Nothing Phone 1: ಟೆಕ್ ಮಾರುಕಟ್ಟೆಯನ್ನೇ ನಡುಗಿಸುತ್ತಿದೆ Nothing ಸ್ಮಾರ್ಟ್​​ಫೋನ್: ಹೊಸ ಕ್ರಾಂತಿ ಆರಂಭ?

| Updated By: Vinay Bhat

Updated on: Jun 10, 2022 | 6:55 AM

Nothing Phone (1) Launch: ಈ ಫೋನಿನ ಹೆಸರು ನಥಿಂಗ್ ಫೋನ್ 1 ಎಂದಾಗಿದ್ದು, ಇದು ಬಿಡುಗಡೆ ಆದ ನಂತರ ಟೆಕ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

Nothing Phone 1: ಟೆಕ್ ಮಾರುಕಟ್ಟೆಯನ್ನೇ ನಡುಗಿಸುತ್ತಿದೆ Nothing ಸ್ಮಾರ್ಟ್​​ಫೋನ್: ಹೊಸ ಕ್ರಾಂತಿ ಆರಂಭ?
Nothing Phone (1)
Follow us on

ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿರುವ ಐಫೋನ್, ಶವೋಮಿ (Xiaomi), ಸ್ಯಾಮ್​ಸಂಗ್ ನಂತಹ ಪ್ರಸಿದ್ಧ ಬ್ರ್ಯಾಂಡ್​ಗಳಿಗೆ ಈಗ ನಡುಕ ಶುರುವಾಗಿದೆ. ಇದಕ್ಕೆ ಕಾರಣ ನಥಿಂಗ್. ಹೌದು, ಒನ್‍ ಪ್ಲಸ್‍ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್‍ ಪೇ ಒಡೆತನದ ನಥಿಂಗ್‍ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್​​ಫೋನ್‍ ಅನ್ನು ಹೊರತರುತ್ತಿದ್ದು, ಫೋನ್‍ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೀಗ ಈ ಫೋನಿನ ಬಿಡುಗಡ ದಿನಾಂಕ ಕೂಡ ಬಹಿರಂಗವಾಗಿದೆ. ಮುಂದಿನ ತಿಂಗಳು ಜುಲೈ 12 ರಂದು ರಾತ್ರಿ 8:30ಕ್ಕೆ ಈ ಸ್ಮಾರ್ಟ್​​ಫೋನ್ ಜಾಗತೀಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈ ಫೋನಿನ ಹೆಸರು ನಥಿಂಗ್ ಫೋನ್ 1 (Nothing Phone 1) ಎಂದಾಗಿದ್ದು, ಇದು ಬಿಡುಗಡೆ ಆದ ನಂತರ ಟೆಕ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಈ ಹೊಸ ಸ್ಮಾರ್ಟ್‌ಫೋನ್ ಆಪಲ್‌ ಐಫೋನ್‌ ಜತೆಗೆ ಸ್ಪರ್ಧಿಸಲಿದೆ ಎಂದು ಸ್ವತ: ಕಾರ್ಲ್‌ ಹೇಳಿದ್ದಾರೆ. ಚೈನೀಸ್ ಮೂಲದ ಸ್ವೀಡಿಷ್ ಇಂಟರ್ನೆಟ್ ಉದ್ಯಮಿ ಕಾರ್ಲ್ 2013 ರಲ್ಲಿ ಪೀಟ್ ಲಾವ್ ಜೊತೆಗೆ ಒನ್‌ಪ್ಲಸ್ ಕಂಪನಿ ಆರಂಭಿಸಿದ್ದರು ಮತ್ತು ಒನ್‌ಪ್ಲಸ್‌ನ ಗ್ಲೋಬಲ್ ನಿರ್ದೇಶಕರಾಗಿದ್ದರು. ಆದರೆ, ಸೆಪ್ಟೆಂಬರ್ 2020 ರಲ್ಲಿ ಸಂಸ್ಥೆಯನ್ನು ತೊರೆದು “ನಥಿಂಗ್” ಎಂಬ ಹೊಸ ಹಾರ್ಡ್‌ವೇರ್ ಉದ್ಯಮವನ್ನು ಪ್ರಾರಂಭಿಸಿದ್ದರು. ಇದೀಗ ಹೊಸ ಫೋನನ್ನೇ ಬಿಡುಗಡೆ ಮಾಡಲ ಹೊರಟಿದ್ದಾರೆ.

Moto G62 5G: ಬೆಲೆ ಬಹಿರಂಗ ಪಡಿಸದೆ ಹೊಸ ಫೋನ್ ರಿಲೀಸ್ ಮಾಡಿದ ಮೋಟೋ: ಇದರ ಫೀಚರ್ಸ್​​ ನೋಡಿ

ಇದನ್ನೂ ಓದಿ
Google Chrome: ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರೇ ಗಮನಿಸಿ: ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ
Oppo K10 5G: 48MP ಕ್ಯಾಮೆರಾ, 5000mAh ಬ್ಯಾಟರಿ: ಕೇವಲ 17,499 ರೂ. ಗೆ ಒಪ್ಪೋ K10 5G ರಿಲೀಸ್
WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಿದೆಯಾ?
Xiaomi: ಸ್ಮಾರ್ಟ್​ಫೋನ್​ ಬಳಕೆದಾರರಿಗೆ ವಿಶೇಷ ಕೊಡುಗೆ ಪ್ರಕಟಿಸಿದ ಶವುಮಿ ​

ಇನ್ನು ನಥಿಂಗ್ ಫೋನ್ (1) ಬಿಡುಗಡೆಯಾದರೆ ಅದು ಒನ್‌ಪ್ಲಸ್‌ನೊಂದಿಗೆ ಸ್ಪರ್ಧಿಸಲಿದೆ ಎಂಬ ವದಂತಿಗಳಿಗೆ ಬ್ರೇಕ್‌ ಹಾಕಿರುವ ಕಾರ್ಲ್ ಹೊಸ ಫೋನ್‌ ಆಪಲ್‌ ಸಾಧನಗಳೊಂದಿಗೆ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಐಫೋನ್ ನೊಂದಿಗೆ ಸ್ಪರ್ಧಿಸಲು ನೋಡುತ್ತಿರುವ ಕಾರಣ, Nothing Phone 1 ಸ್ಮಾರ್ಟ್‌ಫೋನ್ ಬೆಲೆಯ ದುಬಾರಿಯಾಗಬಹುದು ಎಂದು ಹೇಳಲಾಗಿದೆ. ಆದರೆ, ಇಲ್ಲಿಯವರೆಗೆ ಇದರ ಬೆಲೆಯ ಬಗ್ಗೆ ಯಾವುದೇ ವದಂತಿಗಳಿಲ್ಲ.

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು ಆಂಡ್ರಾಯ್ಡ್ ಫೋನ್‍ ಆಗಿದ್ದು, ನಥಿಂಗ್‍ ಆಪರೇಟಿಂಗ್‍ ಸಿಸ್ಟಂ (ಓಎಸ್‍) ಹೊಂದಿರುತ್ತದೆ. ತನ್ನದೇ ಆದ ಹೊಸ ರೀತಿಯ ವಿನ್ಯಾಸ ಹೊಂದಿರಲಿದೆ. ಅಂದರೆ ನಥಿಂಗ್‍ ಇಯರ್ ಬಡ್‍ ರೀತಿ ಪಾರದರ್ಶಕ ವಿನ್ಯಾಸ ಹೊಂದಿರಲಿದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್‍ ಪ್ರಿಯರು ಬಯಸುವ ಕ್ವಾಲ್‍ ಕಾಂ ಸ್ನಾಪ್‍ ಡ್ರಾಗನ್‍ ಪ್ರೊಸೆಸರ್ ಹೊಂದಿರುತ್ತದೆ. ನಥಿಂಗ್‍ಗೆ ಕ್ವಾಲ್‍ ಕಾಂ ಕೂಡ ಹೂಡಿಕೆದಾರ ಎಂಬುದು ವಿಶೇಷ.

ಅಂತೆಯೆ ನಥಿಂಗ್ ಫೋನ್ (1) 4500mAh ಬ್ಯಾಟರಿಯನ್ನು ಬಳಸುವ ಸಾಧ್ಯತೆಯಿದೆ ಆದರೆ ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಇರುತ್ತದೆಯೇ ಅಥವಾ ಇಲ್ಲವೇ ಎಂಬ ವಿವರಗಳು ಸ್ಪಷ್ಟವಾಗಿಲ್ಲ. ಕ್ಯಾಮೆರಾಗಳು 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮುಂಭಾಗದಲ್ಲಿ, ನಥಿಂಗ್ ಫೋನ್ (1) ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುವ ಸಾಧ್ಯತೆಯಿದೆ.

“ನಥಿಂಗ್ ಓಎಸ್ ಶುದ್ಧ ಆಂಡ್ರಾಯ್ಡ್‌ನ ಉತ್ತಮ ವೈಶಿಷ್ಟ್ಯಗಳಳೊಂದಿಗೆ, ಆಪರೇಟಿಂಗ್ ಸಿಸ್ಟಮನ್ನು ಕೇವಲ ಅಗತ್ಯಗಳಿಗಣುಸಾರವಾಗಿ ಬಳಸುತ್ತದೆ, ಅಲ್ಲಿ ಪ್ರತಿ ಬೈಟ್‌ಗೆ ಒಂದು ಉದ್ದೇಶವಿದೆ. ಇದು ವೇಗದ, ಸುಗಮ ಮತ್ತು ವೈಯಕ್ತಿಕ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಒಂದು ಸುಸಂಬದ್ಧ ಇಂಟರ್ಫೇಸ್, ಹಾರ್ಡ್‌ವೇರ್ ಬೆಸ್ಪೋಕ್ ಫಾಂಟ್‌ಗಳು, ಬಣ್ಣಗಳು, ಚಿತ್ರಾತ್ಮಕ ಅಂಶಗಳು ಮತ್ತು ಧ್ವನಿಗಳ ಮೂಲಕ ಸಾಫ್ಟ್‌ವೇರ್‌ನೊಂದಿಗೆ  ಸಂಯೋಜಿಸುತ್ತದೆ,” ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ