ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಯಾವುದೇ ಮೇಳ ನಡೆಯುತ್ತಿಲ್ಲ. ನಾಳೆಯಿಂದ (ಜೂನ್ 10) ಬಿಗ್ ಸೇವಿಂಗ್ ಡೇಸ್ ಸೇಲ್ ಆಯೋಜಿಸಲಾಗಿದೆ. ಹೀಗಿದ್ದರೂ ಇಂದು ಕೆಲ ಸ್ಮಾರ್ಟ್ಫೋನ್ಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿಯ ಮೋಟೋ ಜಿ13 (Moto G13) ಸ್ಮಾರ್ಟ್‌ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಹಾಗಾದರೆ, ಈ ಫೋನ್ ಎಷ್ಟು ದರಕ್ಕೆ ಸೇಲ್ ಆಗುತ್ತಿದೆ?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಆಫರ್ ಏನು?:
ಮೋಟೋ G13 ಸ್ಮಾರ್ಟ್ಫೋನಿನ 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಮೇಲೆ ಶೇ. 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್‌ಫೋನ್ ಕೇವಲ 9,999 ರೂ. ಗೆ ಮಾರಾಟ ಕಾಣುತ್ತಿದೆ. ಇದರ ಮೂಲಬೆಲೆ 13,999 ರೂ. ಆಗಿದೆ. ಜೊತೆಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್ ದೊರೆಯುತ್ತದೆ. ಎಕ್ಸ್‌ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದೆ.
Vivo V29 Lite 5G: ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್, 64 MP ಕ್ಯಾಮೆರಾ ಕ್ರೇಜಿ ಫೋನ್
ಫೀಚರ್ಸ್ ಏನಿದೆ?:
ಈ ಸ್ಮಾರ್ಟ್‌ಫೋನ್ 6.5 ಇಂಚಿನ ಐಪಿಎಸ್ ಎಲ್ಸಿಡಿ ಹೆಚ್‌ಡಿ+ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದ್ದು, 576Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ. 90Hz ರಿಫ್ರೆಶ್ ರೇಟ್ ಇರುವ ಪಾಂಡ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದೆ. ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ನಲ್ಲಿ ರನ್ ಆಗುತ್ತದೆ. ಸ್ಟೋರೇಜ್ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್ ಸ್ಲಾಟ್ ಇದೆ.
ಮೊಟೊ G13 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕಲರ್ ಚೇಂಜಿಂಗ್ ಸೇರಿದಂತೆ ಕೆಲ ಬೇಸಿಕ್ ಆಯ್ಕೆಗಳನ್ನು ಕ್ಯಾಮೆರಾದಲ್ಲಿ ನೀಡಲಾಗಿದೆ.
ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಭರ್ತಿ ಆಗಿದ್ದು, 10W ಚಾರ್ಜಿಂಗ್ ಬೆಂಬಲ ಪಡೆದಿದೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಹೊಂದಿದ್ದು, ಚಾರ್ಜಿಂಗ್ ಗಾಗಿ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ. 5ಜಿ ಸಪೋರ್ಟ್ ಪಡೆದಿಲ್ಲ. 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್ ಹೊಂದಿದ್ದು, 3.5 ಎಂಎಂ ಆಡಿಯೊ ಜಾಕ್ ಇದೆ.
Published On - 3:33 pm, Fri, 9 June 23