ಮೋಟೋರೊಲಾ (Motorola) ಕಂಪನಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಬಜೆಟ್ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಫೋನ್ಗಳನ್ನು ತಯಾರು ಮಾಡುತ್ತಿರುವ ಮೋಟೋ ಕಂಪನಿಯ ಪೋನ್ಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ತನ್ನ E ಸರಣಿಯಲ್ಲಿ ಮೋಟೋ E32s ಎಂಬ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಗೆ ಅನಾವರಣ ಮಾಡಿ ಸದ್ದು ಮಾಡಿದ್ದ ಕಂಪನಿ ಇದೀಗ ಇದೇ ಸರಣಿಯಡಿಯಲ್ಲಿ ಮೋಟೋ ಇ13 (Moto E13) ಫೋನನ್ನು ರಿಲೀಸ್ ಮಾಡಲು ಸಿದ್ಧವಾಗಿದೆ. ಇಂದು ಈ ಸ್ಮಾರ್ಟ್‌ಫೋನ್ (Smartphone) ಭಾರತದಲ್ಲಿ ಬಿಡುಗಡೆ ಆಗಲಿದ್ದು, ಇದುಕೂಡ ಅತ್ಯಂತ ಕಡಿಮೆ ಬೆಲೆ ಹೊಂದಿರಲಿದೆ ಎಂದು ಹೇಳಲಾಗಿದೆ.
ಮೋಟೋ E13 ಸ್ಮಾರ್ಟ್ಫೋನ್ನ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದರ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆಯ ಬೆಲೆ 7,000 ರೂ. ಒಳಗಡೆ ಇರಲಿದೆ ಎನ್ನಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಕಾಣಲಿದ್ದು ಟೀಸರ್ ಬಿಡುಗಡೆ ಮಾಡಿದೆ. ಈ ಫೋನಿನ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ಮಾತ್ರ ಇರುವುದು ಟೀಸರ್ನಿಂದ ತಿಳಿದುಬಂದಿದೆ. ಮುಂಭಾಗದ ಪ್ಯಾನೆಲ್ ವಾಟರ್ಡ್ರಾಪ್ ಸ್ಟೈಲ್ನಲ್ಲಿದೆ.
ಈ ಸ್ಮಾರ್ಟ್‌ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ IPS LCD ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು 90Hz ರಿಫ್ರೆಶ್ ರೇಟ್ನಿಂದ ಕೂಡಿರಬಹುದು. ಆಕ್ಟಾ-ಕೋರ್ T606 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 OS ಜೊತೆಗೆ ರನ್ ಆಗಲುತ್ತಿದ್ದು 1TB ವರೆಗೆ ಮೆಮೋರಿಯನ್ನು ಹೆಚ್ಚಿಸಬಹುದಾಗಿದೆ.
Best Smartphones: 15,000 ರೂ. ಒಳಗೆ ಸಿಗುತ್ತಿರುವ ಆಕರ್ಷಕ ಕ್ಯಾಮೆರಾದ ಬೆಸ್ಟ್ 5 ಸ್ಮಾರ್ಟ್ಫೋನ್ಸ್ ಇಲ್ಲಿದೆ ನೋಡಿ
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಮೋಟೋ E13 ಸ್ಮಾರ್ಟ್‌ಫೋನ್ ಸಿಂಗಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ 30fps ಫುಲ್ HD ವಿಡಿಯೋವನ್ನು ರೆಕಾರ್ಡಿಂಗ್ ಮಾಡಬಹುದು. ಜೊತೆಗೆ ಪನೋರಮ, ಪೋಟ್ರೆಟ್, ನೈಟ್ ವರ್ಷನ್, ಡ್ಯುಯೆಲ್ ಕಾಪ್ಚರ್, ಲೈವ್ ಫಿಲ್ಟರ್ ಸೇರಿದಂತೆ ಅನೇಕ ಆಯ್ಕೆಗಳಿವೆ.
ಮೋಟೋ E13 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿದೆ. ಇದು 10W ಚಾರ್ಜಿಂಗ್ ವೇಗವನ್ನು ಬೆಂಬಲಿಸಬಹುದು ಎನ್ನಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್, ವೈಫೈ, ಬ್ಲೂಟೂತ್ v5.0 ಬೆಂಬಲ ಪಡೆದುಕೊಂಡಿದೆ. ಇದು 5ಜಿ ಬೆಂಬಲ ಪಡೆದುಕೊಂಡಿಲ್ಲ ಬದಲಾಗಿ 4G VoLTE ಸಪೋರ್ಟ್ ಮಾಡುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ನೊಂದಿಗೆ ಮಾರುಕಟ್ಟೆಗೆ ಬರಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ