ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ ನಿಸ್ಸಾನ್ ಮೋಟಾರ್ ಇಂಡಿಯಾದ ಎರಡು ಕಾರುಗಳು
ಭಾರತದಲ್ಲಿ ತನ್ನ ಕೈಗೆಟುಕುವ SUV ಮ್ಯಾಗ್ನೈಟ್ ಮೂಲಕ ಹೆಸರು ಮಾಡಿರುವ ಜಪಾನಿನ ಕಾರು ತಯಾರಕ ಕಂಪನಿಯು ಈಗ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಮುಂದಿನ ಹಣಕಾಸು ವರ್ಷ 2025-26 ಕ್ಕೆ ತನ್ನ ಯೋಜನೆಯನ್ನು ಬಹಿರಂಗಪಡಿಸಿದೆ. ಇಷ್ಟೇ ಅಲ್ಲ, ನಿಸ್ಸಾನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ 2 ಹೊಸ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ನಿಸ್ಸಾನ್ ಮೋಟಾರ್ ಇಂಡಿಯಾ ಪ್ರಸ್ತುತ ಸಾಲಿನಲ್ಲಿ ಹೊಸ ಎರಡು ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇತ್ತೀಚೆಗೆ ಜಪಾನ್‌ನ ಯೊಕೊಹಾಮಾದಲ್ಲಿ ನಡೆದ ಜಾಗತಿಕ ಉತ್ಪನ್ನ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾರತಕ್ಕಾಗಿ ಎರಡು ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿತು. ನಿಸ್ಸಾನ್ ಭಾರತಕ್ಕಾಗಿ ರೆನಾಲ್ಟ್ ಟ್ರೈಬರ್ ಆಧಾರಿತ MPV ಯ ಟೀಸರ್ ಅನ್ನು ಬಿಡುಗಡೆ ಮಾಡಿತು ಮತ್ತು ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಹೊಚ್ಚ ಹೊಸ ಕಾಂಪ್ಯಾಕ್ಟ್ SUV ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ. ನಿಸ್ಸಾನ್ ಪ್ರಸ್ತುತ ಭಾರತದಲ್ಲಿ ಮ್ಯಾಗ್ನೈಟ್ ಎಂಬ ಒಂದೇ ಒಂದು ಕಾರನ್ನು ಮಾರಾಟ ಮಾಡುತ್ತಿದೆ. ಜಾಗತಿಕವಾಗಿ ಸಂಕಷ್ಟದಲ್ಲಿರುವ ನಿಸ್ಸಾನ್ ಹೊಸ ಶಕ್ತಿಯನ್ನು ಕಂಡುಕೊಂಡಿರುವುದು ಮ್ಯಾಗ್ನೈಟ್ ಕಾರಣದಿಂದಾಗಿ. ಈಗ ಕೈಗೆಟುಕುವ ಬೆಲೆಯಲ್ಲಿ ಇನ್ನೂ 2 ಉತ್ಪನ್ನಗಳನ್ನು ಘೋಷಿಸಿದೆ.
ನಿಸ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳವ ಹಾಗೂ ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಕ್ರೆಟಾಗೆ ಪ್ರತಿಸ್ಪರ್ಧಿಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ನಿಸ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನವನ್ನು ಸೆಳೆಯಬಹುದು ಅದಕ್ಕಾಗಿ ಶೀಘ್ರದಲ್ಲೇ ಉತ್ಪನ್ನವನ್ನು ಬಿಡುಗಡೆ ಮಾಡಬೇಕಾಗುತ್ತದೆ.
ಟ್ರೈವರ್ ಆಧಾರಿತ MPV ಯ ವಿಶೇಷತೆ ಏನು?
ನಿಸ್ಸಾನ್ ಟ್ರೈವರ್ ಆಧಾರಿತ MPV ಅನ್ನು ಸಹ ತಯಾರಿಸಲಿದೆ, ಇದು ಟ್ರೈವರ್‌ನ ಮರುಬ್ಯಾಡ್ಜ್ ಮಾಡಿದ ಆವೃತ್ತಿಯಾಗಲಿದೆ.ಟ್ರೈಬರ್ 7 ಆಸನಗಳ ಕಾರಾಗಿದ್ದು, ಕಡಿಮೆ ಬಜೆಟ್ ಕುಟುಂಬಗಳ ಹೃದಯದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ.ಮುಂಭಾಗವು ಟ್ರೈವರ್‌ನಂತೆಯೇ ಇದೆ, ಆದರೆ ಹೊಸ ಗ್ರಿಲ್ ಇದೆ. ಒಳಗೆ ಮತ್ತು ವೈಶಿಷ್ಟ್ಯಗಳು ಸ್ವಲ್ಪ ಭಿನ್ನವಾಗಿರಬಹುದು.ಇದಲ್ಲದೆ, ಹೊಸ MPV ಶಕ್ತಿಶಾಲಿ 1.0L ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು. ಟ್ರೈಬರ್ ಆಧಾರಿತ MPV ಈ ವರ್ಷದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಈ 7 ಆಸನಗಳ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಜೊತೆ ಸ್ಪರ್ಧಿಸಲಿದೆ.
ಕ್ರೆಟಾ ಜೊತೆ ಸ್ಪರ್ಧಿಸುವ ಕಾರು ಯಾವಾಗ ಬಿಡುಗಡೆಯಾಗುತ್ತದೆ?
ಜಪಾನಿನ ಬ್ರ್ಯಾಂಡ್ ಕ್ರೆಟಾ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಇದು ಸದ್ಯದಲ್ಲಿ ಬಿಡುಗಡೆಯಾಗುವ ಸಾಧ್ಯ ಇದೆ. ಕಾಂಪ್ಯಾಕ್ಟ್ SUV ವಿಭಾಗವು ಅಗಾಧವಾಗಿ ಬೆಳೆಯುತ್ತಿದೆ ಮತ್ತು ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರ್ಯಾಂಡ್‌ಗಳು ಹೆಚ್ಚಿನ ಲಾಭವನ್ನು ಪಡೆಯುತ್ತಿವೆ. ಮಾರುಕಟ್ಟೆಯಲ್ಲಿ ಬಲವಾದ ಹಿಡಿತವನ್ನು ಹೊಂದಿದೆ. ನಿಸ್ಸಾನ್ ಕಂಪನಿಯು ಬೆಲೆ, ವೈಶಿಷ್ಟ್ಯಗಳು ಮತ್ತು ಡ್ರೈವ್‌ಟ್ರೇನ್ ಆಯ್ಕೆಗಳಲ್ಲಿ ಕ್ರೆಟಾ ಜೊತೆ ಸ್ಪರ್ಧಿಸುವ ವಾಹನವನ್ನು ತರಬೇಕಾಗುತ್ತದೆ.ಬಿಎಸ್ 6 ಮಾನದಂಡಗಳಿಂದಾಗಿ ನಿಸ್ಸಾನ್ ಭಾರತದಲ್ಲಿ ಡೀಸೆಲ್ ಕಾರುಗಳನ್ನು ಬಹಳ ಹಿಂದೆಯೇ ಸ್ಥಗಿತಗೊಳಿಸಿದೆ, ಆದ್ದರಿಂದ ಮೈಲೇಜ್ ಬಗ್ಗೆ ಕಾಳಜಿ ವಹಿಸುವ ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಹೈಬ್ರಿಡ್ ಪವರ್‌ಟ್ರೇನ್ ಪಡೆಯಬಹುದು. ಕ್ರೆಟಾ ಪ್ರತಿಸ್ಪರ್ಧಿ ವಾಹನವು 2027 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?
ಮುಂದಿನ ವರ್ಷದ ವೇಳೆಗೆ ನಿಸ್ಸಾನ್ 4 ಕಾರುಗಳನ್ನು ಬಿಡುಗಡೆ
ನಿಸ್ಸಾನ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವ್ಯಾಟ್ಸ್ ಹೇಳಿರುವ ಪ್ರಕಾರ, ನಿಸ್ಸಾನ್ ಕಂಪನಿಯ ಯೋಜಿತ ಉತ್ಪನ್ನ ಶ್ರೇಣಿಯು ಹೊಸ 7 ಆಸನಗಳ MPV ಯ ಜಾಗತಿಕ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ಇದು 2025 ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ನಂತರ ಈಗಾಗಲೇ ಘೋಷಿಸಲಾದ ಹೊಸ SUV ಯನ್ನು FY26 ರ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು. ನಿಸ್ಸಾನ್ ಮೋಟಾರ್ ಇಂಡಿಯಾ, FY26 ರ ವೇಳೆಗೆ ಭಾರತೀಯ ಗ್ರಾಹಕರಿಗೆ B/C ಮತ್ತು D-SUV ವಿಭಾಗಗಳಲ್ಲಿ 4 ಉತ್ಪನ್ನಗಳನ್ನು ಬಿಡುಗಡೆ ಮಾಡುವತ್ತ ಸಾಗುತ್ತಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Thu, 27 March 25