ತಂತ್ರಜ್ಞಾನ (Technology) ದಿನದಿಂದ ದಿನಕ್ಕೆ ಹೊಸ ನೆಲೆಯಲ್ಲಿ ಮುಂದುವರೆಯುತ್ತಿದೆ. ನೂತನ ಆವಿಷ್ಕಾರಗಳಿಂದ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಅದರಲ್ಲೂ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆವೇ ಆಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಫೋಲ್ಡಬಲ್ ಫೋನ್ಗಳು ಭರ್ಜರಿ ಸದ್ದು ಮಾಡುತ್ತಿವೆ. ಇದರ ನಡುವೆ ಮತ್ತೊಂದು ಸುದ್ದಿ ಬಂದಿದ್ದು, ಸದ್ಯದಲ್ಲಿ ಮಾರುಕಟ್ಟೆಗೆ ರೋಲ್ ಮಾಡಬಹುದಾದ, ಅಂದರೆ ಫೋಲ್ಡಿಂಗ್ ಫೋನ್ಗಳು ಬರುತ್ತಿವೆ. ಪ್ರಸಿದ್ಧ ಎಲೆಕ್ಟ್ರಾನಿಕ್ ದೈತ್ಯ ಮೋಟೋರೊಲ ಇಂತಹ ಸಾಹಸಕ್ಕೆ ಕೈ ಹಾಕಿದೆ. ಈ ಫೋನ್ ಹೇಗಿರಲಿದೆ? ಇದರ ವೈಶಿಷ್ಟ್ಯಗಳೇನು ನೋಡೋಣ.
ಮೋಟೋರೊಲ ವಾಚ್‌ನಂತೆ ಧರಿಸಬಹುದಾದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮೋಟೋ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ. ಟೆಕ್ ವರ್ಲ್ಡ್ 2023 ಈವೆಂಟ್‌ನಲ್ಲಿ ಮೋಟೋರೊಲದ ಮೂಲ ಕಂಪನಿ ಲೆನೊವೊ ಈ ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶಿಸಿದೆ. ಬಳಕೆದಾರರು ಈ ಫೋನ್ ಅನ್ನು ತಮಗೆ ಇಷ್ಟ ಬಂದಂತೆ ಮಡಚಿಕೊಳ್ಳಬಹುದು. ಅಂದರೆ ಈ ಸ್ಮಾರ್ಟ್‌ಫೋನ್ ಅನ್ನು ಸ್ಮಾರ್ಟ್ ವಾಚ್‌ನಂತೆ ಧರಿಸಬಹುದು.
ರಿಯಲ್ ಮಿ ನಾರ್ಜೊ N53 ಹೊಸ ರೂಪಾಂತರ ಬಿಡುಗಡೆ: ಬೆಲೆ ಕೇವಲ 11,999 ರೂ.
ಇದರಲ್ಲಿ ಪೂರ್ಣ HD+ POLED ಡಿಸ್ ಪ್ಲೇಯನ್ನು ನೀಡಲಾಗಿದೆ. ಇದು 6.9 ಇಂಚಿನದ್ದಾಗಿದ್ದು, ಮಡಿಸಿದಾಗ ಡಿಸ್ ಪ್ಲೇ ಗಾತ್ರವು 4.6 ಇಂಚು ಆಗುತ್ತದೆ. ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಈ ಫೋನ್ ಅನ್ನು ಮಡಚಿಕೊಳ್ಳಬಹುದು. ಈ ಸ್ಮಾರ್ಟ್‌ಫೋನ್ ಕೃತಕ ಬುದ್ಧಿಮತ್ತೆ ಹೊಂದಿರುವ ಕ್ಯಾಮೆರಾವನ್ನು ಕೂಡ ನೀಡಲಾಗಿದೆ ಎಂದು ಹೇಳಲಾಗಿದೆ. ಡಿಸ್ ಪ್ಲೇಯನ್ನು ಎಷ್ಟು ಮಡಚಿದರೂ ಯಾವುದೇ ತೊಂದರೆಯಾಗದಂತೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ.
ಸ್ಮಾರ್ಟ್ ವಾಚ್ ನಂತೆ ಕಾಣುವ ಈ ಫೋನಿನಲ್ಲಿ ಬಳಕೆದಾರರು ತಾವು ಧರಿಸಿರುವ ಡ್ರೆಸ್ನ ಬಣ್ಣಗಳಿಗೆ ಅನುಗುಣವಾಗಿ ತಮ್ಮ ನೆಚ್ಚಿನ ಫೋಟೋಗಳು ಮತ್ತು ವಾಲ್ ಪೇಪರ್ ಅನ್ನು ಸೆಟ್ ಮಾಡಬಹುದು. ಈ ಹ್ಯಾಂಡ್ ಬ್ಯಾಂಡ್ ಅನ್ನು ಫ್ಯಾಷನ್ ವೇರ್ ಆಗಿಯೂ ಬಳಸಬಹುದು. ಮೋಟೋರೊಲ ನಂತರ, ಲೆನೊವೊ ಲ್ಯಾಪ್‌ಟಾಪ್‌ಗಳಲ್ಲಿಯೂ ಈ ಫೋಲ್ಡಬಲ್ ಡಿಸ್ ಪ್ಲೇಯನ್ನು ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆ ಆಗಲಿದೆ, ಯಾವಗ ಖರೀದಿಗೆ ಸಿಗಲಿದೆ ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ