Tech Tips: ಯಾರಾದರು ನಿಮಗೆ ತಪ್ಪಾಗಿ ಹಣ ಕಳುಹಿಸಿದರೆ ಖುಷಿ ಪಡಬೇಡಿ: ಇದರ ಹಿಂದಿದೆ ಅತಿ ದೊಡ್ಡ ಜಾಲ

|

Updated on: Feb 13, 2024 | 10:45 AM

Online Scam: ಕೆಲವು ತಪ್ಪುಗಳನ್ನು ನೀವು ಇಂದಿನಿಂದಲೇ ಮಾಡುವುದನ್ನು ನಿಲ್ಲಿಸಿದರೆ, ವಂಚಕರಿಂದ ದೂರ ಉಳಿಯಬಹುದು. ವಂಚಕರು ಹೊಸ ತಂತ್ರಗಳನ್ನು ಬಳಸಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಯಾರಾದರೂ ಅಪರಿಚಿತರು ನಿಮ್ಮ ಖಾತೆಗೆ ಹಣವನ್ನು ತಪ್ಪಾಗಿ ಕಳುಹಿಸಿದರೆ ಎಚ್ಚರದಿಂದ ಇರಬೇಕು. ಇದು ಅಮಾಯಕರ ಕೆಲಸವಲ್ಲ ಎಂಬುದು ತಿಳಿಯಬೇಕು.

Tech Tips: ಯಾರಾದರು ನಿಮಗೆ ತಪ್ಪಾಗಿ ಹಣ ಕಳುಹಿಸಿದರೆ ಖುಷಿ ಪಡಬೇಡಿ: ಇದರ ಹಿಂದಿದೆ ಅತಿ ದೊಡ್ಡ ಜಾಲ
UPI Scam
Follow us on

ಪ್ರಪಂಚದಾದ್ಯಂತ ಜನರು ಆನ್‌ಲೈನ್ ವಂಚನೆಗಳಿಂದ (Online Scam) ತೊಂದರೆಗೀಡಾಗುತ್ತಿರುವುದು ಹೆಚ್ಚಾಗುತ್ತಿದೆ. ವಂಚಕರು ದಿನದಿಂದ ದಿನಕ್ಕೆ ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದರಂತೆ ನಿಮ್ಮ ಬ್ಯಾಂಕ್ ಖಾತೆಗೆ ಯಾರಾದರೂ ಆಕಸ್ಮಿಕವಾಗಿ ಹಣವನ್ನು ಕಳುಹಿಸಿದರೆ, ಸಂತೋಷಪಡುವ ಅಗತ್ಯವಿಲ್ಲ. ಏಕೆಂದರೆ ಇದು ವಂಚಕರ ಹೊಸ ತಂತ್ರವಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಉಚಿತ ಹಣ ಬಂದಿರುವುದನ್ನು ನೋಡಿ ಖುಷಿ ಪಡಬೇಡಿ. ಇದರ ಹಿಂದೆ ವಂಚಕರ ಕಳ್ಳಾಟವಿದೆ.

ಹಣವನ್ನು ಕಳುಹಿಸಿದ ನಂತರ, ವಂಚಕರು ತಮ್ಮ ಹಣವನ್ನು ಬೇಡಿಕೆಯಿಡಲು ಪ್ರಾರಂಭಿಸುತ್ತಾರೆ. ಜನರನ್ನು ಬಲೆಗೆ ಬೀಳಿಸುವ ಮೂಲಕ, ಹ್ಯಾಕರ್​ಗಳು ಬ್ಯಾಂಕಿಂಗ್ ಮಾಹಿತಿ ಮತ್ತು OTP ಕದಿಯುತ್ತಾರೆ. ತಿಳಿದೋ ತಿಳಿಯದೆಯೋ ಬ್ಯಾಂಕಿಂಗ್ ವಿವರಗಳನ್ನು ನೀಡುವ ಈ ತಪ್ಪನ್ನು ನಾವು ಮಾಡುತ್ತೇವೆ. ಮುಂದೆ ಈ ತಪ್ಪು ನಮ್ಮ ಮೇಲೆ ಎಷ್ಟರಮಟ್ಟಿಗೆ ಹೊರೆಯಾಗುತ್ತದೆ ಎಂದರೆ, ವಂಚಕರು ನಮ್ಮ ಹಣವನ್ನು ಸುಲಭವಾಗಿ ಲೂಟಿ ಮಾಡುತ್ತಾರೆ.

ಉಚಿತ OTT, ಅನಿಯಮಿತ 5G ಡೇಟಾ: ಇದು ಏರ್‌ಟೆಲ್​ನ ಬಂಪರ್ ಪ್ಲಾನ್

ನಿಜವಾಗಿಯೂ ತಪ್ಪಾಗಿ ನನ್ನ ಖಾತೆಯಿಂದ ನಿಮಗೆ ಹಣ ಟ್ರಾನ್ಫರ್ ಆಗಿದೆ ಎಂದು ವಂಚಕರು ನಿಮ್ಮನ್ನ ನಂಬಿಸಿ ಸಿಕ್ಕಿಹಾಕಿಕೊಳ್ಳುದ ರೀತಿಯಲ್ಲಿ ಬಲೆಗಳನ್ನು ಬೀಸುತ್ತಾರೆ. ನಂತರ ಬ್ಯಾಂಕಿಂಗ್ ವಿವರಗಳು ಮತ್ತು OTP ಯಂತಹ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮಾಡುತ್ತಾರೆ. ನಿಮ್ಮ UPI ಲಾಗಿನ್ ಮತ್ತು ಪಾವತಿ ವಿವರಗಳನ್ನು ಕದಿಯಲು ಮಾಲ್‌ವೇರ್ ಅನ್ನು ಸಹ ಬಳಸಲಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಅಪರಿಚಿತ ವ್ಯಕ್ತಿಯು ನಿಮ್ಮೊಂದಿಗೆ ಯಾವುದಾದರು ಲಿಂಕ್ ಅನ್ನು ಹಂಚಿಕೊಂಡರೆ, ತಪ್ಪಿಯೂ ಸಹ ಆ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ನೀವು ಕ್ಲಿಕ್ ಮಾಡಿದ ತಕ್ಷಣ, ವೈರಸ್ ನಿಮ್ಮ ಫೋನ್ ಅನ್ನು ಪ್ರವೇಶಿಸಬಹುದು. ಅದು ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯಬಹುದು ಮತ್ತು ನಿಮ್ಮ ಖಾತೆಯನ್ನು ಖಾಲಿ ಆಗಬಹುದು.

ವ್ಯಾಲೆಂಟೈನ್ಸ್ ಡೇ ಸೇಲ್​ನಲ್ಲಿ ಖರೀದಿಗೆ ಕ್ಯೂ: ಅತಿ ಕಡಿಮೆ ಬೆಲೆಗೆ 200MP ಕ್ಯಾಮೆರಾ ಫೋನ್

ಯುಪಿಐ ಆ್ಯಪ್ ಬಳಸುವವರು ಗಮನಕ್ಕೆ

  • ನಿಮ್ಮ ಯುಪಿಐ ಪಿನ್, ಓಟಿಪಿ ಅಥವಾ ಪಾಸ್‌ವರ್ಡ್ ಅನ್ನು ತಪ್ಪಾಗಿಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಯಾವುದೇ ಅಪರಿಚಿತ ವ್ಯಕ್ತಿಯು \ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡಲು ನಿಮ್ಮನ್ನು ಕೇಳಿದರೆ, ಮೊದಲು URL ನಿಜವಾಗಿಯೂ ಅಧಿಕೃತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.
  • ಯುಪಿಐ ಅಪ್ಲಿಕೇಶನ್ ಅನ್ನು ನವೀಕರಿಸಿ ಮತ್ತು ಅಪ್ಲಿಕೇಶನ್‌ನಲ್ಲಿ ಬಲವಾದ ಪಾಸ್‌ವರ್ಡ್ ಅನ್ನು ಬಳಸಿ.
  • ಯುಪಿಐ ವಹಿವಾಟುಗಳಿಗಾಗಿ ಸಾರ್ವಜನಿಕ ವೈ-ಫೈ ಬಳಸಬೇಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ