AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus Nord CE: ಕಿಸೆಯಲ್ಲಿದ್ದ ಒನ್‌ಪ್ಲಸ್ ನಾರ್ಡ್ CE ಸ್ಮಾರ್ಟ್​ಫೋನ್ ಸ್ಪೋಟ: ಪ್ರಾಣಾಪಾಯದಿಂದ ಪಾರು

Smartphone Blast: ದುಷ್ಯಂತ್ ಗೋಸ್ವಾಮಿ ಎಂಬವರು ಒನ್‌ಪ್ಲಸ್ ನಾರ್ಡ್ CE ಫೋನನ್ನು ಆರು ತಿಂಗಳ ಹಿಂದೆ ಖರೀದಿಸಿದ್ದರಂತೆ. ತನ್ನ ಸ್ಮಾರ್ಟ್​ಫೋನ್ ಸ್ಪೋಟಗೊಂಡಿರುವ ಬಗ್ಗೆ ಗೋಸ್ವಾಮಿ ಅವರು ಟ್ವಟ್ಟರ್ ಮತ್ತು ಲಿಂಕ್ಡಿನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

OnePlus Nord CE: ಕಿಸೆಯಲ್ಲಿದ್ದ ಒನ್‌ಪ್ಲಸ್ ನಾರ್ಡ್ CE ಸ್ಮಾರ್ಟ್​ಫೋನ್ ಸ್ಪೋಟ: ಪ್ರಾಣಾಪಾಯದಿಂದ ಪಾರು
OnePlus Nord CE
TV9 Web
| Updated By: Vinay Bhat|

Updated on:Jan 10, 2022 | 2:15 PM

Share

ಮೊಬೈಲ್ ಫೋನ್ ಎಂಬುದು ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಜನ ಊಟ ನಿದ್ದೆಯನ್ನಾದರೂ ಬಿಟ್ಟಾರು ಆದರೆ ಮೊಬೈಲ್ ಫೋನ್‌ನನ್ನು ಬಿಟ್ಟಿರಲಾಗದಂತಹ ಪರಿಸ್ಥಿತಿ ಈಗ ಇದೆ. ಆದರೆ, ಈ ಫೋನ್‌ಗಳಿಂದ ಲಾಭದಷ್ಟೇ ಹಾನಿ ಕೂಡಾ ಅಷ್ಟೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಇತ್ತೀಚೆಗೆ ಒನ್​ಪ್ಲಸ್ ಕಂಪನಿಯ ಸ್ಮಾರ್ಟ್​ಫೋನ್​ಗಳು ಸ್ಫೋಟಗೊಳ್ಳುತ್ತಿರುವ ಪ್ರಕರಣದ ಬಗ್ಗೆ ನೀವು ಕೇಳಿರಬಹುದು. ಕೆಲವು ತಿಂಗಳ ಹಿಂದೆ ದೆಹಲಿ ಮೂಲದ ವಕೀಲರ ಒನ್​ಪ್ಲಸ್ ನಾರ್ಡ್ 2 5G (OnePlus Nord 2 5G) ಸ್ಮಾರ್ಟ್‌ಪೋನ್ ಅವರ ಜೇಬಿನಲ್ಲಿಯೇ ಸ್ಫೋಟಗೊಂಡ ಬಗ್ಗೆ ವರದಿಯಾಗಿತ್ತು. ಇದೀಗ ಒನ್‌ಪ್ಲಸ್ ನಾರ್ಡ್ CE ಫೋನ್ (OnePlus Nord CE) ಬ್ಲಾಸ್ಟ್ ಆಗಿರುವುದು ವರಿದಯಾಗಿದೆ.

ದುಷ್ಯಂತ್ ಗೋಸ್ವಾಮಿ ಎಂಬವರು ಈ ಫೋನನ್ನು ಆರು ತಿಂಗಳ ಹಿಂದೆ ಖರೀದಿಸಿದ್ದರಂತೆ. ತನ್ನ ಸ್ಮಾರ್ಟ್​ಫೋನ್ ಸ್ಪೋಟಗೊಂಡಿರುವ ಬಗ್ಗೆ ಗೋಸ್ವಾಮಿ ಅವರು ಟ್ವಟ್ಟರ್ ಮತ್ತು ಲಿಂಕ್ಡಿನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೀಗ ಒನ್​ಪ್ಲಸ್ ಕಂಪನಿ ಹೊಸ ಫೋನ್ ಕಳುಹಿಸುವುದಾಗಿ ಹೇಳಿದ ಕಾರಣ ಗೋಸ್ವಾಮಿ ಅವರು ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

“ಒನ್​ಪ್ಲಸ್ ಕಂಪನಿಯವರು ನನಗೆ ಕರೆ ಮಾಡಿ ಹೊಸ ಫೋನ್ ಕಳುಹಿಸುವುದಾಗಿ ಹೇಳಿದ್ದಾರೆ”, ಎಂದು ಗೋಸ್ವಾಮಿ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಒನ್​ಪ್ಲಸ್ ಕಂಪನಿ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಗೋಸ್ವಾಮಿ ಅವರ ಬ್ಲಾಸ್ಟ್ ಆದ ಒನ್‌ಪ್ಲಸ್ ನಾರ್ಡ್ CE ಫೋನ್ ಸಂಪೂರ್ಣ ಹೊತ್ತಿ ಹೋಗಿತ್ತು. ಡಿಸ್​ಪ್ಲೇ, ಬ್ಯಾಕ್ ಪ್ಯಾನೆಲ್, ಬ್ಯಾಟರಿ ಎಲ್ಲ ಭಸ್ಮವಾಗಿತ್ತು.

ಬ್ಲಾಸ್ಟ್ ಆಗಲು ಕಾರಣವೇನು?:

ಈಗೀಗ ಬಿಡುಗಡೆ ಆಗುತ್ತಿರುವ ಹೆಚ್ಚಿನ ಸ್ಮಾರ್ಟ್ ಫೋನ್ ಅಧಿಕ ರೇಡಿಯೇಷನ್​ಗಳಿಂದ ಕೂಡಿರುತ್ತವೆ. ಕೆಲವೊಮ್ಮೆ ಸ್ಮಾರ್ಟ್ ಫೋನ್ ಅಧಿಕ ಬಿಸಿ ಆಗಿ ಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ. ಬಿಸಿ ಆಗುವ ಈ ಸಮಸ್ಯೆ ಕೇವಲ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಹೆಚ್ಚಾಗಿರುತ್ತದೆ. ಏಕೆಂದರೆ, ಕಂಪ್ಯೂಟರ್ , ಲ್ಯಾಪ್‌ಟಾಪ್ ಅಥವಾ ಇನ್ನಿತರ ದೊಡ್ಡ ದೊಡ್ಡ ಡಿವೈಸ್‌ಗಳಲ್ಲಿ ಕೂಲಿಂಗ್ ಫ್ಯಾನ್ ಅಳವಡಿಸಲಾಗಿರುತ್ತದೆ. ಆದರೆ ಫೋನ್‌ಗೆ ಆ ಸೌಲಭ್ಯವಿಲ್ಲದೆ ಇರುವುದರಿಂದ ಸ್ಮಾರ್ಟ್‌ಫೋನ್‌ ಹೆಚ್ಚು ಬಿಸಿಯಾಗುತ್ತದೆ.

ಇದರ ಜೊತೆಗೆ ಕಳಪೆ ಚಾರ್ಜರ್ ಬಳಕೆ ಮಾಡಿದರೂ ತೊಂದರೆಗೆ ಸಿಲುಕಬಹುದು. ಸ್ಮಾರ್ಟ್‌ಫೋನ್ ಬ್ಯಾಟರಿಗೆ ವಿದ್ಯುತ್ ಪೂರೈಕೆ ಮಾಡುವ ಚಾರ್ಜರ್ ಕೂಡ ಅತ್ಯುತ್ತಮದ್ದಾಗಿರಬೇಕು. ಇಲ್ಲವಾದರೆ, ಸರಿಯಾದ ವಿದ್ಯುತ್ ಪ್ರವಾಹವಿಲ್ಲದೇ ಸ್ಮಾರ್ಟ್‌ಫೋನ್ ಬ್ಯಾಟರಿ ಸೆಲ್‌ಗಳು ಹೆಚ್ಚು ಸಂಕುಚಿತ ಅಥವಾ ವಿಕಸಿತಗೊಂಡು ಫೋನ್ ಬಿಸಿಯಾಗುತ್ತದೆ. ಹಾಗಾಗಿಯೇ, ಉತ್ತಮ ಚಾರ್ಜರ್ ಆದರೂ ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ ಎಂದು ಮೊಬೈಲ್ ತಜ್ಞರು ಹೇಳುವುದು.

ನಾವು ಬಹಳ ಸಮಯ Wi-Fi ಮತ್ತು ಹಾಟ್‌ಸ್ಪಾಟ್ ಬಳಸಿದರೆ ನಮ್ಮ ಮೊಬೈಲ್ ಬಿಸಿಯಾಗುವ ಸಂಭವ ಹೆಚ್ಚಿರುತ್ತದೆ. ಇದು ಅನೇಕರ ಗಮನಕ್ಕೆ ಬಂದಿರಬಹುದು. ಈ ಎರಡೂ ಫೀಚರ್‌ಗಳಿಂದ ಮೊಬೈಲ್ ಹೊರಗೆ ಹೆಚ್ಚು ರೇಡಿಯೇಷನ್‌ಗಳು ಬಿಡುಗಡೆಯಾಗುವುದರಿಂದ ಮೊಬೈಲ್ ಬಿಸಿಯಾಗುತ್ತದೆ, ಬಳಿಕ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

Realme GT Neo 2: ಹೊಸ ಫೋನ್ ಬೇಕಿದ್ದರೆ ಇದನ್ನೇ ಖರೀದಿಸಿ: ರಿಯಲ್​​ಮಿ GT ನಿಯೋ 2 ಮೇಲೆ ಆಕರ್ಷಕ ಡಿಸ್ಕೌಂಟ್

Published On - 2:12 pm, Mon, 10 January 22

ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ