ಒಪ್ಪೋದಿಂದ ಅಚ್ಚರಿಯ ಬೆಲೆಗೆ ಒಪ್ಪೋ A18 ಸ್ಮಾರ್ಟ್​ಫೋನ್ ಬಿಡುಗಡೆ: ಕೇವಲ 9,999 ರೂ.

|

Updated on: Oct 07, 2023 | 12:21 PM

Oppo A18 Launched in India: ಒಪ್ಪೋ A18 ಅನ್ನು ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 4GB + 64GB ರೂಪಾಂತರಕ್ಕೆ ಕೇವಲ 9,999 ರೂ. ಇದೆ. ಈ ಫೋನ್ ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಪ್ಪೋ ಆನ್‌ಲೈನ್ ಸ್ಟೋರ್ ಮತ್ತು ದೇಶಾದ್ಯಂತ ಇತರ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು.

ಒಪ್ಪೋದಿಂದ ಅಚ್ಚರಿಯ ಬೆಲೆಗೆ ಒಪ್ಪೋ A18 ಸ್ಮಾರ್ಟ್​ಫೋನ್ ಬಿಡುಗಡೆ: ಕೇವಲ 9,999 ರೂ.
Oppo A18
Follow us on

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಿಕ ಕಂಪನಿ ಒಪ್ಪೋ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಆಕರ್ಷಕ ಫೋನೊಂದನ್ನು ಬಿಡುಗಡೆ ಮಾಡಿದೆ. ಅದುವೇ ಒಪ್ಪೋ ಎ18 (Oppo A18). ಈ ಸ್ಮಾರ್ಟ್​ಫೋನ್ ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಅನಾವರಣಗೊಂಡಿತ್ತು. ಅಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದ ಬಳಿಕ ಭಾರತದಲ್ಲೂ ರಿಲೀಸ್ ಮಾಡಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಉತ್ತಮ ಬ್ಯಾಟರಿ, ಕ್ಯಾಮೆರಾ ಆಯ್ಕೆ ಕೂಡ ಇದೆ. ಹಾಗಾದರೆ, ಒಪ್ಪೋ A18 ಫೋನಿನ ಬೆಲೆ, ಫೀಚರ್ಸ್ ಏನಿದೆ ನೋಡೋಣ.

ಭಾರತದಲ್ಲಿ ಒಪ್ಪೋ A18 ಬೆಲೆ:

ಒಪ್ಪೋ A18 ಅನ್ನು ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 4GB + 64GB ರೂಪಾಂತರಕ್ಕೆ ಕೇವಲ 9,999 ರೂ. ಇದೆ. ಈ ಫೋನ್ ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಪ್ಪೋ ಆನ್‌ಲೈನ್ ಸ್ಟೋರ್ ಮತ್ತು ದೇಶಾದ್ಯಂತ ಇತರ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು.

ಒಪ್ಪೋ A18 ಫೀಚರ್ಸ್:

ಒಪ್ಪೋ A18 ಸ್ಮಾರ್ಟ್​ಫೋನ್ 6.56-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) IPS LCD ಡಿಸ್‌ಪ್ಲೇಯೊಂದಿಗೆ 90Hz ನ ರಿಫ್ರೆಶ್ ದರ ಮತ್ತು 720nits ನ ಬ್ರೈಟ್​ನೆಸ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 SoC ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ ColorOS 13.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
ಅಭಿಮಾನಿಗಳ ನಿದ್ದೆ ಕದ್ದಿದ್ದ ಕೆಂಪು ಬಣ್ಣದ ಒನ್​ಪ್ಲಸ್ 11R 5G ಬಿಡುಗಡೆ
ಪಿನ್ ಚಾಟ್: ವಾಟ್ಸ್​ಆ್ಯಪ್​ನಿಂದ ಸದ್ದಿಲ್ಲದೆ ಅಚ್ಚರಿಯ ಫೀಚರ್
ಪೋಕೋ X5 ಪ್ರೊ ಮೇಲೆ ದಾಖಲೆಯ ರಿಯಾಯಿತಿ: ಈ ಆಫರ್ ಮಿಸ್ ಮಾಡ್ಬೇಡಿ
ವಿಶ್ವಕಪ್ ಶುರುವಾಗುತ್ತಿದ್ದಂತೆ ಜಿಯೋದಿಂದ ಊಹಿಸಲಾಗದ ಆಫರ್

ಏನಿದು ವಾಟ್ಸ್​ಆ್ಯಪ್​ನ ಇ-ಮೇಲ್ ವೆರಿಫಿಕೇಷನ್ ಫೀಚರ್: ಇಲ್ಲಿದೆ ನೋಡಿ ಮಾಹಿತಿ

ಕ್ಯಾಮೆರಾ ವಿಚಾರಕ್ಕೆ ಬಂದರೆ, ಒಪ್ಪೋ A18 ನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವಿದೆ, ಇದು 8-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು 5-ಮೆಗಾಪಿಕ್ಸೆಲ್ ಸಂವೇದಕವನ್ನು ಡಿಸ್ ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ನೀಡಲಾಗಿದೆ.

ಈ ಸ್ಮಾರ್ಟ್​ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ 5.3, GPS ಮತ್ತು USB ಟೈಪ್-ಸಿ ಸೇರಿವೆ. ಇದು 3.5 ಎಂಎಂ ಆಡಿಯೊ ಜಾಕ್‌ನೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Sat, 7 October 23