Moto G60S: 6000mAh ಬ್ಯಾಟರಿ, 50W ಟರ್ಬೋ ಚಾರ್ಜ್: ಮೋಟೋದಿಂದ ಜಿ60ಎಸ್ ಫೋನ್ ಬಿಡುಗಡೆ: ಬೆಲೆ?

| Updated By: Vinay Bhat

Updated on: Aug 13, 2021 | 12:07 PM

64 ಮೆಗಾಫಿಕ್ಸೆಲ್ ಕ್ಯಾಮೆರಾ, 6000mAh ಬ್ಯಾಟರಿ ಜೊತೆ 50Wನ ಟರ್ಬೋ ಚಾರ್ಜಿಂಗ್ ಬೆಂಬಲ ಇರುವ ಮೋಟೋ ಜಿ60ಎಸ್ ಸ್ಮಾರ್ಟ್​ಫೋನ್ ಸದ್ಯಕ್ಕೆ ಬ್ರೆಜಿಲ್‌ನಲ್ಲಿ ಲಾಂಚ್ ಆಗಿದೆ. ಸದ್ಯದಲ್ಲೇ ಇದು ಭಾರತದಲ್ಲೂ ಬಿಡುಗಡೆ ಆಗುವ ಸಾಧ್ಯತೆ ಇದೆ.

Moto G60S: 6000mAh ಬ್ಯಾಟರಿ, 50W ಟರ್ಬೋ ಚಾರ್ಜ್: ಮೋಟೋದಿಂದ ಜಿ60ಎಸ್ ಫೋನ್ ಬಿಡುಗಡೆ: ಬೆಲೆ?
Moto G60S
Follow us on

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ರೆಡ್ಮಿ, ಎಂಐ, ಸ್ಯಾಮ್​ಸಂಗ್, ರಿಯಲ್​ ಮಿಯಂತಹ ದೊಡ್ಡ ಮೊಬೈಲ್ ತಯಾರಿಕಾ ಸಂಸ್ಥೆಗಳ ನಡುವೆ ಮೋಟೋರೊಲಾ (Motorola) ಕಂಪೆನಿ ತನ್ನದೆ ಆದ ವಿಶೇಷ ಸ್ಥಾನ ಪಡೆದುಕೊಂಡಿದೆ. ಪ್ರಮುಖವಾಗಿ ಮೋಟೋ ತನ್ನ G ಸರಣಿಯಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಅದೇ ಸರಣಿಯಲ್ಲಿ ಹೊಸದಾಗಿ ಮೋಟೋ G60s (Moto G60S) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ.

64 ಮೆಗಾಫಿಕ್ಸೆಲ್ ಕ್ಯಾಮೆರಾ, 6000mAh ಬ್ಯಾಟರಿ ಜೊತೆ 50Wನ ಟರ್ಬೋ ಚಾರ್ಜಿಂಗ್ ಬೆಂಬಲ ಇರುವ ಮೋಟೋ ಜಿ60ಎಸ್ ಸ್ಮಾರ್ಟ್​ಫೋನ್ ಸದ್ಯಕ್ಕೆ ಬ್ರೆಜಿಲ್‌ನಲ್ಲಿ ಲಾಂಚ್ ಆಗಿದೆ. ಸದ್ಯದಲ್ಲೇ ಇದು ಭಾರತದಲ್ಲೂ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಲಭ್ಯವಿದೆ. 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆಯು ಬ್ರೆಜಿಲ್‌ನಲ್ಲಿ BRL 2,249. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 32,000 ರೂ. ಎನ್ನಲಾಗಿದೆ.

ಏನು ವಿಶೇಷತೆ?:

ಮೋಟೋ G60s ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್‌ ಪಡೆದಿದ್ದು, 6.8 ಇಂಚಿನ ಮ್ಯಾಕ್ಸ್‌ ವಿಜನ್ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಪಡೆದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೀ G95 SoC ಪ್ರೊಸೆಸರ್‌ ವೇಗದಿಂದ ಕೂಡಿದ್ದು, ಆಂಡ್ರಾಯ್ಡ್‌ 11 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇನ್ನೂ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ನಲ್ಲಿದೆ ಹಾಗೂ ನಾಲ್ಕನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.

ವಿಶೇಷ ಎಂದರೆ ಈ ಸ್ಮಾರ್ಟ್​ಫೋನ್ ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ 50W ಸಾಮರ್ಥ್ಯದ ಟರ್ಬೋ ಪವರ್ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಆನ್‌ಬೋರ್ಡ್‌ನಲ್ಲಿರುವ ಸೆನ್ಸರ್‌ಗಳು ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಸೇರಿದಂತೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

Samsung Galaxy: ಮಡಚಿದರೆ ಫೋನ್‌, ಬಿಡಿಸಿದರೆ ಸ್ಮಾರ್ಟ್​ಫೋನ್: ಇದು ಸ್ಯಾಮ್​ಸಂಗ್​ನ ಹೊಸ ಮೊಬೈಲ್

ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

(Moto G60S with 6000 mAh Battery TurboPower 50W charging launched price specs here)