ಕಳೆದ ವರ್ಷ ನಥಿಂಗ್ (Nothing) ಎಂಬ ಕಂಪನಿ ತನ್ನ ಚೊಚ್ಚಲ ಸ್ಮಾರ್ಟ್ಫೋನ್ ನಥಿಂಗ್ ಫೋನ್ 1 (Nothing Phone 1) ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಮೊದಲ ಫೋನಿಗೆ ಊಹೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ತನ್ನ ಎರಡನೇ ಫೋನ್ ಬಿಡುಗಡೆ ಮಾಡಲು ನಥಿಂಗ್ ಕಂಪನಿ ತಯಾರಾಗಿದೆ. ಇಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ನಥಿಂಗ್ ಕಂಪನಿಯ ನಥಿಂಗ್ ಫೋನ್ 2 (Nothing Phone 2) ಮೊಬೈಲ್ ಅನಾವರಣಗೊಳ್ಳಲಿದೆ. ಹಿಂದಿನ ಫೋನಿಗಿಂತ ಇದು ಸಾಕಷ್ಟು ಸೈಲಿಶ್ ಹಾಗೂ ಬಲಿಷ್ಠವಾಗಿದೆ. ನೂತನ ಪ್ರೊಸೆಸರ್ ನೀಡುವ ಸಾಧ್ಯತೆ ಇದೆ. ಕ್ಯಾಮೆರಾದಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ನಥಿಂಗ್ ಫೋನ್ 2 ಭಾರತೀಯ ಕಾಲಮಾನದ ಪ್ರಕಾರ ಜುಲೈ 11 ರಂದು ರಾತ್ರಿ 8:30 ಕ್ಕೆ ಬಿಡುಗಡೆ ಆಗಲಿದೆ. ಇದರ ಲೈವ್ಸ್ಟ್ರೀಮ್ ಅನ್ನು ನೀವು http://nothing.tech/pages/event ಅಥವಾ https://www.youtube.com/watch?v=RfZDW20apc4 ಯಲ್ಲಿ ವೀಕ್ಷಿಸಬಹುದು.
ಈ ಹಿಂದೆ ನಥಿಂಗ್ ಫೋನ್ 2 ಫೀಚರ್ಸ್ ಬಗ್ಗೆ ಅನೇಕ ವರದಿಗಳು ಬಂದಿವೆ. ಆದರೆ, ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಕಾರ್ಲ್ ಪೀ ಈ ಎಲ್ಲ ವರದಿಗಳು ಸುಳ್ಳು ಎಂದು ಹೇಳಿದ್ದರು. ತನ್ನ ಡಿಸೈನ್ ಬಗ್ಗೆ ವಿಶೇಷ ಕಾಳಜಿ ವಹಿಸುವ ಕಂಪನಿ ಈ ಬಾರಿ ಫೋನಿನ ಹಿಂಭಾಗದಲ್ಲಿ ಬರೋಬ್ಬರಿ 33 ಎಲ್ಇಡಿ ಲೈಟ್ ಅಳವಡಿಸಲಾಗಿದೆ ಎಂಬ ಮಾಹಿತಿಯಿದೆ.
Samsung Event: ಜುಲೈ 26ಕ್ಕೆ ಸ್ಯಾಮ್ಸಂಗ್ನಿಂದ ಅತಿ ದೊಡ್ಡ ಈವೆಂಟ್: ಗ್ಯಾಲಕ್ಸಿ Z ಫೋಲ್ಡ್ ಸರಣಿ ಬಿಡುಗಡೆ
ಕೆಲವು ಮೂಲಗಳ ಪ್ರಕಾರ, ನಥಿಂಗ್ ಫೋನ್ 2 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್ ರೇಟ್ ನೀಡಲಿದೆ ಎಂದು ತಿಳಿದುಬಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಹಿಂದಿನ ಆವೃತ್ತಿಯಲ್ಲಿ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್ ಅಳವಡಿಸಲಾಗಿತ್ತು. 128 GB, 256 GB, ಮತ್ತು 512 GB ಜೊತೆಗೆ 8 GB ಅಥವಾ 12 GB RAM ಇರುವ ಸಾಧ್ಯತೆ ಇದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯೆಲ್ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಈ ಫೋನಿನ ಹಿಂಭಾಗದಲ್ಲರುವ ಎಲ್ಲ ಎರಡು ಕ್ಯಾಮೆರಾಗಳು ಇರಲಿದ್ದು, ಈ ಎರಡೂ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆಯಂತೆ. ಇದು ಸೋನಿ IMX890 ಸಂವೇದಕವನ್ನು ಹೊಂದಿದೆ. ಕೆಲ ವರದಿಯ ಪ್ರಕಾರ ಮೂರು ಕ್ಯಾಮೆರಾ ಇರಲಿದೆ ಎಂದೂ ಹೇಳಲಾಗಿದೆ. ಅದರಂತೆ ಮುಂಭಾಗ ಸೆಲ್ಪಿ ಮತ್ತು ವಿಡಿಯೋ ಕರೆಗಳಿಗಾಗಿ ಸೋನಿ IMX615 ಸಂವೇದಕದ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆಯಂತೆ.
ನಥಿಂಗ್ ಫೋನ್ (2) 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದು 45 ವೋಲ್ಟ್ ಆಗಿರಬಹುದು. ಫೋನ್ 1 ನಲ್ಲಿ 4,500mAh ಬ್ಯಾಟರಿ ನೀಡಲಾಗಿತ್ತು. ಈ ಫೋನ್ 5ಜಿ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 13 OS ಅನ್ನು ಆಧರಿಸಿದ ಹೊಸ NothingOS (2) ನೊಂದಿಗೆ ಈ ಫೋನ್ ರನ್ ಆಗಲಿದೆ.
ಈ ಹಿಂದೆ ನಥಿಂಗ್ ಫೋನ್ (1) ಬಿಡುಗಡೆಯ ಸಮಯದಲ್ಲಿ ಸುಮಾರು 30,000 ರೂ. ಗಳಷ್ಟಿತ್ತು, ನಂತರ ಕೆಲವೇ ತಿಂಗಳುಗಳಲ್ಲಿ ಗಮನಾರ್ಹ ಬೆಲೆ ಕಡಿತವನ್ನು ಮಾಡಲಾಯಿತು. ಆದರೀಗ ಹೆಚ್ಚು ಶಕ್ತಿಶಾಲಿ ಚಿಪ್‌ನೊಂದಿಗೆ, ಫೋನ್ (2) ಸುಮಾರು 40,000 ರೂ. ಗಳ ಬೆಲೆ ಇರಬಹುದು ಎಂಧು ಊಹಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:46 am, Tue, 11 July 23