Nothing Phone 2: ನಥಿಂಗ್ ಫೋನ್ 2 ಮೇಲೆ ಕಣ್ಣಿಟ್ಟವರಿಗೆ ಭರ್ಜರಿ ಸುದ್ದಿ: ಜೂನ್ 29 ರಿಂದ ಪ್ರೀ ಆರ್ಡರ್​ಗೆ ಲಭ್ಯ

ನಥಿಂಗ್ ಫೋನ್ 2 ಬಗ್ಗೆ ಫ್ಲಿಪ್​ಕಾರ್ಟ್ ಹೊಸ ಪೇಜ್ ತಯಾರಿಸಿದೆ. ಇದರಲ್ಲಿ ಜೂನ್ 29 ಮಧ್ಯಾಹ್ನ 12 ಗಂಟೆಯಿಂದ ಪ್ರೀ ಆರ್ಡರ್ ಆರಂಭವಾಗಲಿದೆ ಎಂದು ಹೇಳಿದೆ. ಈ ಹಿಂದೆ ಬಿಡುಗಡೆ ಆದ ನಥಿಂಗ್ ಫೋನ್ 1 750,000 ಕ್ಕೂ ಅಧಿಕ ಯುನಿಟ್ ಸೇಲ್ ಆಗಿದೆ ಎಂಬ ಮಾಹಿತಿ ಕೂಡ ನೀಡಿದೆ.

Nothing Phone 2: ನಥಿಂಗ್ ಫೋನ್ 2 ಮೇಲೆ ಕಣ್ಣಿಟ್ಟವರಿಗೆ ಭರ್ಜರಿ ಸುದ್ದಿ: ಜೂನ್ 29 ರಿಂದ ಪ್ರೀ ಆರ್ಡರ್​ಗೆ ಲಭ್ಯ
nothing phone (2)
Follow us
Vinay Bhat
|

Updated on: Jun 27, 2023 | 2:52 PM

ಕಳೆದ ವರ್ಷ ಟೆಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ನಥಿಂಗ್ ಕಂಪನಿ (Nothing) ಇದೀಗ ಪುನಃ ಬಂದಿದೆ. 2021 ರಲ್ಲಿ ನಥಿಂಗ್ ಫೋನ್ 1 ಎಂಬ ಚೊಚ್ಚಲ ಸ್ಮಾರ್ಟ್​ಫೋನನ್ನು ವಿಭಿನ್ನ ಸ್ಟೈಲಿಶ್ ಲುಕ್​ನಲ್ಲಿ ಅನಾವರಣ ಮಾಡಿ ಧೂಳೆಬ್ಬಿಸಿದ್ದ ಕಂಪನಿ ಈಗ ನಥಿಂಗ್ ಫೋನ್ 2 (Nothing Phone 2) ರಿಲೀಸ್ ಮಾಡಲು ಸಜ್ಜಾಗಿದೆ. ಈ ಫೋನ್ ಇದೇ ಜುಲೈ 11 ರಂದದು ಅನಾವರಣಗೊಳ್ಳಲಿದೆ. ಆದರೆ, ಇದಕ್ಕೂ ಮುನ್ನ ಜೂನ್ 29 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ನಥಿಂಗ್ ಫೋನ್ 2 ಪ್ರೀ ಆರ್ಡರ್​ಗೆ ಲಭ್ಯವಿದೆ. ಗ್ರಾಹಕರು ಬಿಡುಗಡೆಗು ಮುನ್ನ ಪ್ರೀ ಆರ್ಡರ್ ಮಾಡಿಕೊಂಡರೆ ನಿಗದಿತ ಬೆಲೆಯ ಮೇಲೆ 2,000 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ನಥಿಂಗ್ ಫೋನ್ 2 ಬಗ್ಗೆ ಫ್ಲಿಪ್​ಕಾರ್ಟ್ ಹೊಸ ಪೇಜ್ ತಯಾರಿಸಿದೆ. ಇದರಲ್ಲಿ ಜೂನ್ 29 ಮಧ್ಯಾಹ್ನ 12 ಗಂಟೆಯಿಂದ ಪ್ರೀ ಆರ್ಡರ್ ಆರಂಭವಾಗಲಿದೆ ಎಂದು ಹೇಳಿದೆ. ಈ ಫೋನ್ ಬಲಿಷ್ಠವಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುವುದನ್ನು ಫ್ಲಿಪ್​ಕಾರ್ಟ್ ಖಚಿತ ಪಡಿಸಿದೆ. ಜೊತೆಗೆ ನಥಿಂಗ್ OS 2.0 ಇರಲಿದೆ. ಈ ಹಿಂದೆ ಬಿಡುಗಡೆ ಆದ ನಥಿಂಗ್ ಫೋನ್ 1 750,000 ಕ್ಕೂ ಅಧಿಕ ಯುನಿಟ್ ಸೇಲ್ ಆಗಿದೆ ಎಂಬ ಮಾಹಿತಿ ಕೂಡ ನೀಡಿದೆ.

OnePlus Nord 3: ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್​ನ ಬೆಲೆ ಸೋರಿಕೆ: ಎಷ್ಟು ರೂ. ನೋಡಿ

ಇದನ್ನೂ ಓದಿ
Image
Asus Zenfone 10: 200MP ಕ್ಯಾಮೆರಾದ ಈ ಬೊಂಬಾಟ್ ಸ್ಮಾರ್ಟ್​ಫೋನ್ ಬಿಡುಗಡೆಗೆ ಎರಡನೇ ದಿನ ಬಾಕಿ
Image
Samsung Galaxy S23 Ultra: ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ ಸ್ಯಾಮ್​ಸಂಗ್ ಪ್ರೀಮಿಯಂ ಸ್ಮಾರ್ಟ್​ಫೋನ್
Image
WhatsApp Tips: ಬ್ಯಾನ್ ಆದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?
Image
Laptop Slow: ಲ್ಯಾಪ್​ಟಾಪ್ ಸ್ಲೋ ಆಗಿದ್ದರೆ ಈ ಟ್ರಿಕ್ಸ್ ಬಳಸಿ ಸೂಪರ್ ಫಾಸ್ಟ್ ಮಾಡಿ

ಕಂಪನಿ ಈ ಫೋನಿನ ಫೀಚರ್ಸ್ ಅಥವಾ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ನಥಿಂಗ್ ಫೋನ್ (2) ಬೆಲೆ 40,000 ರೂ. ಆಸುಪಾಸಿನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಜೊತೆಗೆ ಈ ಫೋನ್ 256GB ಸ್ಟೋರೇಜ್ ಆಯ್ಕೆಯಲ್ಲಿ ಕೂಡ ರಿಲೀಸ್ ಆಗಲಿದ್ದು ಇದರ ಬೆಲೆ 45,000 ರೂ. ಎಂಬ ಮಾತಿದೆ. 2022 ರಲ್ಲಿ ಬಿಡುಗಡೆ ಆದ ನಥಿಂಗ್ ಫೋನ್ (1) ಫೋನ್‌ಗೆ 30,499 ರೂ. ಗಳನ್ನು ನಿಗದಿ ಮಾಡಲಾಗಿತ್ತು.

ನಥಿಂಗ್ ಫೋನ್ (2) ಫೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಲೀಕ್ ಆಗಿರುವ ಸುದ್ದಿ ಪ್ರಕಾರ, 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್ ರೇಟ್‌ ನೀಡಲಿದೆ ಎಂದು ತಿಳಿದುಬಂದಿದೆ. ಬಲಿಷ್ಠವಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಜೊತೆಗೆ ನಥಿಂಗ್ OS 2.0 ಇರಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಈ ಫೋನಿನ ಹಿಂಭಾಗದಲ್ಲರುವ ಎಲ್ಲ ಮೂರು ಕ್ಯಾಮೆರಾಗಳು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆಯಂತೆ. ಅದರಂತೆ ಮುಂಭಾಗ ಸೆಲ್ಪಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಎನ್ನುವ ವದಂತಿಗಳಿವೆ.

ನಥಿಂಗ್ ಫೋನ್ (2) 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದ್ದು, ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದು 45 ವೋಲ್ಟ್ ಆಗಿರಬಹುದು. 5ಜಿ ಸಪೋರ್ಟ್ ಮಾಡುತ್ತದೆ. ಈ ಫೋನ್ ಒನ್​ಪ್ಲಸ್ 11R ಮತ್ತು ಪಿಕ್ಸೆಲ್ 7a ಗೆ ಕಠಿಣ ಪೈಪೋಟಿ ನೀಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ