Oppo A54s: ಕುತೂಹಲ ಕೆರಳಿಸಿದ ಬಜೆಟ್ ಬೆಲೆಯ ಒಪ್ಪೋ A54s ಸ್ಮಾರ್ಟ್​ಫೋನಿನ ಫೀಚರ್ಸ್

| Updated By: Vinay Bhat

Updated on: Oct 09, 2021 | 3:00 PM

ಒಪ್ಪೋ A54s ಫೋನಿನ ಲುಕ್ ಹಾಗೂ ಫೀಚರ್ಸ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಈ ಫೋನ್‌ ಬಹುತೇಕ ಒಪ್ಪೋ A16 ಫೋನಿನ ಹೋಲಿಕೆಯನ್ನು ಒಳಗೊಂಡಿದೆ.

Oppo A54s: ಕುತೂಹಲ ಕೆರಳಿಸಿದ ಬಜೆಟ್ ಬೆಲೆಯ ಒಪ್ಪೋ A54s ಸ್ಮಾರ್ಟ್​ಫೋನಿನ ಫೀಚರ್ಸ್
Oppo A54s
Follow us on

ಒಪ್ಪೊ (Oppo) ಮೊಬೈಲ್‌ ಕಂಪನಿ ಬಜೆಟ್ ಬೆಲೆಗೆ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ಎತ್ತಿದ ಕೈ. ಈಗಾಗಲೇ ಕಡಿಮೆ ಬೆಲೆಗೆ ಹಲವು ಶ್ರೇಣಿಯಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿ ಸೈ ಅನಿಸಿಕೊಂಡಿದೆ. ಸದ್ಯ ಅಂತಹದೇ ಮತ್ತೊಂದು ಫೋನ್ ಬಿಡುಗಡೆ ಮಾಡಲು ಒಪ್ಪೋ ಸಿದ್ಧತೆ ನಡೆಸುತ್ತಿದೆ. ಒಪ್ಪೋ ಸಂಸ್ಥೆಯು ತನ್ನ A ಸರಣಿಯಲ್ಲಿ ಒಪ್ಪೋ A54s (Oppo A54s) ಸ್ಮಾರ್ಟ್‌ಫೋನ್ ಅನಾವರಣ ಮಾಡಲು ಸಜ್ಜಾಗಿದ್ದು ಇದರ ಫೀಚರ್ಸ್‌ ಈಗ ಲೀಕ್ ಅಗಿದೆ.

ಒಪ್ಪೋ A54s ಫೋನಿನ ಲುಕ್ ಹಾಗೂ ಫೀಚರ್ಸ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಈ ಫೋನ್‌ ಬಹುತೇಕ ಒಪ್ಪೋ A16 ಫೋನಿನ ಹೋಲಿಕೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಫೋನ್ ಕೆಳ ಬಲಭಾಗದಲ್ಲಿ ಒಪ್ಪೋ ಲೋಗೋ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್ ಶೈನ್‌ ಫಿನಿಶ್ ಇರುವಂತೆ ಕಾಣುತ್ತದೆ. ಫೋನಿನ ಮೇಲ್ಭಾಗದಲ್ಲಿ ವಾಟರ್‌ಡ್ರಾಪ್ ಶೈಲಿಯ ನಾಚ್ ಇದ್ದು, ಇದೊಂದು ಬಜೆಟ್‌ ಬೆಲೆಯ ಫೋನ್‌ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 6.52 ಇಂಚಿನ IPS LCD ಮಾದರಿಯಲ್ಲಿ ಇರಲಿದ್ದು ಇದರ ಜೊತೆಗೆ ಡಿಸ್‌ಪ್ಲೇಯು HD+ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿವೈಸ್‌ ಸಹ ಆಕರ್ಷಕ ಎನ್ನಲಾಗಿದೆ.

ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಬಹುದು. ಇನ್ನುಳಿದಂತೆ ಉಳಿದೆರಡು ರಿಯರ್‌ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಿಂಗ್ ಕ್ಯಾಮೆರಾ ಆಗಿರಲಿವೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ. ಇನ್ನು ಸೆಲ್ಫಿ ಕ್ಯಾಮೆರಾಗಾಗಿ 8 ಮೆಗಾ ಪಿಕ್ಸಲ್ ಸೆನ್ಸಾರ್‌ ನೀಡುವ ಸಾಧ್ಯತೆಗಳಿವೆ.

ಒಪ್ಪೋ A54s ಫೋನ್ ಮೀಡಿಯಾ ಟೆಕ್ ಹೆಲಿಯೋ G35 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11 ಅನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಇವೆ. ಇನ್ನು ಒಪ್ಪೋ A54s ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಮಾಹಿತಿಯು ಈಗ ಲಭ್ಯವಿಲ್ಲ. ಆದರೆ ಲೀಕ್ ವರದಿಯಂತೆ ಈ ಫೋನ್ ಪರ್ಲ್ ಬ್ಲೂ ಮತ್ತು ಕ್ರಿಸ್ಟಲ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ ಎಂದು ಹೇಳಲಾಗಿದೆ.

Blue Aadhaar card: ಏನಿದು ಹೊಸ ಬ್ಲೂ ಆಧಾರ್​ ಕಾರ್ಡ್?, ಇದನ್ನು ಹೇಗೆ ಪಡೆಯುವುದು: ಇಲ್ಲಿದೆ ಎಲ್ಲ ಮಾಹಿತಿ

Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್

(Oppo A54s key specifications include 50-megapixel cameras render leaked)