ಭಾರತ ಡಿಜಿಟಲೀಕರಣದತ್ತ ಸಾಗುತ್ತಿದೆ. ಯಾವುದೇ ಅಂಗಡಿಗೆ ತೆರಳಿದರೂ ಗೂಗಲ್ ಪೇ, ಫೋನ್ ಪೇ ಮೊದಲಾದ ಆ್ಯಪ್ಗಳ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇನ್ಮುಂದೆ ಈ ಆ್ಯಪ್ಗಳ ಸಹಾಯದಿಂದ ನೀವು ಎಟಿಎಂನಲ್ಲಿ ಹಣ ಕೂಡ ವಿತ್ಡ್ರಾ ಮಾಡಬಹುದಾಗಿದೆ! ಹೀಗೊಂದು ಹೊಸ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಇದು ದೇಶಾದ್ಯಂತ ಯಶಸ್ವಿಯಾಗಿ ಜಾರಿಗೆ ಬಂದರೆ ಕಾರ್ಡ್ಲೆಸ್ ವ್ಯವಹಾರಕ್ಕೆ ಮತ್ತಷ್ಟು ಒತ್ತು ಸಿಗಲಿದೆ.
ಎಟಿಎಂ ಕಂಪೆನಿ ಎನ್ಸಿಆರ್ ಕಾರ್ಪೋರೇಷನ್ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಸಿಟಿ ಯೂನಿಯನ್ ಬ್ಯಾಂಕ್ ಎನ್ಸಿಆರ್ ಜತೆ ಕೈ ಜೋಡಿಸಿದೆ. ಮೊದಲ ಹಂತದಲ್ಲಿ ಸುಮಾರು 1500 ಎಟಿಎಂಗಳನ್ನು ಅಪ್ಗ್ರೇಡ್ ಮಾಡಲಾಗುತ್ತಿದೆ. ಈ ಎಟಿಎಂಗಳಲ್ಲಿ ಮಾತ್ರ ಹೊಸ ಆಯ್ಕೆ ಸಿಗಲಿದೆ.
ಹಣ ವಿತ್ಡ್ರಾ ಮಾಡೋದು ಹೇಗೆ?
ಅಪ್ಗ್ರೇಡ್ ಆದ ಎಟಿಎಂನಲ್ಲಿ ಮಾತ್ರ ಯುಪಿಐ (ಗೂಗಲ್ ಪೇ, ಭೀಮ್, ಪೇಟಿಎಂ, ಫೋನ್ಪೇ) ಮೂಲಕ ಹಣ ವಿತ್ ಡ್ರಾ ಮಾಡಬಹುದು. ಎಟಿಎಂ ಯಂತ್ರದ ಮೇಲೆ ಒಂದು QR code ಇಡಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ಪೂರ್ಣಗೊಂಡ ನಂತರ ನಿಮಗೆ ವಿತ್ಡ್ರಾ ಮಾಡಲು ಎಷ್ಟು ಹಣ ಬೇಕು ಎಂಬುದನ್ನು ಉಲ್ಲೇಖ ಮಾಡಿ ಪ್ರೊಸೆಸ್ ಕೊಡಬೇಕು. ನಂತರ ಯುಪಿಐ ಪಿನ್ ನೋಂದಣಿ ಮಾಡಬೇಕು. ಆಗ, ಎಟಿಎಂ ಮೂಲಕ ಹಣ ಬರಲಿದೆ. ಒಮ್ಮೆಗೆ 5,000 ರೂಪಾಯಿ ಮಾತ್ರ ವಿತ್ಡ್ರಾ ಮಾಡಲು ಅವಕಾಶ ಇದೆ.
ಯಪಿಐ ಎಂದರೇನು?
ಏಕಿಕೃತ ಪಾವತಿ ವ್ಯವಸ್ಥೆ ಎಂಬುದು ಯಪಿಐ ವಿಸ್ತ್ರತ ರೂಪ. ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಇದು ಸಹಕಾರಿ. ಪ್ರತಿ ಬಳಕೆದಾರರ ಯಪಿಐ ಸಂಖ್ಯೆ ಬೇರೆಯದೇ ಆಗುತ್ತದೆ. ನೀವು ಒಂದು ಯುಪಿಐ ಅಪ್ಲಿಕೇಶನ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು ಮತ್ತು ಕೆಲವೇ ಸೆಕೆಂಡುಗಳಲ್ಲಿ ಹಣವನ್ನು ವರ್ಗಾಯಿಸಬಹುದು.
ಇದನ್ನೂ ಓದಿ: ಮೊಬಿಕ್ವಿಕ್ನ 35 ಲಕ್ಷ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳುವಾಗಿದೆ ಎಂದ ಸಂಶೋಧಕ; ಅಂಥದ್ದೇನೂ ಆಗಿಲ್ಲ ಎಂದ ಕಂಪೆನಿ
(Now You Can Withdraw Amounts from ATM Using Phone Pe and Google Pay Here is How)
Published On - 7:03 am, Sat, 3 April 21