OTT Plans: ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಹಾಟ್​ಸ್ಟಾರ್: ಯಾವುದು ಬೆಸ್ಟ್​?

| Updated By: ಝಾಹಿರ್ ಯೂಸುಫ್

Updated on: Jul 30, 2021 | 6:02 PM

OTT Plans Compared: ದೇಶದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸೋನಿ ಲೈವ್ ಹಾಗೂ ಹಾಟ್​ಸ್ಟಾರ್ ಅಧಿಪತ್ಯ ಸ್ಥಾಪಿಸಿದ್ದು, ಹೀಗಾಗಿ ಈ ಮೂರು ಒಟಿಟಿ ಫ್ಲಾಟ್​ಫಾರ್ಮ್​ಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ.

OTT Plans: ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಹಾಟ್​ಸ್ಟಾರ್: ಯಾವುದು ಬೆಸ್ಟ್​?
ott plans comparison
Follow us on

ಭಾರತದ ಮನರಂಜನಾ ಕ್ಷೇತ್ರದಲ್ಲಿ ಲೈವ್ ಸ್ಟ್ರೀಮಿಂಗ್ ಆ್ಯಪ್​ಗಳು ಹಾಗೂ ಫ್ಲಾಟ್​ಫಾರ್ಮ್​ಗಳು ಹೊಸ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಒಟಿಟಿ ಫ್ಲಾಟ್​ಫಾರ್ಮ್​ಗಳಂತು ಸಿನಿಪ್ರಿಯರ ನೆಚ್ಚಿನ ತಾಣವಾಗಿ ಮಾರ್ಟಿಪಟ್ಟಿದೆ. ಈಗಾಗಲೇ ವಿಶ್ವದ ಪ್ರಮುಖ ಒಟಿಟಿ ಫ್ಲಾಟ್​ಫಾರ್ಮ್​ಗಳಾದ ನೆಟ್​ಫ್ಲಿಕ್ಸ್ ( Netflix ), ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video ), ಸೋನಿ ಲೈವ್ (Sony Liv ) ಮತ್ತು ಡಿಸ್ನಿ + ಹಾಟ್​ಸ್ಟಾರ್ ( Disney Hotstar )​ಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರ, ವೆಬ್ ಸಿರೀಸ್ ಸೇರಿದಂತೆ ಹಲವು ಮನರಂಜನಾತ್ಮಕ ಕಾರ್ಯಕ್ರಮಗಳನ್ನು ವೀಕ್ಷಕರ ಮುಂದಿಡುತ್ತಿದೆ.

ಪ್ರಸ್ತುತ ದೇಶದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸೋನಿ ಲೈವ್ ಹಾಗೂ ಹಾಟ್​ಸ್ಟಾರ್ ಅಧಿಪತ್ಯ ಸ್ಥಾಪಿಸಿದ್ದು, ಹೀಗಾಗಿ ಈ ಮೂರು ಒಟಿಟಿ ಫ್ಲಾಟ್​ಫಾರ್ಮ್​ಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಈ ಫಲವಾಗಿ ಗ್ರಾಹಕರಿಗೂ ಹಲವು ರೀತಿಯ ಆಫರ್​ಗಳು ಕೂಡ ಲಭಿಸುತ್ತಿರುವುದು ವಿಶೇಷ. ಹೀಗೆ ಈ ಕಂಪೆನಿಗಳು ನೀಡುತ್ತಿರುವ ರಿಚಾರ್ಜ್​ ಆಫರ್​ಗಳಲ್ಲಿ ಯಾವುದು ಬೆಸ್ಟ್ ಎಂದು ನೋಡುವುದಾದರೆ…

ನೆಟ್‌ಫ್ಲಿಕ್ಸ್ ( Netflix ):
ನಿಸ್ಸಂದೇಹವಾಗಿ ನೆಟ್‌ಫ್ಲಿಕ್ಸ್ ದೇಶದ ಅತ್ಯಂತ ಜನಪ್ರಿಯ OTT ಫ್ಲಾಟ್​ಫಾರ್ಮ್​ ಎಂದೇ ಹೇಳಬಹುದು. ಸಕ್ರೆಡ್ ಗೇಮ್ಸ್ ವೆಬ್ ಸಿರೀಸ್ ಮೂಲಕ ಜನಮನ್ನಣೆ ಪಡೆದ ನೆಟ್​ಫ್ಲಿಕ್ ಆ ಬಳಿಕ ಹಿಂತಿರುಗಿ ನೋಡಿಲ್ಲ. ದೆಹಲಿ ಕ್ರೈಮ್ಸ್, ಜಮ್ತಾರಾ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಂಡರು. ಇದರ ಜೊತೆ ಬಾಲಿವುಡ್ ಪ್ರೀಮಿಯರ್ ಮೂವೀಸ್, ಜನಪ್ರಿಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಾದ ಬಿಬಿಸಿ ಒನ್‌ನ ಎ ಸೂಟಬಲ್ ಬಾಯ್, ಡರ್ಟಿ ಜಾನ್ ಬ್ರಾವೋ ಹಲವು ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಇದೀಗ ಸ್ಥಳೀಯ ಭಾಷೆಗಳತ್ತ ಕೂಡ ನೆಟ್​ಫ್ಲಿಕ್ಸ್​ ಮುಖ ಮಾಡಿರುವುದು ವಿಶೇಷ. ಈ ಒಟಿಟಿ ಫ್ಲಾಟ್​ಫಾರ್ಮ್​ನ ರಿಚಾರ್ಜ್​ ಪ್ಲ್ಯಾನ್​ಗಳು ಹೀಗಿವೆ.

ರಿಚಾರ್ಜ್​ ಯೋಜನೆಗಳು ( Netflix Recharge plans ) :
ಮೊಬೈಲ್ ಪ್ಲ್ಯಾನ್ : ತಿಂಗಳಿಗೆ 199 ರೂ., 480p ಪಿ ರೆಸಲ್ಯೂಶನ್, ಫೋನ್ ಮತ್ತು ಟ್ಯಾಬ್ಲೆಟ್​ನಲ್ಲಿ ಒಬ್ಬರು ಮಾತ್ರ ಲಾಗಿನ್ ಆಗಿ ನೆಟ್​ಫ್ಲಿಕ್ಸ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಬೇಸಿಕ್ ಪ್ಲ್ಯಾನ್ : ತಿಂಗಳಿಗೆ 499 ರೂ., 480p ರೆಸಲ್ಯೂಶನ್, ಮೊಬೈಲ್, ಕಂಪ್ಯೂಟರ್, ಟಿವಿ ಎಲ್ಲದರಲ್ಲೂ ವೀಕ್ಷಿಸಬಹದು. ಈ ಪ್ಲ್ಯಾನ್​ನಲ್ಲೂ ಏಕೈಕ ಲಾಗಿನ್ ಮಾತ್ರ ನೀಡಲಾಗಿದೆ.
ಸ್ಟ್ಯಾಂಡರ್ಡ್ ಪ್ಲ್ಯಾನ್ : ತಿಂಗಳಿಗೆ 649 ರೂ, 1080p ರೆಸಲ್ಯೂಶನ್, ಮೊಬೈಲ್, ಕಂಪ್ಯೂಟರ್, ಟಿವಿ ಎಲ್ಲದರಲ್ಲೂ ವೀಕ್ಷಿಸಬಹದು. ಆದರೆ ಇಲ್ಲಿ ಇಬ್ಬರು ಏಕಕಾಲಕ್ಕೆ ಲಾಗಿನ್ ಆಗಿ ವೀಕ್ಷಿಸಬಹುದು.
ಪ್ರೀಮಿಯಂ ಪ್ಲ್ಯಾನ್: ತಿಂಗಳಿಗೆ ರೂ 799, 4K HDR ರೆಸಲ್ಯೂಶನ್, ಮೊಬೈಲ್, ಕಂಪ್ಯೂಟರ್, ಟಿವಿ ಎಲ್ಲದರಲ್ಲೂ ವೀಕ್ಷಿಸಬಹದು. ಇಲ್ಲಿ 4 ಲಾಗಿನ್ ಅವಕಾಶವನ್ನು ನೀಡಲಾಗಿರುವುದು ವಿಶೇಷ. ಅಂದರೆ ಏಕಕಾಲದಲ್ಲಿ ನಾಲ್ಕು ಮಂದಿ ತಮಗೆ ಇಷ್ಟವಿರುವ ನೆಟ್​ಫ್ಲಿಕ್ಸ್​ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಅಮೆಜಾನ್ ಪ್ರೈಮ್ ವಿಡಿಯೋ ( Amazon Prime Video ):
ಅಮೆಜಾನ್ ಪ್ರೈಮ್ ವಿಡಿಯೋ ಕೂಡ ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಈ ಒಟಿಟಿ ಫ್ಲಾಟ್​ಫಾರ್ಮ್​ ಕೂಡ ಬಾಲಿವುಡ್ ಸೇರಿದಂತೆ ಸ್ಥಳೀಯ ಭಾಷೆಗಳ ಚಲನಚಿತ್ರ ಹಾಗೂ ವೆಬ್ ಸಿರೀಸ್ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದುಕೊಂಡಿದೆ. ಈಗಾಗಲೇ ಕನ್ನಡ ಸೇರಿದಂತೆ ಹಲವು ಭಾಷೆಗಳ ಸೂಪರ್ ಹಿಟ್ ಚಿತ್ರಗಳಿಗೆ ಅಮೆಜಾನ್ ಪ್ರೈಮ್ ವೇದಿಕೆಯಾಗಿದೆ. ಇದರ ರಿಚಾರ್ಜ್ ಪ್ಲ್ಯಾನ್​ಗಳು ಹೀಗಿವೆ.

ರಿಚಾರ್ಜ್​ ಯೋಜನೆಗಳು ( Amazon Prime Recharge Plans)
ಮಾಸಿಕ : 129 ರೂ, 4K HDR ರೆಸಲ್ಯೂಶನ್ (ಡಿಸ್​ಪ್ಲೇ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಅವಲಂಬಿಸಿರಲಿದೆ), ಏಕಕಾಲದಲ್ಲಿ ಮೂವರು ಲಾಗಿನ್ ಆಗಬಹುದು.
ತ್ರೈಮಾಸಿಕ : ರೂ 329 ರೂ, 4K HDR ರೆಸಲ್ಯೂಶನ್ (ಡಿಸ್​ಪ್ಲೇ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಅವಲಂಬಿಸಿರಲಿದೆ), ಏಕಕಾಲದಲ್ಲಿ ಮೂವರು ಲಾಗಿನ್ ಆಗಬಹುದು.
ವಾರ್ಷಿಕ : 999 ರೂ, 4K HDR ರೆಸಲ್ಯೂಶನ್ (ಡಿಸ್​ಪ್ಲೇ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಅವಲಂಬಿಸಿರಲಿದೆ). ಏಕಕಾಲದಲ್ಲಿ ಮೂವರು ಲಾಗಿನ್ ಆಗಬಹುದು.

ಡಿಸ್ನಿ+ ಹಾಟ್ ಸ್ಟಾರ್ ( Disney Hotstar )
ಭಾರತೀಯ ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಹಾಟ್​ಸ್ಟಾರ್ ಕೂಡ ಒಂದು. ಮುಖ್ಯವಾಗಿ ಈ ಪ್ಲಾಟ್​ಫಾರ್ಮ್​ ಐಪಿಎಲ್​ಗೆ ವೇದಿಕೆ ರೂಪಿಸಿರುವುದು ವಿಶೇಷ. ಹೀಗಾಗಿಯೇ ಅತ್ಯಂತ ಜನಪ್ರಿಯ ವಿಷಯದಲ್ಲಿ ಹಾಟ್​ ಸ್ಟಾರ್ ಮುಂಚೂಣಿಯಲ್ಲಿದೆ. ಕ್ರಿಕೆಟ್​ ಅಲ್ಲದೆ, ಹಲವು ಕಾರ್ಯಕ್ರಮಗಳು, ಸಿನಿಮಾಗಳು ಹಾಗೂ ಲೈವ್ ಚಾನೆಲ್​ಗಳನ್ನು ಹಾಟ್​ ಸ್ಟಾರ್ ಮೂಲಕ ವೀಕ್ಷಿಸಬಹುದು. ಹಾಗಿದ್ರೆ ಈ ಪ್ಲಾಟ್​ಫಾರ್ಮ್​ನ ರಿಚಾರ್ಜ್ ಪ್ಲ್ಯಾನ್​ಗಳಾವುವು ನೋಡೋಣ.

ರಿಚಾರ್ಜ್​ ಯೋಜನೆಗಳು ( Disney Hotstar Recharge plans ):
ವಿಐಪಿ : ವರ್ಷಕ್ಕೆ 399 ರೂ., 1080ಪಿ ರೆಸಲ್ಯೂಶನ್, ಒಬ್ಬರು ಮಾತ್ರ ಲಾಗಿನ್ ಆಗಬಹುದು.
ಪ್ರೀಮಿಯಂ : ತಿಂಗಳಿಗೆ 299 ರೂ ಅಥವಾ ವರ್ಷಕ್ಕೆ 1,499 ರೂ. ಇದರಲ್ಲಿ ಡಾಲ್ಬಿ ಅಟ್ಮೋಸ್ ಮತ್ತು ಡಾಲ್ಬಿ ವಿಷನ್ ಜೊತೆ 4ಕೆ ರೆಸಲ್ಯೂಶನ್​ನಲ್ಲಿ ವಿಡಿಯೋ ವೀಕ್ಷಿಸಬಹುದು. ಏಕಕಾಲದಲ್ಲಿ ಇಬ್ಬರು ಲಾಗಿನ್ ಆಗಬಹುದು.

ಸೋನಿ ಲೈವ್ ( Sony Liv ):
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದ ಮತ್ತೊಂದು ಒಟಿಟಿ ಪ್ಲಾಟ್​ಫಾರ್ಮ್ ಅಂದರೆ ಸೋನಿ ಲೈವ್. ಫುಟ್​ಬಾಲ್ ಲೈವ್ ಹಾಗೂ ಕ್ರಿಕೆಟ್​ ಟೂರ್ನಿಗಳ ಲೈವ್ ಮೂಲಕ ಹೆಚ್ಚಿನ ವೀಕ್ಷಕರನ್ನು ಸೆಳೆದುಕೊಂಡಿರುವ ಸೋನಿ ಲೈವ್​ನಲ್ಲಿ ನೀವು ಸಿನಿಮಾ ಹಾಗೂ ರಿಯಾಲಿಟಿ ಶೋಗಳನ್ನು ಕೂಡ ವೀಕ್ಷಿಸಬಹುದು. ಹಾಗಿದ್ರೆ ಇದರ ರಿಚಾರ್ಜ್ ಪ್ಲ್ಯಾನ್​ಗಳಾವುವು ನೋಡೋಣ.

ರಿಚಾರ್ಜ್​ ಯೋಜನೆಗಳು ( Sony Liv  Recharge Plans ):

ಸ್ಪೆಷಲ್ : ವರ್ಷಕ್ಕೆ 199 ರೂ., ಈ ಪ್ಲ್ಯಾನ್​ನಲ್ಲಿ ಒರಿಜಿನಲ್ಸ್ ಕಾರ್ಯಕ್ರಮ ವೀಕ್ಷಿಸಲಾಗುವುದಿಲ್ಲ (ಪ್ರಮುಖ ಸಿನಿಮಾ ಅಥವಾ ವೆಸ್ ಸಿರೀಸ್). ಹಾಗೆಯೇ ಕ್ರೀಡಾ ನೇರ ಪ್ರಸಾರವಿರಲ್ಲ. ಜಾಹೀರಾತು ಇರಲಿದ್ದು, ಒಬ್ಬರು ಮಾತ್ರ ಲಾಗಿನ್ ಆಗಬಹುದು.
WWE ನೆಟ್​ವರ್ಕ್​ : ವರ್ಷಕ್ಕೆ 299ರೂ, ಒಬ್ಬರು ಮಾತ್ರ ಲಾಗಿನ್ ಆಗಬಹುದು. ಈ ಪ್ಲ್ಯಾನ್​ನಲ್ಲಿ ನೀವು WWE ಕಾರ್ಯಕ್ರಮ ಮಾತ್ರ ವೀಕ್ಷಿಸಬಹುದು.
ಸ್ಪೆಷಲ್ + : ವರ್ಷಕ್ಕೆ 399 ರೂ. ಈ ಪ್ಲ್ಯಾನ್​ನಲ್ಲಿ ಒರಿಜಿನಲ್ಸ್ ಕಾರ್ಯಕ್ರಮ ವೀಕ್ಷಿಸಲಾಗುವುದಿಲ್ಲ (ಪ್ರಮುಖ ಸಿನಿಮಾ ಅಥವಾ ವೆಸ್ ಸಿರೀಸ್). ಹಾಗೆಯೇ ಕ್ರೀಡಾ ನೇರ ಪ್ರಸಾರವಿರಲ್ಲ. ಒಬ್ಬರು ಮಾತ್ರ ಲಾಗಿನ್ ಆಗಬಹುದು.
ಪ್ರೀಮಿಯಂ : ತಿಂಗಳಿಗೆ 299 ರೂ. ಅರ್ಧ ವರ್ಷಕ್ಕೆ ರೂ 699 ರೂ., ವಾರ್ಷಿಕ ರೂ 999 ರೂ., ಇಬ್ಬರು ಲಾಗಿನ್ ಆಗಬಹುದು.

ಇದನ್ನೂ ಓದಿ: Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(OTT Plans Compared Netflix v Amazon Prime Video v Hotstar)