Virus: ಶಾಕಿಂಗ್: ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಕ್ಕೂ ಹೆಚ್ಚು ಆ್ಯಪ್​ಗಳಿಗೆ ವೈರಸ್: ನಿಮ್ಮಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ

Google Play Store: ಡಾ. ವೆಬ್‌ನ ಭದ್ರತಾ ಸಂಶೋಧಕರು, ಬ್ಲೀಪಿಂಗ್‌ಕಂಪ್ಯೂಟರ್‌ನ ಸಹಯೋಗದೊಂದಿಗೆ, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುವ 100 ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿರುವ 'SpinOK' ಎಂಬ ಹೊಸ ಸ್ಪೈವೇರ್ ಅನ್ನು ಗುರುತಿಸಿದ್ದಾರೆ.

Virus: ಶಾಕಿಂಗ್: ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಕ್ಕೂ ಹೆಚ್ಚು ಆ್ಯಪ್​ಗಳಿಗೆ ವೈರಸ್: ನಿಮ್ಮಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ
google play store
Follow us
|

Updated on: Jun 01, 2023 | 1:34 PM

ಆಂಡ್ರಾಯ್ಡ್ ಸ್ಮಾರ್ಟ್​ಫೋನುಗಳಲ್ಲಿರುವ ಗೂಗಲ್ ಪ್ಲೇ ಸ್ಟೋರ್​ನಲ್ಲಿ (Play Store) ನಕಲಿ ಆ್ಯಪ್​ಗಳ ಹಾವಳಿ ದಿನದಿಂದ ದಿಕ್ಕೆ ಹೆಚ್ಚಾಗುತ್ತಿದೆ. ಈ ನಕಲಿ ಆ್ಯಪ್​ಗಳನ್ನು ನೀವು ಡೌನ್ಲೋಡ್ ಮಾಡಿ ಇನ್​ಸ್ಟಾಲ್ ಮಾಡಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಬಳಕೆದಾರರ ಖಾಸಗಿ ಫೋಟೋ, ವಿಡಿಯೋ, ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವುದು ಈ ಆ್ಯಪ್​ನ ಮುಖ್ಯ ಉದ್ದೇಶವಾಗಿದೆ. ಮೊನ್ನೆಯಷ್ಟೆ ದಾಮ್ (Daam) ಎಂಬ ಅಪಾಯಕಾರಿ ಆ್ಯಪ್ ಪ್ಲೇ ಸ್ಟೋರ್​ನಲ್ಲಿ ಕಂಡು ಬಂದಿತ್ತು. ಇದರ ಬಗ್ಗೆ CERT-In ಬಳಕೆದಾರರಿಗೆ ಎಚ್ಚರಿಕೆ ನೀಡಿತ್ತು. ಇದೀಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳಿಗೆ ವೈರಸ್ (Virus) ತಗುಲಿರುವ ಹೊಸ ಮಾಲ್‌ವೇರ್ ಅನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಡಾ. ವೆಬ್‌ನ ಭದ್ರತಾ ಸಂಶೋಧಕರು, ಬ್ಲೀಪಿಂಗ್‌ಕಂಪ್ಯೂಟರ್‌ನ ಸಹಯೋಗದೊಂದಿಗೆ, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುವ 100 ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿರುವ ‘SpinOK’ ಎಂಬ ಹೊಸ ಸ್ಪೈವೇರ್ ಅನ್ನು ಗುರುತಿಸಿದ್ದಾರೆ. ಅಚ್ಚರಿ ಎಂದರೆ ಈ ಅಪ್ಲಿಕೇಷನ್​ಗಳು ಒಟ್ಟು 400 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿವೆ. ಈ ಟ್ರೋಜನ್ ಮಾಲ್‌ವೇರ್ ಜಾಹೀರಾತಿನ ಮೂಲಕ ಕಾಣಿಸಿಕೊಳ್ಳುತ್ತದಂತೆ. ಬಳಕೆದಾರರನ್ನು ಆಕರ್ಷಿಸಲು ದೈನಂದಿನ ಬಹುಮಾನದ ಆಸೆ ಹುಟ್ಟಿಸಿ ಮಿನಿಗೇಮ್‌ಗಳನ್ನು ಆಡುವಂತೆ ಪ್ರೇರೇಪಿಸುತ್ತದಂತೆ. ಇದನ್ನು ಡೌನ್‌ಲೋಡ್ ಮಾಡಿದರೆ ಬಳಕೆದರರ ಖಾಸಗಿ ಡೇಟಾವನ್ನು ಕಳೆದುಕೊಳ್ಳುತ್ತಾರೆ.

Nokia 105: ನೋಕಿಯಾ ಬೇಸಿಕ್ ಫೋನ್ ಮೂಲಕವೇ ಯುಪಿಐ ಪೇ ಮಾಡಿ

ಇದನ್ನೂ ಓದಿ
Image
Vivo S17 Series: ಬಿಡುಗಡೆ ಆಯಿತು ವಿವೋ S ಸರಣಿಯ ಮೂರು ಹೊಸ ಸ್ಮಾರ್ಟ್​ಫೋನ್ಸ್: ಯಾವುದು?, ಬೆಲೆ ಎಷ್ಟು?
Image
ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿರುವ ಅನುಮಾನವಿದೆಯೇ? ಹೀಗೆ ಪರೀಕ್ಷಿಸಿಕೊಳ್ಳಿ
Image
Asus Expertbook: ಏಸಸ್ ಎಕ್ಸ್​ಪರ್ಟ್​ಬುಕ್ LAPTOP ಗ್ಯಾಜೆಟ್ ರಿವ್ಯೂ | Gadget Review | Unboxing
Image
iQoo Z7s 5G: ಸೂಪರ್ ಸ್ಪೀಡ್ ಫೋನ್ ಕ್ರೇಜಿ ಬೆಲೆಗೆ ಲಭ್ಯ

ಡಾ. ವೆಬ್ ವರದಿಯು ವೈರಸ್ ಅಟ್ಯಾಕ್ ಆಗಿರುವ ಎಲ್ಲಾ 101 ಅಪ್ಲಿಕೇಶನ್‌ಗಳ ಹೆಸರನ್ನು ಬಹಿರಂಗಪಡಿಸಿದೆ. ಇದರಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆಗಿರುವ ಟಾಪ್ 10 ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ.

Noizz: video editor with music (ಸುಮಾರು 100,000,000 ಇನ್​ಸ್ಟಾಲ್ ಆಗಿದೆ).

Zapya – File Transfer, Share (ಸುಮಾರು 100,000,000 ಇನ್​ಸ್ಟಾಲ್ ಆಗಿದೆ).

VFly: video editor&video maker (ಸುಮಾರು 50,000,000 ಇನ್​ಸ್ಟಾಲ್ ಆಗಿದೆ).

MVBit – MV video status maker (ಸುಮಾರು 50,000,000 ಇನ್​ಸ್ಟಾಲ್ ಆಗಿದೆ).

Biugo – video maker&video editor (ಸುಮಾರು 50,000,000 ಇನ್​ಸ್ಟಾಲ್ ಆಗಿದೆ).

Crazy Drop (ಸುಮಾರು 10,000,000 ಇನ್​ಸ್ಟಾಲ್ ಆಗಿದೆ).

Cashzine – Earn money reward (ಸುಮಾರು10,000,000 ಇನ್​ಸ್ಟಾಲ್ ಆಗಿದೆ).

Fizzo Novel – Reading Offline (ಸುಮಾರು 10,000,000 ಇನ್​ಸ್ಟಾಲ್ ಆಗಿದೆ).

CashEM: Get Rewards (ಸುಮಾರು 5,000,000 ಇನ್​ಸ್ಟಾಲ್ ಆಗಿದೆ).

Tick: watch to earn (ಸುಮಾರು 5,000,000 ಇನ್​ಸ್ಟಾಲ್ ಆಗಿದೆ).

ಸಂಶೋಧಕರು ಗೂಗಲ್​ನಲ್ಲಿ ಈ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ಅವುಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಹೆಚ್ಚಾಗಿ ಮೊಬೈಲ್​​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್​​ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಅಥವಾ ಗ್ಯಾಲರಿಯಾಗಿ ಫೇಕ್ ಆ್ಯಪ್​ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ.

ಹೆಚ್ಚಿನ ನಕಲಿ ಆ್ಯಪ್ ತಯಾರಕರು ತಮ್ಮ ಆ್ಯಪ್ ಅನ್ನು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಆಗಿರುತ್ತವೆ. ಹೀಗಾಗಿ ಇಂತಹ ಫೇಕ್ ಆ್ಯಪ್​ಗಳಿಂದ ಎಚ್ಚರವಾಗಿರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ