ಕನ್ನಡ ರಾಜ್ಯೋತ್ಸವದ (Kannada Rajyotsava) ಪ್ರಯುಕ್ತ ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಮೆಟ್ರೋ ಪ್ರಯಾಣಿಕರು ಟಿಕೆಟ್ ಖರೀದಿಸಲು ಕ್ಯೂನಲ್ಲಿ ನಿಲ್ಲ ಬೇಕಾದ ಅಗತ್ಯವಿಲ್ಲ. ಇಂದಿನಿಂದ ಪ್ರಯಾಣಿಕರಿಗಾಗಿ ನಮ್ಮ ಮೆಟ್ರೋ ವಿಶೇಷ ಕೊಡುಗೆಯೊಂದನ್ನು ನೀಡಿದ್ದು, ಇದರ ಮೂಲಕ ಮೊಬೈಲ್ನಲ್ಲೇ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣ ಬೆಳಸಬಹುದಾಗಿದೆ. ಸಮಯ ಉಳಿತಾಯ ಹಾಗೂ ಚಿಲ್ಲರೆ ಸಮಸ್ಯೆಯನ್ನು ದೂರ ಮಾಡುವ ಉದ್ಧೇಶದಿಂದ ನಮ್ಮ ಮೆಟ್ರೋ ಕ್ಯೂ ಆರ್ ಕೋಡ್ (QR Code) ಮೂಲಕ ಒಳ ಬರುವ ಮತ್ತು ಹೊರ ಹೋಗುವ ಅವಕಾಶವನ್ನು ಪ್ರಯಾಣಿಕರಿಗೆ ಕಲ್ಪಿಸಿದೆ.
ಸ್ಮಾರ್ಟ್ಫೋನ್ ಹೊಂದಿರುವ ಮೆಟ್ರೋ ಪ್ರಯಾಣಿಕರು ಟೋಕನ್ ಖರೀದಿಸುವ ಬದಲು ಕ್ಯೂಆರ್ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ ಓಎಸ್ ಹೊಂದಿರುವ ಮೊಬೈಲ್ನಿಂದ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಇದರಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳಿವೆ. ಜೊತೆಗೆ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ರೀಚಾರ್ಜ್ ಕೂಡ ಮಾಬಹುದು. ಪ್ರಸ್ತುತ ಪ್ರಯಾಣಿಕರ ಸ್ಥಳದ ಹತ್ತಿರವಿರುವ ಮೆಟ್ರೋ ನಿಲ್ದಾಣದ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ ಹಾಗೂ ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ ಇದರಲ್ಲಿ ಸಿಗುತ್ತದೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ನವೆಂಬರ್ 1, 2022 ರಿಂದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. Introduction of Single Journey QR Tickets available on WattsApp & Namma Metro App. pic.twitter.com/mYHSL99YIF
— ನಮ್ಮ ಮೆಟ್ರೋ (@cpronammametro) October 31, 2022
ವಾಟ್ಸ್ಆ್ಯಪ್ ಮೂಲಕ ಕ್ಯೂಆರ್ ಟಿಕೆಟ್ ಪಡೆದುಕೊಳ್ಳುವುದು ಹೇಗೆ?:
ಪ್ರಯಾಣ ಮಾಡದಿದ್ದರೆ ಹಣ ವಾಪಸ್:
ಒಂದು ವೇಳೆ ನೀವು ಟಿಕೆಟ್ ಖರೀದಿಸಿ ಪ್ರಯಾಣ ರದ್ದಾದರೆ ಅದೇ ದಿನ ಟಿಕೆಟ್ ರದ್ದತಿ ವಿಧಾನದ ಮೂಲಕ ಹಣ ಮರುಪಾವತಿ ಪಡೆಯಲು ಸಂಸ್ಥೆ ಅವಕಾಶ ಕಲ್ಪಿಸಿದೆ. ಮನೆಯಲ್ಲೇ ಕುಳಿತು ಕ್ಯೂ ಆರ್ ಕೋಡ್ ಟಿಕೆಟ್ ಸಿದ್ಧಪಡಿಸಿಕೊಂಡು ಬಂದು, ಅದನ್ನು ನಿಲ್ದಾಣದ ಪ್ರವೇಶ ಗೇಟ್‌ನಲ್ಲಿ ಸ್ಕ್ಯಾನ್ ಮಾಡಿ ಒಳಹೋಗಬಹುದು. ಡಿಜಟಲೀಕರಣ ಉತ್ತೇಜಿಸುವ ಸಂಬಂಧ ಟಿಕೆಟ್ ಪಡೆಯುವವರಿಗೆ ಶೇ. 5ರಷ್ಟು ರಿಯಾಯಿತಿ ಕೂಡ ದೊರೆಯುತ್ತದೆ.
Published On - 12:43 pm, Tue, 1 November 22