ಭರ್ಜರಿ ಆಫರ್​ನೊಂದಿಗೆ ಇಂದು ಮೊದಲ ಸೇಲ್ ಕಾಣುತ್ತಿದೆ ಒಪ್ಪೋ ರೆನೋ 6 ಪ್ರೊ 5G ಸ್ಮಾರ್ಟ್‌ಫೋನ್‌

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಒಪ್ಪೋ ರೆನೋ 6 ಪ್ರೊ ಮಾರಾಟ ಆರಂಭವಾಗಿದ್ದು, ವಿಶೇಷ ಆಫರ್​ಗಳ ಮೂಲಕ ಖರೀದಿಸಬಹುದಾಗಿದೆ.

ಭರ್ಜರಿ ಆಫರ್​ನೊಂದಿಗೆ ಇಂದು ಮೊದಲ ಸೇಲ್ ಕಾಣುತ್ತಿದೆ ಒಪ್ಪೋ ರೆನೋ 6 ಪ್ರೊ 5G ಸ್ಮಾರ್ಟ್‌ಫೋನ್‌
Oppo Reno 6

ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಜನಪ್ರಿಯತೆ ಪಡೆದುಕೊಂಡಿರುವ ಒಪ್ಪೋ (Oppo) ಕಂಪೆನಿ ಇತ್ತೀಚೆಗಷ್ಟೆ ಹೊಸ ಒಪ್ಪೋ ರೆನೋ 6 5G ಮತ್ತು ಒಪ್ಪೋ ರೆನೋ 6 ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಈ ಎರಡೂ ಸ್ಮಾರ್ಟ್​ಫೋನ್​ಗಳ ಪೈಕಿ ಒಪ್ಪೋ ರೆನೋ 6 ಪ್ರೊ (Oppo Reno 6 Pro) ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ.

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಒಪ್ಪೋ ರೆನೋ 6 ಪ್ರೊ ಮಾರಾಟ ಆರಂಭವಾಗಿದ್ದು, ವಿಶೇಷ ಆಫರ್​ಗಳ ಮೂಲಕ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. 12GB RAM ಮತ್ತು 256GB ಸ್ಟೋರೆಜ್ ಸಾಮರ್ಥ್ಯದ ಈ ಫೋನಿನ ಬೆಲೆ 39,990 ರೂ. ನಿಗದಿ ಮಾಡಲಾಗಿದೆ.

ಹೆಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಮೊಬೈಲ್ ಕೊಂಡುಕೊಂಡರೆ 4,000 ರೂ. ಕ್ಯಾಶ್​ಬ್ಯಾಕ್ ಆಫರ್ ನೀಡಲಾಗಿದೆ. ಪೇಟಿಯಂ ಗ್ರಾಹಕರಿಗೆ ಶೇ. 15 ರಷ್ಟು ಕ್ಯಾಶ್​ಬ್ಯಾಕ್ ಆಫರ್ ಇದೆ. 3,000 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ಇದೆ.

ಒಪ್ಪೋ ರೆನೋ 6 ಪ್ರೊ ಸ್ಮಾರ್ಟ್​​ಫೋನ್ 6.55-ಇಂಚಿನ ದೊಡ್ಡ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದು 12GB RAM ವರೆಗೆ ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 65W ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸುತ್ತದೆ.

ನಾಳೆ BSNL ನಿಂದ ಬಂಪರ್ ಪ್ಲಾನ್ ಬಿಡುಗಡೆ: ದಿನಕ್ಕೆ 5GB ಡೇಟಾ, 84 ದಿನ ವ್ಯಾಲಿಡಿಟಿ, ಬೆಲೆ ಎಷ್ಟು?

Redmi Note 10T 5G: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯ್ತು ಭರ್ಜರಿ ಫೀಚರ್​ನ ರೆಡ್ನಿ ನೋಟ್ 10T ‘5G’ ಸ್ಮಾರ್ಟ್​ಫೋನ್

(Oppo Reno 6 Pro 5G goes on first sale today via Flipkart best offer price)

Click on your DTH Provider to Add TV9 Kannada