Mi Clearance sale: ಕೇವಲ 3,999 ರೂ. ಗೆ ಖರೀದಿಸಿ ರೆಡ್ಮಿಯ ಈ ಸ್ಮಾರ್ಟ್‌ಫೋನ್
Xiaomi Sale: ರೆಡ್ಮಿ 6A ಸ್ಮಾರ್ಟ್ಫೋನ್ನ ಮೂಲಬೆಲೆ 2GB RAM + 16GB ಸ್ಟೋರೇಜ್ ಸಾಮರ್ಥ್ಯಕ್ಕೆ 6,999 ರೂ. ಇದೆ. ಆದರೀಗ ಎಮ್ಐ ಕ್ಲೀಯರೆನ್ಸ್ ಸೇಲ್ನಲ್ಲಿ ಈ ಫೋನನ್ನು ನೀವು ಕೇವಲ 3999 ರೂ. ಗೆ ಪಡೆದುಕೊಳ್ಳಬಹುದು.
ಕೇವಲ 5000 ರೂ. ಒಳಗೆ ಆಕರ್ಷಕ ಸ್ಮಾರ್ಟ್‌ಫೋನ್ ಸಿಗುತ್ತದೆ ಎಂದರೆ ನಂಬುತ್ತೀರಾ, ನಂಬಲೇಬೇಕು. ಯಾಕೆಂದರೆ ಶವೋಮಿ ಕಂಪನಿ ಎಮ್ಐ ಕ್ಲೀಯರೆನ್ಸ್ ಸೇಲ್ (Mi clearance sale) ಎಂಬ ಹೊಸ ಮೇಳವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಅತ್ಯಂತ ಕಡಿಮೆ ಬೆಲೆಗೆ ರೆಡ್ಮಿ ಮೊಬೈಲ್ಗಳು ಮಾರಾಟ ಆಗುತ್ತಿದೆ. ಈ ಸೇಲ್ನಲ್ಲಿ ರೆಡ್ಮಿಯ ಕೆಲ ಸ್ಮಾರ್ಟ್ಫೋನ್ಗಳು (Smartphone) ಅರ್ಧ ಬೆಲೆಗೆ ಖರೀದಿಸಬಹುದು. ಮುಖ್ಯವಾಗಗಿ ರೆಡ್ಮಿ 6 ಎ (Redmi 6A) ಸ್ಮಾರ್ಟ್ಫೋನನ್ನು ನೀವು ಕೇವಲ 3,999 ರೂ. ಗೆ ಖರೀದಿ ಮಾಡಬಹುದು.
ರೆಡ್ಮಿ 6A ಸ್ಮಾರ್ಟ್ಫೋನ್ನ ಮೂಲಬೆಲೆ 2GB RAM + 16GB ಸ್ಟೋರೇಜ್ ಸಾಮರ್ಥ್ಯಕ್ಕೆ 6,999 ರೂ. ಇದೆ. ಆದರೀಗ ಎಮ್ಐ ಕ್ಲೀಯರೆನ್ಸ್ ಸೇಲ್ನಲ್ಲಿ ಈ ಫೋನನ್ನು ನೀವು ಕೇವಲ 3999 ರೂ. ಗೆ ಪಡೆದುಕೊಳ್ಳಬಹುದು. ಇದರ ಜೊತೆಗೆ ರೆಡ್ಮಿ ನೋಟ್ 4, ರೆಡ್ಮಿ Y1 ಲೈಟ್ ಹಾಗೂ ರೆಡ್ಮಿ Y2 ಸ್ಮಾರ್ಟ್ಫೋನ್ಗಳು 5000 ರೂ. ಒಳಗಡೆ ಮಾರಾಟ ಆಗುತ್ತಿದೆ.
ಅಂತೆಯೆ 8999 ರೂ. ಬೆಲೆಯ ರೆಡ್ಮಿ A1 ಸ್ಮಾರ್ಟ್‌ಫೋನ್ ಕೇವಲ 6,499 ರೂ. ಗೆ ಸೇಲ್ ಆಗುತ್ತಿದೆ. ಇದು ಇದು 1600*720 ಪಿಕ್ಸೆಲ್ ರೆಸಲೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್ ಡಾಟ್ ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಡಾರ್ಕ್ ಮೋಡ್ ಮತ್ತು ನೈಟ್ ಮೋಡ್ ಆಯ್ಕೆ ನೀಡಲಾಗಿದೆ. ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದುಕೊಂಡಿದೆ. 1TB ವರೆಗೆ ಮೈಕ್ರೊ ಎಸ್ಡಿ ಕಾರ್ಡ್ ಅನ್ನು ವಿಸ್ತರಿಸಬಹುದಾಗಿದೆ.
ಈ ಸ್ಮಾರ್ಟ್ಫೋನ್ನಲ್ಲಿ 8 ಮೆಗಾಫಿಕ್ಸೆಲ್ನ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಮುಂಭಾಗ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್ನೊಂದಿಗೆ ಬರುತ್ತದೆ. 30 ದಿನಗಳ ಸ್ಟ್ಯಾಂಡ್ ಬೈ ಟೈಮ್ ಎಂದು ಕಂಪನಿ ಹೇಳಿಕೊಂಡಿದೆ.
ರೆಡ್ಮಿ A1 ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ v5.0, ಹೆಡ್ಫೋನ್ ಜ್ಯಾಕ್, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಎರಡು ಸಿಮ್ ಅನ್ನು ಸಪೋರ್ಟ್ ಮಾಡುತ್ತದೆ. ವಿಶೇಷವಾಗಿ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.