗಿದ ಮಾರ್ಕ್ ಝುಕರ್​ಬರ್ಗ್

ಮೆಟಾವರ್ಸ್ ಯೋಜನೆಯ ಬಗ್ಗೆ ಪುನರ್ ಪರಿಶೀಲನೆ ಮಾಡುವ ಅಥವಾ ಸದ್ಯಕ್ಕೆ ಸ್ಥಗಿತಗೊಳಿಸುವ ಬಗ್ಗೆ ಯೋಚಿಸದ ಝುಕರ್ಬರ್ಗ್ ಅದೇ ಹಾದಿಯಲ್ಲಿ ಮತ್ತಷ್ಟು ವೇಗವಾಗಿ ಮುಂದುವರಿಯಲು ತೀರ್ಮಾನಿಸಿದರು. ಇದನ್ನು ಹೂಡಿಕೆದಾರರು ಇಷ್ಟಪಡಲಿಲ್ಲ. ಮುಂದೇನಾಯಿತು? ಓದಿ...

ಮರೆಯಲಾಗದ ತಪ್ಪೆಸಗಿದ ಮಾರ್ಕ್ ಝುಕರ್​ಬರ್ಗ್
ಮೆಟಾ ಸಿಇಒ ಮಾರ್ಕ್​ ಝುಕರ್​ಬರ್ಗ್ ಅವರ ‘ಅವತಾರ್’ ಚಿತ್ರ (ಕೃಪೆ - ಮೆಟಾ)Image Credit source: Meta
Follow us
TV9 Web
| Updated By: Digi Tech Desk

Updated on:Nov 10, 2022 | 3:15 PM

ತಾನಿನ್ನು ಮೆಟಾ (Meta) ಎಂದು ಗುರುತಿಸಿಕೊಳ್ಳುವುದಾಗಿ 2021ರ ಅಕ್ಟೋಬರ್​​ನಲ್ಲಿ ಫೇಸ್​ಬುಕ್ (Facebook) ಘೋಷಿಸಿತು. ಇದು ಕೇವಲ ಹೆಸರು ಬದಲಾವಣೆ ಅಷ್ಟೇ ಆಗಿರಲಿಲ್ಲ. ಅದಾಗಲೇ ಸಂಸ್ಥಾಪಕ ಮಾರ್ಜ್ ಝುಕರ್​ಬರ್ಗ್ (Mark Zuckerberg) ಕಂಪನಿಯನ್ನು ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯನ್ನಾಗಿ ರೂಪಿಸಿದ್ದರು. ಬಳಕೆದಾರರು 2ಡಿ ಇಂಟರ್ನೆಟ್​ನಿಂದ ಪರಿವರ್ತನೆಗೊಳ್ಳುವ ಮುನ್ನವೇ ವೆಬ್​ 3.0 ದೃಷ್ಟಿಕೋನವನ್ನು ಹೊಂದಿದ್ದ ಝುಕರ್​ಬರ್ಗ್ ಅದಕ್ಕೆ ತಕ್ಕಂತೆ ಕಂಪನಿಯನ್ನು ಪರಿವರ್ತಿಸಿದ್ದರು. ಇದಕ್ಕಿಂತಲೂ ಮಿಗಿಲಾಗಿ, ಮೆಟಾ ನಿರ್ಮಿತ ಆಕ್ಯುಲಸ್/ಕ್ವೆಸ್ಟ್ ಹೆಡ್​ಸೆಟ್​ಗಳೊಂದಿಗೆ ಜನರು ಡಿಜಿಟಲ್ ಅವತಾರದಲ್ಲಿ ವರ್ಚುವಲ್ ಲೋಕದೊಳಗೆ ಪ್ರವೇಶಿಸುವಂತೆ ಮಾಡುವ ಇಚ್ಛೆ ಅವರದಾಗಿತ್ತು. ಜನ ಮೆಟಾವರ್ಸ್​​ನೊಳಗೆ ಸೋಷಿಯಲೈಸ್ ಆಗುವ ಮತ್ತು ಕೆಲಸ ಮಾಡುವಂಥ ವಾತಾವರಣ ಸೃಷ್ಟಿಸಬಯಸಿದ್ದರು.

ಇದು ವಿಶ್ವದ ಅತಿ ದೊಡ್ಡ ಸಾಮಾಜಿಕ ಮಾಧ್ಯಮದ ದೃಷ್ಟಿಯಿಂದ ದಿಟ್ಟ ನಿರ್ಧಾರವಾಗಿದ್ದಲ್ಲದೆ, ಅದನ್ನು 180 ಡಿಗ್ರಿ ಕೋನದಿಂದ ನೋಡುವಂತೆ ಮಾಡಿತು. ಆದರೆ, ಇದೊಂದು ಕೆಟ್ಟ ನಿರ್ಧಾರ ಎಂದು ಝುಕರ್​ಬರ್ಗ್ ಶಂಕಿಸಲು ಆಗ ಯಾವುದೇ ಕಾರಣಗಳಿರಲಿಲ್ಲ. ಫೇಸ್​ಬುಕ್​ನ ಮಾರುಕಟ್ಟೆ ಬಂಡವಾಳವೇ ಆಗ 1 ಟ್ರಿಲಿಯನ್ ಡಾಲರ್​ನಷ್ಟಿತ್ತು. ಅಂದರೆ, ಭಾರತದ ವಾರ್ಷಿಕ ಜಿಡಿಪಿಯ (ಒಟ್ಟು ದೇಶೀಯ ಉತ್ಪನ್ನ) ಮೂರನೇ ಒಂದರಷ್ಟಾಗಿತ್ತು. ಇಂಥ ಸಂದರ್ಭದಲ್ಲಿ ಕಂಪನಿಯನ್ನು ಇನ್ನಷ್ಟು ಬೆಳೆಸಲು, ಗಟ್ಟಿಗೊಳಿಸಲು ಪ್ರಯತ್ನಿಸದಿದ್ದರೆ ಮತ್ಯಾವಾಗ ಶ್ರಮಿಸಬೇಕು?

ಪರಿಣಾಮವಾಗಿ ರಿಯಾಲ್ಟಿ ಲ್ಯಾಬ್ಸ್​ಗೆ (Reality Labs) ಶತಕೋಟಿ ಡಾಲರ್​ಗಳನ್ನು ನೀಡಬೇಕಾಯಿತು. ಝುಕರ್​ಬರ್ಗ್ ಅವರ ಮೆಟಾವರ್ಸ್ ದೃಷ್ಟಿಕೋನವನ್ನು ಸಾಕಾರಗೊಳಿಸುವ ಹೊಣೆ ಮೆಟಾ ತಂಡದ್ದಾಯಿತು. ಇದಾಗಿ ಒಂದು ವರ್ಷದಲ್ಲಿ, 15 ಶತಕೋಟಿ ಡಾಲರ್ ವ್ಯಯಿಸಿರುವುದಾಗಿ ರಿಯಾಲ್ಟಿ ಲ್ಯಾಬ್ಸ್ ವರದಿ ನೀಡಿತು. ಪ್ರತಿಯಾಗಿ ಅದ್ಭುತವನ್ನೇನಾದರೂ ಅದು ಮಾಡಿ ತೋರಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಅಲ್ಲಿಂದಾಚೆಗೆ ಹಾರಿಜನ್ ವರ್ಲ್ಡ್ಸ್ (Horizon Worlds) ಅನ್ನು ಮೆಟಾರ್ಸ್ ವೇದಿಕೆಯಾಗಿ ಹೆಸರಿಸಲಾಯಿತು. ಇದಕ್ಕೂ ನೀರಸ ಪ್ರತಿಕ್ರಿಯೆಯೇ ದೊರೆಯಿತು. ವರ್ಚುವಲ್ ಪ್ರಪಂಚದ ಮೇಲಿನ ಆರಂಭಿಕ ಉತ್ಸಾಹ ತಕ್ಷಣವೇ ಕುಂದಿಹೋಯಿತು. ಒಂದು ಹಂತದಲ್ಲಿ, ವರದಿಗಳ ಪ್ರಕಾರ ಪ್ರತಿ ದಿನ 3 ಲಕ್ಷದಷ್ಟಿದ್ದ ಬಳಕೆದಾರರ ಸಂಖ್ಯೆ 2 ಲಕ್ಷಕ್ಕೆ ಕುಸಿಯಿತು. 2022ರ ಅಂತ್ಯದ ವೇಳೆಗೆ 5 ಲಕ್ಷ ಬಳಕೆದಾರರನ್ನು ಹೊಂದಬೇಕು ಎಂಬುದು ಕಂಪನಿ ಹಾಕಿಕೊಂಡಿದ್ದ ಗುರಿ ಆಗಿತ್ತು. ಕಂಪನಿಯ ಕೆಲವು ಆಂತರಿಕ ಸಂದೇಶಗಳೂ ಸಹ ಮೆಟಾದ ಡೆವಲಪರ್​ಗಳೇ ಹಾರಿಜನ್ ವರ್ಲ್ಡ್ಸ್ ಮೇಲೇ ಆಸಕ್ತಿ ಹೊಂದಿಲ್ಲ ಎಂಬುದು ಕೆಲವು ವರದಿಗಳಿಂದ ತಿಳಿದುಬಂತು!

ಇದನ್ನೂ ಓದಿ: Meta Layoffs: ಮೆಟಾದಿಂದ 11,000 ಉದ್ಯೋಗಿಗಳ ವಜಾ; ಮಾರ್ಕ್ ಝುಕರ್​ಬರ್ಗ್ ಘೋಷಣೆ

ಮೆಟಾವರ್ಸ್ ಯೋಜನೆಯ ಬಗ್ಗೆ ಪುನರ್ ಪರಿಶೀಲನೆ ಮಾಡುವ ಅಥವಾ ಸದ್ಯಕ್ಕೆ ಸ್ಥಗಿತಗೊಳಿಸುವ ಬಗ್ಗೆ ಯೋಚಿಸದ ಝುಕರ್ಬರ್ಗ್ ಅದೇ ಹಾದಿಯಲ್ಲಿ ಮತ್ತಷ್ಟು ವೇಗವಾಗಿ ಮುಂದುವರಿಯಲು ತೀರ್ಮಾನಿಸಿದರು. ಇದನ್ನು ಹೂಡಿಕೆದಾರರು ಇಷ್ಟಪಡಲಿಲ್ಲ. ಅವರು, ಕಳೆದ ವರ್ಷದ ಅಂತ್ಯದ ವೇಳೆಗೆ 12.7 ಶತಕೋಟಿ ಡಾಲರ್​ ಇದ್ದ ಮೆಟಾದ ಹಣಕಾಸು ಈ ವರ್ಷದ ಹರಿವು ಮೂರನೇ ತ್ರೈಮಾಸಿಕದ ವೇಳೆಗೆ ಕೇವಲ 316 ದಶಲಕ್ಷ ಡಾಲರ್​ಗೆ ಇಳಿಕೆಯಾದದ್ದನ್ನು ಗಮನಿಸಿದರು. ವಾಲ್​ಸ್ಟ್ರೀಟ್​ನಲ್ಲಿ ಹೆಚ್ಚಿನ ಐಟಿ ಷೇರುಗಳು ಕುಸಿತ ದಾಖಲಿಸಿದ್ದವು. ಮೆಟಾದ ಷೇರುಗಳು ಆರಂಭದ 1 ಟ್ರಿಲಿಯನ್ ಡಾಲರ್​ಗೆ ಹೋಲಿಸಿದರೆ ಶೇಕಡಾ 70ಕ್ಕಿಂತಲೂ ಹೆಚ್ಚಿನ ಕುಸಿತ ದಾಖಲಿಸಿತು.

90ರ ದಶಕದ ಮಧ್ಯಭಾಗದ ವರ್ಚುವಲ್ ಜಗತ್ತಿಗೆ ಹೋಲಿಸಿದರೆ ಹಾರಿಜನ್ ವರ್ಲ್ಡ್ಸ್ ಉತ್ತಮ ವರ್ಷನ್ ಎಂದ ಗೇಮಿಂಗ್ ತಜ್ಞರು, ಅದನ್ನು ಹಾಗೆಯೇ ಮುಂದುವರಿಸಿದರು (ನೀವಿದನ್ನು ಅನುಭವಿಸಬೇಕಾದರೆ ಮೆಟಾ ಕ್ಯುಸೆಟ್ ಹೆಡ್​ಸೆಟ್ ಅನ್ನು ಹೊಂದಬೇಕು. ಸಾಮಾನ್ಯ ನೋಟ ಸಾಕೆಂದಿದ್ದರೆ (https://www.oculus.com/horizon-worlds/) ಈ ತಾಣಕ್ಕೆ ಭೇಟಿ ನೀಡಬಹುದು). ಬೇರೆಯದೇ ರೀತಿಯಲ್ಲಿ ವಿಶ್ಲೇಷಿಸುವುದಾದರೆ, ಶತಕೋಟಿ ಡಾಲರ್‌ಗಳನ್ನು ಸುರಿದ ನಂತರ ಬಳಕೆದಾರರಿಗೆ ನೀಡಬೇಕಾದ ಅನುಭವ ಖಂಡಿತವಾಗಿಯೂ ಪ್ರಸ್ತುತ ಹಾರಿಜನ್ ವರ್ಲ್ಡ್ಸ್ ನೀಡುತ್ತಿರುವ ಅನುಭವಕ್ಕಿಂತ ಉತ್ತಮವಾಗಿರಲೇಬೇಕು.

ಮೆಟಾವರ್ಸ್ ನಿಜವಾಗಿಯೂ ಅದರ ಚಾಂಪಿಯನ್​ಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಪರಿಣಾಮಕಾರಿಯೇ ಎಂದು ಕೇಳುವವರೂ ಇದ್ದಾರೆ. ಪ್ರಸ್ತುತ ತಂತ್ರಜ್ಞಾನವನ್ನು ಗಮನಿಸಿದರೆ, ನಾನೂ ಮೆಟಾವರ್ಸ್ ಬಗ್ಗೆ ಸಂದೇಹ ಹೊಂದಿದ್ದೇನೆ (ನೋಡಿ https://www.news9live.com/opinion-blogs/gods-universe-vs-mans-metaverse-198548). ಆರಂಭಿಕರಿಗಾದರೆ ಮೆಟಾವರ್ಸ್ ಅಥವಾ ಮೆಟಾವರ್ಸಸ್​ನಂತೆ ಕಾಣುವಂಥದ್ದಿಲ್ಲ. ಅದು ಡಿಸೆಂಟ್ರಲ್​ಲ್ಯಾಂಡ್, ಸ್ಯಾಂಡ್​ಬಾಕ್ಸ್, ಆಕ್ಸಿ ಇನ್​ಫಿನಿಟಿ ಅಥವಾ ಹಾರಿಜನ್ ವರ್ಲ್ಡ್ಸ್ ಇರಲಿ, ಇವುಗಳೆಲ್ಲ ವರ್ಚುವಲ್ ವರ್ಲ್ಡ್ ಎನ್ನುವುದಕ್ಕಿಂತಲೂ 3ಡಿ ವಿಡಿಯೊ ಗೇಮ್​​​ಗಳು ಎಂದಷ್ಟೇ ಗುರುತಿಸಿಕೊಂಡಿವೆ.

ಮೆಟಾವರ್ಸ್ ಅನುಭವವು ‘ಫ್ಲೂಯಿಡ್’ ಮತ್ತು ನೈಜ ಪ್ರಪಂಚದಂತೆ ಆರಾಮದಾಯಕ ಅನುಭವ ನೀಡಬೇಕಿದ್ದರೆ ತಂತ್ರಜ್ಞಾನದಲ್ಲಿ ಮಹತ್ವದ ಪ್ರಗತಿಯ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ. ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ನಿಂದ ಪ್ರಾರಂಭಿಸಿ, ವಸ್ತುಗಳು ಹೇಗೆ ಕಾಣುತ್ತವೆ ಎಂಬುದನ್ನು ಪತ್ತೆಹಚ್ಚಲು ಮತ್ತು ವಸ್ತುಗಳನ್ನು ಇರಿಸುವ ವಿಚಾರದಲ್ಲಿ ಸಾಧನೆ ಮಾಡಲು ಪ್ರೋಗ್ರಾಮರ್‌ಗಳು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು (avatars without legs; seriously!).

ಮೆಟಾದ ಮುಖ್ಯ ಸಮಸ್ಯೆ ಎಂದರೆ, ಇನ್ನೂ ಸೂಕ್ತ ಸಮಯ ಬಾರದೆ ಕಲ್ಪನೆಯ ಮೇಲೆ ಬಾಜಿ ಕಟ್ಟಿರುವುದು. ಬಹುಶಃ ಮುಂಬರುವ ದಶಕಗಳಲ್ಲಿ, ವಿಆರ್ ಹೆಡ್‌ಸೆಟ್‌ಗಳ ಅಗತ್ಯತೆಯೊಂದಿಗೆ ಅಥವಾ ಅಗತ್ಯ ಇಲ್ಲದೆಯೇ ಹೆಚ್ಚು ವಾಸ್ತವಿಕ ವರ್ಚುವಲ್ ಜಗತ್ತನ್ನು ನೀಡುವ ನಿಟ್ಟಿನಲ್ಲಿ ಎದುರಾಗುವ ಸವಾಲುಗಳನ್ನು ಬಗೆಹರಿಸಲು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎಂಜಿನಿಯರ್‌ಗಳಿಗೆ ಸಾಧ್ಯವಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ಝುಕರ್​ಬರ್ಗ್​ ಅವರ ಮೆಟಾಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಪ್ರತಿ ತ್ರೈಮಾಸಿಕದಲ್ಲಿ ಕಂಪನಿಯ ಹಣಕಾಸಿನ ಪರಿಸ್ಥಿತಿ ಹದಗೆಡುತ್ತಿರುವಾಗ ಅದು ವರ್ಚುವಲ್ ಮೆಟಾವರ್ಸ್ ನಿರ್ಮಿಸುವ ಕನಸನ್ನು ಬೆನ್ನಟ್ಟುವುದನ್ನು ಮುಂದುವರಿಸಬಹುದೇ? ಬೇಡ ಎಂಬುದೇ ಅದರ ಹೂಡಿಕೆದಾರರ ಉತ್ತರವಾಗಿದೆ.

– ಆರ್​. ಶ್ರೀಧರನ್ (ವ್ಯವಸ್ಥಾಪಕ ಸಂಪಾದಕರು, ಟಿವಿ9 ಕರ್ನಾಟಕ)

Published On - 2:09 pm, Thu, 10 November 22

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ