ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ನಡುವೆ ತನ್ನದೇ ಆದ ವಿಶೇಷ ಸ್ಥಾನ ಸ್ಥಾಪಿಸಿರುವ ಮೋಟೋರೊಲಾ ಕಂಪನಿ ಇದೀಗ ಭಾರತದಲ್ಲಿ ವಿಶೇಷವಾದ ಫೋನೊಂದನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇಂದು ದೇಶದಲ್ಲಿ ಮೋಟೋ ಕಂಪನಿ ತನ್ನ ಹೊಸ ಮೋಟೋರೊಲಾ ಎಡ್ಜ್ 30 ಅಲ್ಟ್ರಾ (Motorola Edge 30 Ultra) ಸ್ಮಾರ್ಟ್‌ಫೋನ್ ಅನಾವರಣ ಮಾಡಲಿದೆ. ಈ ಫೋನಿನ ಪ್ರಮುಖ ವಿಶೇಷತೆ ಕ್ಯಾಮೆರಾ ಆಗಿದ್ದು, ಇದು ವಿಶ್ವದ ಮೊಟ್ಟ ಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಫೋನಾಗಿದೆ. ಜೊತೆಗೆ ಅತ್ಯಂತ ವೇಗದ 125W ಫಾಸ್ಟ್ ಚಾರ್ಜರ್ ಅಳವಡಿಸಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಹಾಗೂ ಸಂಪೂರ್ಣ ಫೀಚರ್ ಬಗ್ಗೆ ನೋಡೋಣ.
ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇದರ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ ಭಾರತದಲ್ಲಿ ಅಂದಾಜು 75,000 ರೂ. ಆಸುಪಾಸು ಇರಬಹುದು.
Introducing the all-new #motoroaledge30ultra! The World’s First* 200MP Camera Smartphone gives Unmatched Resolution & Unmatched Picture Quality. Experience the fastest Snapdragon 8+ Gen1, 125W charging & more. Launching 13th Sept. on @Flipkart and retail stores!
— Motorola India (@motorolaindia) September 9, 2022
ಮೋಟೋ ಎಡ್ಜ್ 30 ಅಲ್ಟ್ರಾ ಫೀಚರ್ಗಳ ಬಗ್ಗೆ ನೋಡುವುದಾದರೆ, ಇದು 6.67 ಇಂಚಿನ ಫುಲ್ ಹೆಚ್ಡಿ+ pOLED ಡಿಸ್‌ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ರೇಟ್ನಿಂದ ಕೂಡಿದ್ದು ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಸ್ನಾಪ್‌ಡ್ರಾಗನ್ ಎಲೈಟ್ ಗೇಮಿಂಗ್ ಫೀಚರ್ ಕೂಡ ಅಳವಡಿಸಲಾಗಿದೆ.
ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದು f/1.9 ಅಪಾರ್ಚರ್ ಲೆನ್ಸ್ನಿಂದ ಕೂಡಿದೆ. ಎರಡನೇ ಕ್ಯಾಮೆರಾ 50 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಬೃಹತ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.ಇದರಲ್ಲಿ ಪ್ರಾಥಮಿಕ ಕ್ಯಾಮರಾ OIS ಬೆಂಬಲವನ್ನು ಪಡೆದುಕೊಂಡಿದೆ.
ದೀರ್ಘ ಸಮಯ ಬಾಳಿಕೆ ಬರುವ ಬಲಿಷ್ಠ 4610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 125W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಈ ಮೂಲಕ ಕೆಲವೇ ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಕಂಪನಿ ಹೇಳಿರುವ ಪ್ರಕಾರ 7 ನಿಮಿಷ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಉಪಯೋಗಿಸಬಹುದಂತೆ.