ಟೆಕ್ (Tech) ಲೋಕದಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಸುದ್ದಿಯಲ್ಲಿರುವ ಚಾಟ್‌ಜಿಪಿಟಿಗೆ (ChatGPT) ಇದೀಗ ಹೊಸ ಫೀಚರ್ ಒಂದು ಸೇರ್ಪಡೆ ಆಗಿದೆ. OpenAI ಚಾಟ್‌ಜಿಪಿಟಿಗೆ ನೂತನ ವೈಶಿಷ್ಟ್ಯವನ್ನು ಸೇರಿಸಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ತಮ್ಮ ಸಂಭಾಷಣೆಗಳನ್ನು ಮತ್ತು ಚಾಟ್‌ಗಳನ್ನು ಇತರೆ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಹುದಾಗಿದೆ. ಅಂದರೆ ಇಮೇಲ್, ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂರೆ ಇತರ ಮಾಧ್ಯಮಗಳ ಮೂಲಕ ಬೇರೆಯವರ ಜೊತೆ ಸುಲಭವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಕ್ಕೆಂದು ಒಂದು ಯುಆರ್ಎಲ್ ರಚಿಸಲಾಗಿದ್ದು ಅನ್ನು ಕಾಪಿ ಮಾಡುವ ಮೂಲಕ ಲಿಂಕ್ ಪಡೆಯಬಹುದು.
ಈ ನೂತನ ಆಯ್ಕೆಯಿಂದ ಚಾಟ್ಜಿಪಿಟಿಯಲ್ಲಿ ಇನ್ನುಮುಂದೆ ನಮಗೆ ಅಗತ್ಯವಿರುವುದನ್ನು ಸ್ಕ್ರೀನ್ ಶಾಟ್ ತೆಗೆದಿಕೊಟ್ಟುಕೊಳ್ಳುವ ಪ್ರಮೇಯ ಇರುವುದಿಲ್ಲ. ನೀವು ಹಂಚಿಕೊಳ್ಳಬಹುದಾದ ಲಿಂಕ್‌ಗೆ ಹೆಸರನ್ನು ಕೂಡ ಇಡಬಹುದು. ಮತ್ತೊಂದು ವಿಶೇಷತೆ ಎಂದರೆ, ಈ ಲಿಂಕ್ ಅನ್ನು ಯಾರು ಬೇಕಾದರೂ ತೆರೆಯಬಹುದು. ಸದ್ಯಕ್ಕೆ ಈ ಫೀಚರ್ ವೆಬ್ ಆವೃತ್ತಿಯಲ್ಲಿ ಮಾತ್ರ ಕಲ್ಪಿಸಲಾಗಿದೆ. ಕೆಲವೇ ದಿನಗಳಲ್ಲಿ ಐಒಎಸ್ ಬಳಕೆದಾರರಿಗೂ ಸಿಗಲಿದೆ ಎಂದು ಹೇಳಲಾಗಿದೆ.
Facebook Scam: ಫೇಸ್ಬುಕ್ ಹೊಸ ಸ್ಕ್ಯಾಮ್ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು
OpenAI ರಚಿಸಿದ ಲಿಂಕ್‌ಗಳು ಸಂಪೂರ್ಣವಾಗಿ ಆ ಬಳಕೆದಾರನ ನಿಯಂತ್ರಣದಲ್ಲಿರುತ್ತದೆ. ಆದರೆ, ಬಳಕೆದಾರ ಇದನ್ನು ಪಬ್ಲಿಕ್ ಎಂದು ಇಟ್ಟಿದ್ದರೆ ಈ ಲಿಂಕ್‌ಗೆ ಯಾರು ಬೇಕದರೂ ಪ್ರವೇಶ ಪಡೆಯಬಹುದು. ಹಾಗೂ ಆ ಸಂಭಾಷಣೆಯನ್ನು ತೆರೆದು ಬದಲಾವಣೆಗಳನ್ನು ಕೂಡ ಮಾಡಬಹುದು. ಜೊತೆಗೆ ಹೊಸ ಆ ಲಿಂಕ್ ಅನ್ನು ಡಿಲೀಟ್ ಮಾಡಿ ನೂತನ ಲಿಂಕ್ ಅನ್ನು ಕ್ರಿಯೇಟ್ ಮಾಡಬಹುದು ಎಂದು ಹೇಳಿದೆ.
ಎಐ ಸಾಮರ್ಥ್ಯದ ಚಾಟ್ ಬಾಟ್ ಚಾಟ್ ಜಿಪಿಟಿ ತಯಾರಕ ಕಂಪನಿ ಓಪನ್ ಎಐ ವೆಬ್‌ಸೈಟ್ ಕಳೆದ ತಿಂಗಳು 100 ಕೋಟಿ ವಿಶಿಷ್ಟ ಸಕ್ರಿಯ ಬಳಕೆದಾರರನ್ನು ಪಡೆಯುವತ್ತ ಹತ್ತಿರವಾಗುತ್ತಿದೆ. ಅಲ್ಲಿಗೆ ಓಪನ್ ಎಐ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದಿದ 50 ವೆಬ್ಸೈಟ್ಗಳಲ್ಲಿ ಒಂದಾಗಲಿದೆ. ಓಪನ್ ಎಐ ನ ವೆಬ್‌ಸೈಟ್ ಓಪನ್ ಎಐ ಡಾಟ್ ಕಾಂ ಒಂದು ತಿಂಗಳೊಳಗೆ ಟ್ರಾಫಿಕ್ ಪ್ರಮಾಣದಲ್ಲಿ ಶೇಕಡಾ 54.21 ರಷ್ಟು ಬೆಳೆದಿದೆ ಎಂದು ಅಮೆರಿಕ ಮೂಲದ SaaS Webflow ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಮಾರ್ಕೆಟಿಂಗ್ ಏಜೆನ್ಸಿ VezaDigital ವರದಿ ತಿಳಿಸಿದೆ. ಮಾರ್ಚ್‌ನಲ್ಲಿ ಒಟ್ಟು 847.8 ಮಿಲಿಯನ್ ಅನನ್ಯ ಸಂದರ್ಶಕರು ಓಪನ್‌ಎಐ ವೆಬ್‌ಸೈಟ್‌ಗೆ ಭೇಟಿ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಇದು ಜಾಗತಿಕ ಶ್ರೇಯಾಂಕದಲ್ಲಿ ಒಂಬತ್ತು ಸ್ಥಾನಗಳಷ್ಟು ಏರಿಕೆಯಾಗಿ 18 ನೇ ಸ್ಥಾನಕ್ಕೆ ತಲುಪಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ