ಒನ್ಪ್ಲಸ್ ನಾರ್ಡ್ 2 ಜುಲೈನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಮೊಬೈಲ್ಫೋನ್ ಬಗ್ಗೆ ಬಹಳ ನಿರೀಕ್ಷೆ ಇದ್ದು, ಫೀಚರ್, ಸ್ಪೆಸಿಫಿಕೇಷನ್ ಮತ್ತಿತರ ವಿವರಗಳು ಹರಿದಾಡುತ್ತಿವೆ. ಮೊಬೈಲ್ಫೋನ್ ಕುರಿತು ಇಲ್ಲಿಯ ತನಕ ಗೊತ್ತಿರುವುದನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈವರೆಗೆ ಒನ್ಪ್ಲಸ್ ಮೊಬೈಲ್ಫೋನ್ಗಳು ಕ್ವಾಲ್ಕಾಮ್ ಪ್ರೊಸೆಸರ್ಗಳೊಂದಿಗೆ ಬಿಡುಗಡೆ ಆಗಿವೆ. ನಾರ್ಡ್ 2ನಲ್ಲಿ ಈ ಪರಿಪಾಠ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಮಾರ್ಚ್ ತಿಂಗಳಿಂದಲೂ ಆಗುತ್ತಿರುವ ವರದಿಯಂತೆ, ಒನ್ಪ್ಲಸ್ ನಾರ್ಡ್ 2ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್ಸೆಟ್ ಹೊಂದಿರಲಿದೆ. ಇದು 5G ಚಿಪ್ಸೆಟ್ 6nm ಪ್ರೊಸೆಸ್ ಮೇಲೆ ಆಧಾರವಾಗಿದೆ ಹಾಗೂ ಕ್ಲಾಕ್ ವೇಗ 3GHz ತನಕ ನೀಡುತ್ತದೆ ಅಂತಲೇ ಮಾಹಿತಿ ಇದೆ. ಒನ್ಪ್ಲಸ್ ನಾರ್ಡ್ ಸಿಇ 5G ಮೊಬೈಲ್ ಫೋನ್ ಪರಿಚಿತ ಅಲರ್ಟ್ ಸ್ಲೈಡರ್ ಇಲ್ಲದೆ ಬಿಡುಗಡೆ ಆಗಿತ್ತು. ಆದ್ದರಿಂದ ಒನ್ಪ್ಲಸ್ನಿಂದ ನಾರ್ಡ್ ಲೈನ್ಅಪ್ನಲ್ಲಿ ಈ ಸ್ಲೈಡರ್ ತೆಗೆಯಬಹುದು ಎಂದುಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಆದರೂ ಮೂಲಗಳು ನೀಡುವ ಮಾಹಿತಿಯಂತೆ, ನಾರ್ಡ್ 2ನಲ್ಲಿ ಅಲರ್ಟ್ ಸ್ಲೈಡರ್ ಫ್ರೇಮ್ನ ಬಲಭಾಗಕ್ಕೆ ಇರಲಿದೆ.
ಒನ್ಪ್ಲಸ್ ನಾರ್ಡ್ 2 ಡಿಸೈನ್ ಒನ್ಪ್ಲಸ್ 9 ಅನ್ನೇ ಹೋಲುತ್ತದೆ. ಚೌಕನಾದ ಹಿಂಬದಿಯ ಕ್ಯಾಮೆರಾ ಮಾಡ್ಯುಲ್ ಹಾಗೂ ತುದಿಯಲ್ಲಿನ ಹೋಲ್- ಪಂಚ್ ಸೆಲ್ಫಿ ಕ್ಯಾಮೆರಾ ಇವೆಲ್ಲವೂ ಒನ್ಪ್ಲಸ್ 9 ಅನ್ನು ಹೋಲುತ್ತವೆ. ಒನ್ಪ್ಲಸ್ 9ನಂತೆಯೇ ನಾರ್ಡ್ 2 ಕೂಡ ಕೈಗೆಟುಕುವ ಫೋನ್ ಎಂಬ ಭಾವನೆ ಬರಲಿ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದಂತಿದೆ ಎಂಬುದನ್ನು ಸೂಚಿಸುತ್ತಿವೆ ಸೋರಿಕೆ ಆಗಿರುವ ಮಾಹಿತಿ. ಮೂಲಗಳು ತಿಳಿಸುವಂತೆ, ನಾರ್ಡ್ 2ನ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಇರಲಿದೆ. ಪ್ರಾಥಮಿಕ ಸೆನ್ಸರ್ 50 ಮೆಗಾಪಿಕ್ಸೆಲ್, 8 ಎಂಪಿ ವೈಡ್ ಆ್ಯಂಗಲ್ ಲೆನ್ಸ್, 2 ಎಂಪಿ ಸೆನ್ಸರ್ -ಇದು ಮ್ಯಾಕ್ರೋ ಅಥವಾ ಡೆಪ್ತ್ ಇರಬಹುದು. ಎರಡು ಸೆಲ್ಫಿ ಕ್ಯಾಮೆರಾ ಬದಲಿಗೆ ಒಂದೇ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ. ಮೂಲ ನಾರ್ಡ್ನಲ್ಲಿ ಹೀಗೇ ಇತ್ತು.
ಮೂಲ ಒನ್ಪ್ಲಸ್ ನಾರ್ಡ್ ಬದಲಿಯಾಗಿ ನಾರ್ಡ್ 2 ಭಾರತದಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ. ಸ್ಪೆಸಿಫಿಕೇಷನ್ಸ್ಗಳನ್ನು ಗಮನಿಸುತ್ತಿದ್ದರೆ ಈಚೆಗಿನ ನಾರ್ಡ್ ಸಿಇ 5G ಮೊಬೈಲ್ಫೋನ್ಗಿಂತಲೂ ಉತ್ತಮವಾಗಿರುತ್ತದೆ ಎನಿಸುತ್ತದೆ. ಆದ್ದರಿಂದ ಭಾರತದಲ್ಲಿ ಒನ್ಪ್ಲಸ್ ನಾರ್ಡ್ 2 ದರ 25ರಿಂದ 30 ಸಾವಿರ ರೂಪಾಯಿ ಮಧ್ಯೆ ಇರಬಹುದು. ಇನ್ನು ಬಿಡುಗಡೆಯ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಜುಲೈ ಮಧ್ಯಭಾಗದಲ್ಲಿ ಬಿಡುಗಡೆ ಆಗಬಹುದು.
ಇದನ್ನೂ ಓದಿ: OnePlus Nord CE 5G: ಒನ್ಪ್ಲಸ್ Nord CE 5G ಭಾರತದಲ್ಲಿ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ
(OnePlus Nord 2 India release date, specification, features and other details expectation here)
Published On - 12:56 pm, Tue, 29 June 21