ಮೋಟೋರೊಲಾ ಕಂಪನಿ ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಡ್ಜ್ ಸರಣಿಯ ಸ್ಮಾರ್ಟ್ಫೋನ್ ಪರಿಚಯಿಸುವ ಬಗ್ಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಯಾವ ಫೋನ್ ಎಂಬುದನ್ನು ಉಲ್ಲೇಖಿಸದಿದ್ದರೂ, ಇದು ಮೋಟೋ ಎಡ್ಜ್ 40 ನಿಯೋ (Moto Edge 40 Neo 5G) ಆಗಿದೆ ಎಂದು ಹೇಳಲಾಗಿದೆ. ಈ ಹೊಚ್ಚ ಹೊಸ ಸ್ಮಾರ್ಟ್ಫೋನ್ ಸೆಪ್ಟೆಂಬರ್ 14 ಭಾರತದಲ್ಲಿ ಅನಾವರಣಗೊಳ್ಳಲಿದೆ. ಇದು ಮೋಟೋ ಎಡ್ಜ್ 30 ನಿಯೋ ಫೋನಿನ ಮುಂದಿನ ಆವೃತ್ತಿಯಾಗಿದೆ.
Are you ready to dive into colors? #findyouredge pic.twitter.com/J8L6mmx1t2
— motorola (@Moto) September 6, 2023
ಮೋಟೋ ಎಡ್ಜ್ 40 ನಿಯೋ ಫೋನ್ ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ ಮತ್ತು ಎಲ್ಇಡಿ ಫ್ಲ್ಯಾಷ್ ಇರುವುದು ಖಚಿತವಾಗಿದೆ. ಸ್ಪೀಕರ್ ಗ್ರಿಲ್, ಟೈಪ್-ಸಿ ಪೋರ್ಟ್, ಪ್ರಾಥಮಿಕ ಮೈಕ್ರೊಫೋನ್ ಮತ್ತು ಸಿಮ್ ಟ್ರೇ ವಿಭಾಗವು ಕೆಳಭಾಗದಲ್ಲಿದೆ. ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈಗಾಗೇ ಸೋರಿಕೆ ಆಗಿರುವ ರೆಂಡರ್‌ಗಳನ್ನು ಇದು ಹೋಲುತ್ತದೆ. ಎಫ್‌ಸಿಸಿ ಪ್ರಮಾಣೀಕರಣ ಮತ್ತು ಗೀಕ್‌ಬೆಂಚ್‌ನಲ್ಲಿ ಹ್ಯಾಂಡ್‌ಸೆಟ್ ಗುರುತಿಸಿದ ನಂತರ ಇದು ಬಿಡುಗಡೆ ಆಗುತ್ತದೆ. ಈ ಫೋನಿನ ಬೆಲೆಯು €399 (ಭಾರತದಲ್ಲಿ ಸುಮಾರು 35,900 ರೂ.) ಎನ್ನಲಾಗಿದೆ.
ಡಿಸ್ಪ್ಲೇ: ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ಫೋನ್ 6.55-ಇಂಚಿನ FHD+ ಪೋಲೆಡ್ ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್, ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದೆ.
6,000mAh ಬ್ಯಾಟರಿ, 50MP ಕ್ಯಾಮೆರಾ: ಭಾರತದಲ್ಲಿ ಮೋಟೋ G54 5G ಸ್ಮಾರ್ಟ್ಫೋನ್ ಬಿಡುಗಡೆ
ಪ್ರೊಸೆಸರ್: ಈ ಮೋಟೋರೊಲಾ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1050 SoC ನಿಂದ ರನ್ ಆಗುತ್ತದೆ.
RAM ಮತ್ತು ಸಂಗ್ರಹಣೆ: 12GB RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.
ಓಎಸ್: ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಮೂಲಕ ಬರುವ ಸಾಧ್ಯತೆಯಿದೆ.
ಕ್ಯಾಮೆರಾಗಳು: ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಮೋಟೋ ಎಡ್ಜ್ 40 ನಿಯೋ ಫೋನ್ 50MP ಪ್ರಾಥಮಿಕ ಸಂವೇದಕ ಮತ್ತು 13MP ಸೆಕೆಂಡರಿ ಸಂವೇದಕವನ್ನು ಹೊಂದಿದೆ ಎಂದು ಹೇಳಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಅಳವಡಿಸಲಾಗಿದೆ.
ಬ್ಯಾಟರಿ: 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇರಬಹುದು.
ಸಂಪರ್ಕ: 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS, NFC, ಮತ್ತು USB ಟೈಪ್-C ಪೋರ್ಟ್. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಮತ್ತು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ