AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Tech Summit 2022: ನ. 16ರಿಂದ 18ರವರೆಗೆ ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್-2022: ಪ್ರಧಾನಿ ಮೋದಿಯಿಂದ ಉದ್ಘಾಟನೆ

ಇದೇ ನವೆಂಬರ್​ 16 ರಿಂದ 18ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ಹೇಳಿದ್ದಾರೆ.

Bengaluru Tech Summit 2022: ನ. 16ರಿಂದ 18ರವರೆಗೆ ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್-2022: ಪ್ರಧಾನಿ ಮೋದಿಯಿಂದ ಉದ್ಘಾಟನೆ
ಡಾ ಸಿಎನ್ ಅಶ್ವಥ್ ನಾರಾಯಣ
TV9 Web
| Updated By: Vinay Bhat|

Updated on:Nov 08, 2022 | 2:44 PM

Share

ಬೆಂಗಳೂರು ಟೆಕ್ ಸಮಿಟ್ (Bengaluru Tech Summit 2022) 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಇದೇ ನವೆಂಬರ್​ 16 ರಿಂದ 18ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ಹೇಳಿದ್ದಾರೆ. ವಿಶೇಷ ಎಂದರೆ 25ನೇ ಬೆಂಗಳೂರು ಟೆಕ್​ ಸಮ್ಮಿಟ್​-2022 ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ. ಈ ಬಾರಿ 50 ದೇಶಗಳು, 500ಕ್ಕೂ ಸ್ಟಾರ್ಟಪ್​​​ಗಳು ಭಾಗಿಯಾಗಲಿದ್ದು, ಈ ಕಾರ್ಯಕ್ರಮದಲ್ಲಿ ನಮ್ಮ ಪ್ರತಿಭೆಗಳ ಸಾಧನೆ ಅನಾವರಣ ಆಗಲಿದೆ ಮತ್ತು 25ನೇ ವರ್ಷದ ಸಮ್ಮಿಟ್ ಆದ್ದರಿಂದ ದೊಡ್ಡದಾಗಿ ವಿಶೇಷವಾಗಿರಲಿದೆ ಎಂದು ಅವರು ಹೇಳಿದ್ದಾರೆ.

2023 ಕ್ಕೆ ಇಡೀ ವಿಶ್ವವೇ ಬೆಂಗಳೂರನ್ನು ನೋಡಲಿದೆ ಎಂದು ಹೇಳಿರುವ ಅಶ್ವತ್ಥ್ ನಾರಾಯಣ, ”ಸಮ್ಮಿಟ್ ನಲ್ಲಿ 25 ಜನರಿಗೆ ಸನ್ಮಾನ ಮಾಡಿಲಿದ್ದೇವೆ‌. 25 ವರ್ಷಗಳಿಗೆ ಮತ್ತೆ ಕರ್ನಾಟಕ ನವ ನಿರ್ಮಾಣ ಆಗಲಿದ್ದು ಯುವಕರಿಗೆ ಭವಿಷ್ಯ ಕಟ್ಟಿಕೊಳ್ಳುವುದಕ್ಕೆ ಒಂದು ಅವಕಾಶ ಇದಾಗಿದೆ. ದೇಶದಲ್ಲಿಯೇ ನಮ್ಮ ರಾಜ್ಯ ನಂಬರ್ ಒನ್ ಆಗಿದೆ. ಮುಂದಿನ 25 ವರ್ಷದಲ್ಲಿ ವಿಶ್ವದಲ್ಲಿಯೇ ನಂಬರ್ ಒನ್ ರಾಜ್ಯ ಕರ್ನಾಟಕ ಆಗಲಿದೆ,” ಎಂದು ಹೇಳಿದ್ದಾರೆ.

”ಬಯೋಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದೇವೆ. ಮೆಟಾವರ್ಸ್, ವೆಬ್ 3 ಗೆ ಪೂರಕ ಯೋಜನೆ ಆಗಬೇಕು. ಈ ಕಾರ್ಯಕ್ರಮ ಕೇವಲ ಟೆಕ್ಕಿಗಳಿಗೆ ಸೀಮಿತವಾಗದೆ ಗ್ರಾಮೀಣಭಾಗದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಗ್ರಾಮೀಣ ಭಾಗ ಸಂಪೂರ್ಣ ತೊಡಗಿಕೊಳ್ಳುವ ಹಾಗೆ ಆಗಬೇಕು. ಲಸಿಕೆ ಉತ್ಪಾದನೆ,ಆರೋಗ್ಯ ಉನ್ನತಿಕರಣದಲ್ಲೂ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಬೆಂಗಳೂರು ಹೊರತುಪಡಿಸಿ ಬೇರೆ ಸ್ಥಳಗಳು ಅಭಿವೃದ್ಧಿ ಆಗಲು ಈ ಕಾರ್ಯಕ್ರಮ ಸಹಾಯವಾಗುತ್ತಿದೆ,” ಎಂಬುದು ಅಶ್ವತ್ಥ್ ನಾರಾಯಣ ಅವರ ಮಾತು.

ಇದನ್ನೂ ಓದಿ
Image
ನೆಹರು ತನ್ನನ್ನು ಹಿಂದೂ ಎಂದು ಕರೆಯದಂತೆ ಹೇಳಿದ್ದರು; ಇವತ್ತಿಗೂ ಕಾಂಗ್ರೆಸ್ಸಿನಲ್ಲಿ ಅದೇ ಪರಂಪರೆ ಮುಂದುವರೆದಿದೆ -ಸಚಿವ ಸುನಿಲ್ ಕುಮಾರ್
Image
Gandhadagudi: ಶಾಲೆ ಮಕ್ಕಳಿಗೆ ಉಚಿತವಾಗಿ ಗಂಧದಗುಡಿ ಚಿತ್ರ ತೋರಿಸಲು ರಾಜ್ಯ ಸರ್ಕಾರಕ್ಕೆ ಎನ್.ಆರ್. ರಮೇಶ್ ಮನವಿ
Image
ಸೂಕ್ತ ಪರಿಹಾರ ಕೊಡಿಸಿ ಇಲ್ಲವೇ ದಯಾಮರಣ ಕೊಡಿ; ತಾಯಿ ಮತ್ತು ಮಗನಿಂದ ರಾಷ್ಟ್ರಪತಿಗೆ ಪತ್ರ
Image
ಹಾಸನ ಜನತೆ ಕೂಗಿಗೆ ಮಣಿದ ಸರ್ಕಾರ, ಅಧ್ಯಯನ ನಡೆಸುತ್ತಿರುವ ಅರಣ್ಯ ಇಲಾಖೆ

ಟೆಕ್‌ ಸಮ್ಮಿಟ್‌ನಲ್ಲಿ ಆಸ್ಪ್ರೇಲಿಯಾ:

ಬೆಂಗಳೂರು ಟೆಕ್‌ಸಮ್ಮಿಟ್‌ನಲ್ಲಿ ಆಸ್ಪ್ರೇಲಿಯಾ ಸತತವಾಗಿ ನಾಲ್ಕು ವರ್ಷವೂ ಭಾಗಿಯಾಗಿದೆ. ಈ ಬಾರಿ ಕೂಡ ಪಾಲ್ಗೊಳ್ಳಲಿದೆ. ಆಸ್ಪ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಪ್ರೀಮಿಯರ್‌ ಡೊಮಿನಿಕ್‌ ಪೆರ್ರೊಟೆಟ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಆಸ್ಟೇಲಿಯಾ ಸರಕಾರ ದೇಶದ ಆರ್ಥಿಕ ಕಾರ್ಯತಂತ್ರಕ್ಕಾಗಿ 280 ಮಿಲಿಯನ್‌ ಡಾಲರ್‌ ಅನುದಾನ ಒದಗಿಸಿದ್ದು, ಭಾರತದೊಂದಿಗೆ ಆರ್ಥಿಕ ಪಾಲುದಾರಿಕೆಯನ್ನು ವೃದ್ಧಿಸಲು ಈ ಕಾರ್ಯತಂತ್ರ ಸಹಕಾರಿಯಾಗಿದೆ ಎಂದು ಹೇಳಿದರು.

Published On - 2:44 pm, Tue, 8 November 22

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​