Nokia G20: ನೋಕಿಯಾ ಜಿ20 ಭಾರತದಲ್ಲಿ ಬಿಡುಗಡೆ; ವೈಶಿಷ್ಟ್ಯ, ಬೆಲೆ ಮತ್ತು ವಿಶೇಷತೆಗಳೇನು?

| Updated By: shruti hegde

Updated on: Jul 06, 2021 | 6:05 PM

ನೋಕಿಯಾ ಜಿ20: ನೋಕಿಯಾ ಜಿ20 ಫೋನ್​ಸೆಟ್​ ಎರಡು ಬಣ್ಣದಲ್ಲಿ ಸಿಗುತ್ತವೆ. ಅತ್ಯದ್ಭುತ ಬ್ಯಾಕ್​ ಕ್ಯಾಮರಾ ಮತ್ತು ಸೆಲ್ಫೀ ಕ್ಯಾಮರಾದೊಂದಿಗೆ ಜನಮನ ಸೆಳೆಯುವ ನಿರೀಕ್ಷೆ ಇದೆ. ಜುಲೈ 15ರಿಂದ ನೋಕಿಯಾ ಖರೀದಿಗೆ ಆನ್​ಲೈನ್​ ಫ್ಲಾಟ್​ಫಾರ್ಮ್​ಗಳಲ್ಲಿ ಲಭ್ಯವಿರುತ್ತದೆ.

Nokia G20: ನೋಕಿಯಾ ಜಿ20 ಭಾರತದಲ್ಲಿ ಬಿಡುಗಡೆ; ವೈಶಿಷ್ಟ್ಯ, ಬೆಲೆ ಮತ್ತು ವಿಶೇಷತೆಗಳೇನು?
ನೋಕಿಯಾ ಜಿ20
Follow us on

ತನ್ನದೇ ಆದ ಛಾಪು ಮೂಡಿಸಿ ಯುವಜನತೆಯನ್ನು ಸೆಳೆಯುತ್ತಿರುವ ನೋಕಿಯಾ ಇದೀಗ ಹೊಸ ಮಾಡೆಲ್​ ಫೋನ್​ವೊಂದನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ನೋಕಿಯಾ ಜಿ20 ಹ್ಯಾಂಡ್​ಸೆಟ್​​ ಎರಡು ಬಣ್ಣದಲ್ಲಿ ಸಿಗುತ್ತವೆ. ಅತ್ಯದ್ಭುತ ಬ್ಯಾಕ್​ ಕ್ಯಾಮರಾ ಮತ್ತು ಸೆಲ್ಫೀ ಕ್ಯಾಮರಾದೊಂದಿಗೆ ಜನಮನ ಸೆಳೆಯುವ ನಿರೀಕ್ಷೆ ಇದೆ. ಜುಲೈ 15ರಿಂದ ನೋಕಿಯಾ ಖರೀದಿಗೆ ಆನ್​ಲೈನ್​ ಫ್ಲಾಟ್​ಫಾರ್ಮ್​ಗಳಲ್ಲಿ ಲಭ್ಯವಿರುತ್ತದೆ.

ಕೆಲವು ತಿಂಗಳ ಹಿಂದೆ ತನ್ನ ಜಿ, ಸಿ ಮತ್ತು ಎಕ್ಸ್​ ಸರಣಿಯ ಮಾಡೆಲ್​ ಫೋನ್​ಗಳನ್ನು ಬಿಡುಗಡೆಗೊಳಿಸಿದ ನೋಕಿಯಾ ಇದೀಗ ಹೊಸ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕ್ಯಾಮರಾ ಮತ್ತು ಉತ್ತಮ ಗುಣಮಟ್ಟದ ಬ್ಯಾಟರಿ ವ್ಯವಸ್ಥೆಯು ಬಳಕೆದಾರರನ್ನು ಮೆಚ್ಚಿಸುವಂತಿದೆ ಎಂದು ನೋಕಿಯಾ ಹೇಳಿಕೊಂಡಿದೆ.

ನೋಕಿಯಾ ಜಿ20 ವೈಶಿಷ್ಟ್ಯಗಳು
ಡುಯೆಲ್​ ಸಿಮ್​ (ನ್ಯಾನೋ) ನೋಕಿಯಾ ಜಿ20 20:09 ಅನುಪಾತದೊಂದಿಗೆ 6.5 ಇಂಚಿನ ಫೋನ್​ ಆಗಿದೆ. ಜತೆಗೆ ಹೆಚ್​ಡಿ+ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. 4 ಜಿಬಿ RAM ಮತ್ತು 64 ಜಿಬಿ ಮೆಮೊರಿಯನ್ನು ಹೊಂದಿದೆ. ಜತೆಗೆ ಎಸ್​ಡಿ ಕಾರ್ಡ್​ ಅಳವಡಿಕೆಯನ್ನೂ ನೀಡಲಾಗಿದೆ. ಒಟ್ಟು 152 ಜಿಬಿ ವರೆಗೆ ಮೆಮೊರಿ ಸಂಗ್ರಹಿಸಬಹುದು.

ನೋಕಿಯಾ ಜಿ20 ಬೆಲೆ
ನೋಕಿಯಾ ಜಿ20 ಮಾಡೆಲ್​ ಹ್ಯಾಂಡ್​ಸೆಟ್​ಗೆ 12,999 ರೂಪಾಯಿ. ನಾಳೆ ಜುಲೈ 7 ಮಧ್ಯಾಹ್ನ 12 ಗಂಟೆಗೆ ಅಮೇಜಾನ್​ ಮತ್ತು ನೋಕಿಯಾ ವೆಬ್​ಸೈಟ್​ ಮೂಲಕ ಬುಕ್ಕಿಂಗ್​ ಪ್ರಾರಂಭವಾಗಲಿದೆ. ನೋಕಿಯಾ ಜಿ20ಅನ್ನು ಅಮೇಜಾನ್ ಇಂಡಿಯಾದಲ್ಲಿ ಗುರುತಿಸಲಾಗಿದೆ. ಜುಲೈ 15 ರಿಂದ ಈ ಹೊಸ ಮಾದರಿಯ ಹ್ಯಾಂಡ್​ಸೆಟ್​ ಗ್ರಾಹಕರಿಗೆ ಲಭ್ಯವಾಗಲಿದೆ.

ಇದು ಒಟ್ಟು 5 ಕ್ಯಾಮರಾಗಳನ್ನು ಹೊಂದಿದೆ. ಹಿಂಭಾಗದಲ್ಲಿ 4 ಮತ್ತು ಸೆಲ್ಫಿ ಕ್ಯಾಮರಾ ಒಂದು. ಹಿಂಭಾಗದಲ್ಲಿ 48mp ಮುಖ್ಯ ಕ್ಯಾಮರಾ ಜತೆಗೆ 5mp ಮತ್ತು 2mp ಕ್ಯಾಮರಾಗಳನ್ನು ಹೊಂದಿದೆ. ಸೆಲ್ಫಿಗಾಗಿ 8mp ಕ್ಯಾಮರಾ ಅಳವಡಿಸಲಾಗಿದೆ. 5,050 mah ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

ಇದನ್ನೂ ಓದಿ:

Samsung Galaxy F22: ಇಂದು ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಫ್​22 ಬಿಡುಗಡೆ: ಏನಿದರ ಬೆಲೆ ಮತ್ತು ವಿಶೇಷ?

Nokia new phones launch: ಎಚ್​ಎಂಡಿ ಗ್ಲೋಬಲ್​ನಿಂದ 10,000 ರೂ. ಒಳಗಿನ ನೋಕಿಯಾ C20 ಸ್ಮಾರ್ಟ್​ಫೋನ್ ಬಿಡುಗಡೆ!

Published On - 5:57 pm, Tue, 6 July 21