ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಇದಕ್ಕಾಗಿಯೆ ಈ ಹಿಂದೆ ಬಿಡುಗಡೆ ಮಾಡಿದ್ದ ಮೋಟೋ ಜಿ ಪವರ್ನ (Moto G Power) ಉತ್ತರಾಧಿಕಾರಿಯಾಗಿ ಹೊಸ 5ಜಿ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಿದೆ. ಯುಎಸ್ ಮಾರುಕಟ್ಟೆಯಲ್ಲಿ ಇಂದು ಮೋಟೋರೊಲಾ ಹೊಸ ಮೋಟೋ ಜಿ ಪವರ್ 5ಜಿ (Moto G Power 5G) ಅನ್ನು ಬಿಡುಗಡೆ ಮಾಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 5,000mAh ಸಾಮರ್ಥ್ಯದ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ನಿಂದ ಈ ಫೋನ್ ಆವೃತ್ತವಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ಮೋಟೋ G ಪವರ್ 5ಜಿ ಸ್ಮಾರ್ಟ್‌ಫೋನ್ US ನಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 6GB RAM ಮತ್ತು 256GB ರೂಪಾಂತರದ ಆಯ್ಕೆಗೆ $299.99, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 24,500 ರೂ. ಎನ್ನಬಹುದು. ಮೋಟೋರೊಲಾದ ಅಧಿಕೃತ ವೆಬ್ಸೈಟ್ ಮತ್ತು ಯುಎಸ್ನ ಅಮೆಜಾನ್ ತಾಣದಲ್ಲಿ ಈ ಫೋನ್ ಸೇಲ್ ಕಾಣಲಿದೆ. ಭಾರತ ಸೇರಿದಂತೆ ಇತರ ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ.
Acer Aspire 3 15: ಜನಸಾಮಾನ್ಯರ ಬಳಕೆಗೆ ಸೂಕ್ತ ಏಸರ್ ಲ್ಯಾಪ್ಟಾಪ್
ಫೀಚರ್ಸ್ ಏನಿದೆ?:
ಮೋಟೋ G ಪವರ್ 5G ಸ್ಮಾರ್ಟ್‌ಪೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ IPS LCD ಸ್ಕ್ರೀನ್ನಿಂದ ಕೂಡಿದೆ. 120Hz ರಿಫ್ರೆಶ್ರೇಟ್ ನೀಡಲಾಗಿದೆ. ಮೀಡಿಯಾಟೆಕ್ ಡೈಮನ್ಸಿಟಿ 930 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಪಡೆದಿದೆ. ಇದರಲ್ಲಿರುವ ಕ್ಯಾಮೆರಾ ಡ್ಯುಯೆಲ್ ಕ್ಯಾಪ್ಚರ್, ಸ್ಪಾಟ್ ಕಲರ್, ಟೈಮ್ಲಾಪ್ಸ್, ಸ್ಲೋ ಮೋಶನ್ ಸೇರಿದಂತೆ ಅನೇಕ ಆಯ್ಕೆಗಳಿವೆ. 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.
5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11, ಬ್ಲೂಟೂತ್ v5.3, GPS/ A-GPS, ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆ ಸೇರಿಸಲಾಗಿದೆ. ಸೈಡ್- ಮೌಂಟೆಡ್ ಸೆನ್ಸಾರ್ ಫಿಂಗರ್ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Fri, 7 April 23