Facebook Down: ವಾಟ್ಸ್ಆ್ಯಪ್, ಇನ್ಸ್ಟಾ, ಟ್ವಿಟರ್ ಆಯ್ತು ಈಗ ಫೇಸ್ಬುಕ್ ಡೌನ್: ಲಾಗಿನ್ ಮಾಡಲು ಜನರ ಪರದಾಟ
ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ (WhatsApp), ಇನ್ಸ್ಟಾಗ್ರಾಮ್, ಟ್ವಿಟರ್ ದಿಢೀರ್ ಕಾರ್ಯನಿರ್ವಹಿಸದೆ ತೊಂದರೆಗೆ ಒಳಗಾಗಿತ್ತು. ಇದೀಗ ಫೇಸ್ಬುಕ್ ಸರದಿ. ಮೆಟಾ ಒಡೆತನದ ಫೇಸ್ಬುಕ್ (Facebook) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ.
ಕಳೆದ ಕೆಲವು ವಾರಗಳಿಂದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ (WhatsApp), ಇನ್ಸ್ಟಾಗ್ರಾಮ್, ಟ್ವಿಟರ್ ದಿಢೀರ್ ಕಾರ್ಯನಿರ್ವಹಿಸದೆ ತೊಂದರೆಗೆ ಒಳಗಾಗಿತ್ತು. ಇದೀಗ ಫೇಸ್ಬುಕ್ ಸರದಿ. ಮೆಟಾ ಒಡೆತನದ ಫೇಸ್ಬುಕ್ (Facebook) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್ಡಿಟೆಕ್ಟರ್ ಮಾಹಿತಿ ನೀಡಿದ್ದು, ಕ್ರಿಯೇಟರ್ ಸ್ಟುಡಿಯೋ ಮೂಲಕ ಫೋಸ್ಟ್ ಮಾಡಲಾಗುತ್ತಿಲ್ಲ ಎಂದು ಹೇಳಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಸಮಸ್ಯೆ ಕಂಡುಬಂದಿದೆ.
ಮುಂಬೈ, ಕೋಲ್ಕತ್ತಾ, ಡೆಲ್ಲಿ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ಫೇಸ್ಬುಕ್ ಕ್ರಿಯೇಟರ್ ಸ್ಟುಡಿಯೋ ಮೂಲಕ ಯಾವುದೇ ಪೋಸ್ಟ್ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇನ್ಸೈಟ್ಸ್ ವೀಕ್ಷಿಸಲು, ಮೆಸೇಜ್ ಕಳುಹಿಸಲು ಆಗುತ್ತಿಲ್ಲ. ಜಾಹೀರಾತು ನಿರ್ವಾಹಕ ಸೇವೆಗಳಿಗೆ ಕೂಡ ಲಾಗ್ ಇನ್ ಮಾಡುವಾಗ ಕೆಲವು ಬಳಕೆದಾರರಿಗೆ ಎರಾರ್ ತೋರಿಸುತ್ತಿದೆ.
ಮೆಟಾ ಸಂಸ್ಥಾಪಕ ಮತ್ತು CEO ಮಾರ್ಕ್ ಜುಕರ್‌ಬರ್ಗ್ 11000 ಉದ್ಯೋಗಿಗಳನ್ನು ವಜಾಗೊಳಿಸಿದ ಒಂದು ದಿನದ ನಂತರ ಫೇಸ್ಬುಕ್ ಡೌನ್ ಆಗಿದೆ. ಅನೇಕ ಭಾಗದಲ್ಲಿ ಫೇಸ್ಬುಕ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಪ್ರಸ್ತುತ ಫೇಸ್ಬುಕ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು ಬಳಕೆದಾರರು ಮೀಮ್ಗಳನ್ನು ಹರಿಬಿಡುತ್ತಿದ್ದಾರೆ.
@Meta @MetaforBusiness why is facebook ads manager down today?!!!!
— Natasha Devanpelli (@Natashadevanpel) November 10, 2022
Facebook Ads Manager is down. AS IF Q4 ISNT PROBLEMATIC ENOUGH. ? #METAdown
— ☆ Anna Brebante (@fudgessforyou) November 10, 2022
@facebook ads is down? pic.twitter.com/8ON1WY3KwZ
— m . r k (@6b72616d6d6d) November 10, 2022
11 ಸಾವಿರ ಉದ್ಯೋಗಿಗಳಿಗೆ ಗೇಟ್ಪಾಸ್:
ಫೇಸ್ಬುಕ್ ಮಾತೃಸಂಸ್ಥೆ ಮೇಟಾದಿಂದ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ತೀರ್ಮಾನ ಮಾಡಿದೆ. ಮೊದಲ ಹಂತದಲ್ಲಿ 11 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ತೀರ್ಮಾನ ಮಾಡಲಾಗಿದೆ. ಕಂಪನಿಯು ಶೇ.13 ರಷ್ಟು ಉದ್ಯೋಗಿಗಳಿಗೆ ಕೊಕ್ ನೀಡಲು ನಿರ್ಧರಿಸಲಾಗಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಘೋಷಣೆ ಮಾಡಿದ್ದಾರೆ. ”ಹಲವು ಚರ್ಚೆಗಳ ಬಳಿಕ ಒಂದು ಕಠಿಣ ನಿರ್ಧಾರಕ್ಕೆ ಬರಲಾಗಿದೆ. ಯಾರನ್ನೆಲ್ಲಾ ಸಂಸ್ಥೆ ಹೊರ ಹಾಕುತ್ತಿದೆಯೋ ಅಂತಹ ಉದ್ಯೋಗಿಗಳಿಗೆ ಕಂಪನಿ ಕ್ಷಮೆ ಕೇಳುತ್ತಿದೆ. ಜೊತೆಗೆ ನಾನೂ ಕೂಡ ನಿಮ್ಮನ್ನ ಕ್ಷಮೆ ಕೇಳುತ್ತಿದ್ದೇನೆ,” ಎಂದು ಜುಕರ್‌ಬರ್ಗ್ ಹೇಳಿದ್ದಾರೆ.