Motorola: ಮೋಟೋರೊಲಾ ಕಂಪೆನಿಂದ ಹೊಸ ಏರ್​ ಚಾರ್ಜರ್​: ಇದರಲ್ಲಿದೆ ನೀವು ಊಹಿಸಲಾಗದ ಫೀಚರ್ಸ್

| Updated By: Vinay Bhat

Updated on: Sep 11, 2021 | 3:40 PM

Air Charger: ಕಂಪೆನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಏರ್-ವೈರ್​ಲೆಸ್ ಚಾರ್ಜರ್ 1,600 ಅಂಟೆನಾಗಳನ್ನು ಹೊಂದಿದೆ ಎಂದು ಹೇಳಿದೆ. ಅದಕ್ಕಾಗಿ ಈ ಹಿಂದಿನಕ್ಕಿಂತ ಕೊಂಚ ದೊಡ್ಡಗಾತ್ರದಲ್ಲಿ ಪರಿಚಯಿಸಿದೆ.

Motorola: ಮೋಟೋರೊಲಾ ಕಂಪೆನಿಂದ ಹೊಸ ಏರ್​ ಚಾರ್ಜರ್​: ಇದರಲ್ಲಿದೆ ನೀವು ಊಹಿಸಲಾಗದ ಫೀಚರ್ಸ್
Motorola
Follow us on

ಪ್ರಸಿದ್ಧ ಲೊನೊವೋ (Lenovo) ಒಡೆತನದ ಮೊಬೈಲ್ ತಯಾರಕ ಕಂಪೆನಿ ಮೋಟೋಲಾ (Motorola) ಇದೀಗ ಮಾರುಕಟ್ಟೆಗೆ ಹೊಸ ಏರ್-ವೈರ್​ಲೆಸ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದೆ. ನೂತನ ಚಾರ್ಜರ್​ ವೈರ್ ಸಹಾಯವಿಲ್ಲದೆ 3 ಮೀಟರ್ ದೂರದ ವರೆಗೂ ಸ್ಮಾರ್ಟ್​ಫೋನ್ ಚಾರ್ಜ್ ಆಗುವಂತಹ ಸೌಲಭ್ಯ ನೀಡಿದೆ. ಅಷ್ಟೇ ಅಲ್ಲದೆ ಮೋಟೋರೊಲಾ ಉತ್ಪಾದಿಸಿರುವ ಈ ಏರ್-ವೈರ್​ಲೆಸ್ ಚಾರ್ಜರ್​ನಲ್ಲಿ (Air Charger) ಏಕಕಾಲಕ್ಕೆ ನಾಲ್ಕು ಡಿಪೈಸ್​ಗಳನ್ನು ಚಾರ್ಜ್ ಮಾಡಬಹುದಾದ ಫೀಚರ್ಸ್​ ಅನ್ನು ಹೊಂದಿದೆ.

ಕಂಪೆನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಏರ್-ವೈರ್​ಲೆಸ್ ಚಾರ್ಜರ್ 1,600 ಅಂಟೆನಾಗಳನ್ನು ಹೊಂದಿದೆ ಎಂದು ಹೇಳಿದೆ. ಅದಕ್ಕಾಗಿ ಈ ಹಿಂದಿನಕ್ಕಿಂತ ಕೊಂಚ ದೊಡ್ಡಗಾತ್ರದಲ್ಲಿ ಪರಿಚಯಿಸಿದೆ. ಮೋಟೋರೊಲಾ ಏರ್-ವೈರ್​ಲೆಸ್​ ಚಾರ್ಜಿಂಗ್ ತಂತ್ರಜ್ಞಾನವು ಮೊದಲ ತಲೆಮಾರಿನ ಸ್ಮಾರ್ಟ್​ಫೋನನ್ನು 100 ಸೆಂಟಿ ಮೀಟರ್ ಅಂತರದಲ್ಲಿ ಚಾರ್ಜ್ ಮಾಡುತ್ತದೆ.

ಇನ್ನೂ ಇತ್ತೀಚೆಗಷ್ಟೆ ಶವೋಮಿ ಕಂಪೆನಿ ಕೂಡ ತನ್ನ ಡೆಮೊ ವಿಡಿಯೋದಲ್ಲಿ ಇಂತಹದೇ ಚಾರ್ಜರ್ ಮತ್ತು ಅದರ ವಿಶೇಷತೆಯನ್ನು ಬಹಿರಂಗ ಪಡಿಸಿತ್ತು. ಇದರಲ್ಲಿ 100 ಡಿಗ್ರಿ ಕೋನ್ ಏರಿಯಾದಲ್ಲಿ ಇರಿಸಿ ಚಾರ್ಜ್ ಮಾಡಬಹುದಾದ ವಿಶೇಷ ಸೌಲಭ್ಯ ಹೊಂದಿದೆ.

ಮೋಟೋರೊಲಾ ಪರಿಚಿಯಿಸುವ ಮುನ್ನವೇ ಶವೋಮಿ ಮತ್ತು ಒಪ್ಪೋ ಸಂಸ್ಥೆ ಏರ್-ವೈರ್​ಲೆಸ್ ಚಾರ್ಜರ್​ ಅನ್ನು ಬಿಡುಗಡೆ ಮಾಡಿತ್ತು. ಶವೋಮಿ ಎಂಐ ಏರ್ ಚಾರ್ಜ್ ಮತ್ತು ಒಪ್ಪೋ ವೈಯರ್ ಲೆಸ್ ಏರ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸಿತ್ತು. ಆದರೆ ಇದರಲ್ಲಿ ಒಂದೇ ಸಾಧನವನ್ನು ಮಾತ್ರ ಚಾರ್ಜ್ ಮಾಡಬಹುದಾಗಿತ್ತು. ಶವೋಮಿ ಎಂಐ ಏರ್ ಚಾರ್ಜ್ ಗರಿಷ್ಟ ಎರಡು ಮೀಟರ್ ದೂರದಲ್ಲೂ ಚಾರ್ಜ್ ಮಾಡಬಹುದಾ ಆಯ್ಕೆಯನ್ನು ಹೊಂದಿತ್ತು.

ಆದರೆ, ಸದ್ಯ ಮೋಟೋರೊಲಾ ಕಂಪೆನಿಯ ಹೊಸ ವೈರ್​ಲೆಸ್ ಚಾರ್ಜಿಂಗ್ ವಿಶೇಷತೆಯನ್ನು ಅನಾವರಣಗೊಳಿಸಿದ್ದು, ಈವರೆಗೆ ಬಂದಂತಹ ವೈರ್ಲೆಸ್ ಚಾರ್ಜರ್​ಗಿಂತ ಭಿನ್ನವಾಗಿದೆ. ಏಕಕಾಲದಲ್ಲಿ ನಾಲ್ಕು ಡಿವೈಸ್​ಗಳನ್ನು ಚಾರ್ಜ್ ಮಾಡಬಹುದಾಗಿದೆ.

ಸದ್ಯ ಮೋಟೋರೊಲಾ ಕಂಪೆನಿ ತನ್ನ ಹೊಸ ಏರ್-ವೈರ್​ಲೆಸ್ ಚಾರ್ಜರ್ ಬಗ್ಗೆ ಇಷ್ಟು ಮಾಹಿತಿಯನ್ನಷ್ಟೇ ನೀಡಿದೆ. ಇದರ ಬೆಲೆ ಎಷ್ಟು ಮತ್ತು ಇದು ಯಾವಾಗ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಯಾವುದೆ ಮಾಹಿತಿಯನ್ನು ಹಂಚಿಕೊಂಡಿಲ್ಲ.

JIO: ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಎರಡು ಆಕರ್ಷಕ ಪ್ಲಾನ್ ದಿಢೀರ್ ಸ್ಥಗಿತ

WhatsApp: ಗೌಪ್ಯತೆಗಾಗಿ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್​ಆ್ಯಪ್

(Motorola Working On Air Charging Tech you can charge 4 devices simultaneously)