Galaxy F54 5G: ಜೂನ್ 6ಕ್ಕೆ ಗ್ಯಾಲಕ್ಸಿ F54 5G ಬಿಡುಗಡೆ: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಹೊಸ ಫೋನ್

108MP Camera Phones: 108 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಗ್ಯಾಲಕ್ಸಿ F54 5G (Galaxy F54 5G) ಸ್ಮಾರ್ಟ್‌ಫೋನ್‌ ಇದೇ ಜೂನ್ 6ಕ್ಕೆ ಮಾರುಕಟ್ಟೆಗೆ ಅಪ್ಪಳಿಸಲಿದೆ.

Galaxy F54 5G: ಜೂನ್ 6ಕ್ಕೆ ಗ್ಯಾಲಕ್ಸಿ F54 5G ಬಿಡುಗಡೆ: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಹೊಸ ಫೋನ್
Samsung Galaxy F54 5G
Follow us
Vinay Bhat
|

Updated on: Jun 01, 2023 | 3:48 PM

ಕ್ಯಾಮೆರಾದ ಸ್ಮಾರ್ಟ್​ಫೋನ್​ಗಳಿಗೆ (Smartphones) ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ 108 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್​ಗಳು ದೇಶದಲ್ಲಿ ಎಗ್ಗಿಲ್ಲದೆ ಸೇಲ್ ಆಗುತ್ತಿದೆ. ಇವುಗಳು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ ಬೇಗನೆ ಸೋಲ್ಡ್ ಔಟ್ ಆಗುತ್ತದೆ. ಇದೀಗ ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ (Samsung) ಕಂಪನಿ ಕ್ಯಾಮೆರಾ ಪ್ರಿಯರಿಗಾಗಿ ಹೊಸ ಮೊಬೈಲ್ ರಿಲೀಸ್ ಮಾಡಲು ಮುಂದಾಗಿದೆ. ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ F ಸರಣಿಯ ಅಡಿಯಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಗ್ಯಾಲಕ್ಸಿ F54 5G (Galaxy F54 5G) ಸ್ಮಾರ್ಟ್‌ಫೋನ್‌ ಅನಾವರಣ ಮಾಡಲು ತಯಾರಿ ನಡೆಸಿದೆ. ಅದ್ಭುತ ಕ್ಯಾಮೆರಾ ಫೀಚರ್ಸ್ ಇರುವ ಈ ಫೋನ್ ಇದೇ ಜೂನ್ 6ಕ್ಕೆ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಫೀಚರ್​ಗಳ ಜೊತೆಗೆ ಗ್ಯಾಲಕ್ಸಿ F54 5G ಫೋನ್​ನ ಬೆಲೆ ಕೂಡ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಮೂಲಗಳ ಪ್ರಕಾರ ಇದರ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆಗೆ 35,999 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್​ನ ಫೀಚರ್ಸ್ ಕೂಡ ಸೋರಿಕೆ ಆಗಿದೆ. ಕ್ಯಾಮೆರಾ ಪ್ರಿಯರಿಗೆ ಈ ಮೊಬೈಲ್ ಹೇಳಿಮಾಡಿಸಿದಂತಿದ್ದು ಅನೇಕ ಆಯ್ಕೆಗಳನ್ನು ನೀಡಲಾಗಿದೆ.

Asus Expertbook: ಏಸಸ್ ಎಕ್ಸ್​ಪರ್ಟ್​ಬುಕ್ LAPTOP ಗ್ಯಾಜೆಟ್ ರಿವ್ಯೂ | Gadget Review | Unboxing

ಇದನ್ನೂ ಓದಿ
Image
Facebook Scam: ಫೇಸ್​ಬುಕ್ ಹೊಸ ಸ್ಕ್ಯಾಮ್​ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು
Image
Virus: ಶಾಕಿಂಗ್: ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಕ್ಕೂ ಹೆಚ್ಚು ಆ್ಯಪ್​ಗಳಿಗೆ ವೈರಸ್: ನಿಮ್ಮಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ
Image
Vivo S17 Series: ಬಿಡುಗಡೆ ಆಯಿತು ವಿವೋ S ಸರಣಿಯ ಮೂರು ಹೊಸ ಸ್ಮಾರ್ಟ್​ಫೋನ್ಸ್: ಯಾವುದು?, ಬೆಲೆ ಎಷ್ಟು?
Image
ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿರುವ ಅನುಮಾನವಿದೆಯೇ? ಹೀಗೆ ಪರೀಕ್ಷಿಸಿಕೊಳ್ಳಿ

ಲೀಕ್ ಆಗಿರುವ ಮಾಹಿತಿಯ ಪ್ರಕಾರ ಗ್ಯಾಲಕ್ಸಿ F54 5G ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರಲಿದ್ದು, 6.67 ಇಂಚಿನ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಪಡೆದಿರಲಿದೆ. ಬಲಿಷ್ಠವಾದ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್‌ ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್‌ ಸಪೋರ್ಟ್‌ ಸಹ ಪಡೆದಿರಲಿದೆ. ಜೊತೆಗೆ 6GB RAM + 128GB ಮತ್ತು 8GB RAM + 256GB ಆಯ್ಕೆಗಳಲ್ಲಿ ಬರುವುದು ಬಹುತೇಕ ಖಚಿತ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು ಬರೋಬ್ಬರಿ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಇದು ಫೋಟೋಗ್ರಫಿಗೆ ಸೂಕ್ತವಾಗಿದ್ದು ಅತ್ಯುತ್ತಮ ಕ್ವಾಲಿಟಿಯಲ್ಲಿ ವಿಡಿಯೋವನ್ನು ಸೆರೆಹಿಡಿಯುತ್ತದೆ. ಇದರಲ್ಲಿರುವ ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ನೈಟೋಗ್ರಫಿ ಎಂಬ ವಿಶೇಷ ಆಯ್ಕೆ ನೀಡಾಗಿದ್ದು, ಇದರ ಮೂಲಕ ಮಂದ ಬೆಳಕಿನಲ್ಲಿ ಕೂಡ ಅತ್ಯುತ್ತಮ ಫೋಟೋ ಕ್ಲಿಕ್ಕಿಸಬಹುದು.

ಗ್ಯಾಲಕ್ಸಿ F54 5G ಫೋನ್ ದೀರ್ಘ ಸಮಯ ಬಾಳಕೆ ಬರುವ 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದು 5G ಬೆಂಬಲ ಪಡೆದುಕೊಂಡಿದೆ. ಜೊತೆಗೆ 4ಜಿ ಎಲ್​ಟಿಇ, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್-C ಪೋರ್ಟ್ ಆಯ್ಕೆಗಳು ಇರಲಿವೆ. ಕಡಿಮೆ ಬೆಲೆಗೆ ಉತ್ತಮ ಕ್ಯಾಮೆರಾ, ಡೀಸೆಂಟ್ ಪ್ರೊಸೆಸರ್, ಬಿಗ್ ಬ್ಯಾಟರಿಯ ಫೋನ್ ಖರೀದಿಸುವ ಪ್ಲಾನ್​ನಲ್ಲಿ ನೀವಿದ್ದರೆ ಈ ಫೋನ್​ಗಾಗಿ ಕೆಲ ದಿನಗಳ ಕಾಲ ಕಾಯುವುದು ಉತ್ತಮ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ