AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್ ಮೀಡಿಯಾ, ಒಟಿಟಿಗೆ ಹೊಸ ಕಾನೂನು; ಟ್ವಿಟ್ಟರ್, ಫೇಸ್​ಬುಕ್ ಕೆಲಸ ಮಾಡೋದು ನಿಲ್ಲಿಸುತ್ತಾ?

ಒಟಿಟಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಮಾಹಿತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಕಾನೂನು ಅಳವಡಿಸಿಕೊಳ್ಳುವುದುಕ್ಕೆ ಮೇ 25, 2021 ಕೊನೆ ದಿನ. ಫೇಸ್​ಬುಕ್, ಟ್ವಿಟ್ಟರ್ ಅವುಗಳನ್ನು ಅಳವಡಿಸಿಕೊಂಡಿಲ್ಲ.

ಸೋಷಿಯಲ್ ಮೀಡಿಯಾ, ಒಟಿಟಿಗೆ ಹೊಸ ಕಾನೂನು; ಟ್ವಿಟ್ಟರ್, ಫೇಸ್​ಬುಕ್ ಕೆಲಸ ಮಾಡೋದು ನಿಲ್ಲಿಸುತ್ತಾ?
ಟ್ವಿಟ್ಟರ್
Srinivas Mata
|

Updated on: May 25, 2021 | 11:58 AM

Share

ನವದೆಹಲಿ: ಡಿಜಿಟಲ್​ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಇನ್ನೇನು ಜಾರಿಗೆ ಬರಲಿವೆ. ಡಿಜಿಟಲ್ ಮಾಹಿತಿಗೆ ನೀತಿ ಸಂಹಿತೆ ಮತ್ತು ಕುಂದುಕೊರತೆ ಪರಿಹಾರಕ್ಕೆ ಮೂರು ಹಂತದ ವ್ಯವಸ್ಥೆಯು ಸೋಷಿಯಲ್ ಮೀಡಿಯಾದ ಅತಿರಥ- ಮಹಾರಥ ಕಂಪೆನಿಗಳಲ್ಲಿ ಬರಲಿದೆ. ಟ್ವಿಟ್ಟರ್, ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಿಂದ ಈ ಪೈಕಿ ಯಾವುದಕ್ಕಾದರೂ ಬದ್ಧವಾಗಿರಬೇಕು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸುದ್ದಿ ಸೈಟ್​ಗಳು ಹಾಗೂ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಕಳೆದ ಫೆಬ್ರವರಿಯಲ್ಲಿ ನಿಯಮಾವಳಿಗಳನ್ನು ಘೋಷಣೆ ಮಾಡಲಾಯಿತು. ಅವುಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮೂರು ತಿಂಗಳು ಸಮಯ ಕೂಡ ನೀಡಲಾಯಿತು. ಮೂಲಗಳು ಹೇಳುವ ಪ್ರಕಾರ, ಕಂಪೆನಿಗಳೇನಾದರೂ ನಿಯಮಗಳನ್ನು ಅನುಸರಿಸುವುದಕ್ಕೆ ವಿಫಲವಾದಲ್ಲಿ ಅವುಗಳ ಮಧ್ಯವರ್ತಿ (ಇಂಟರ್​ಮೀಡಿಯರಿ) ಸ್ಥಾನಮಾನ ಕೊನೆಯಾಗುತ್ತದೆ ಹಾಗೂ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಹುದು.

ಮಧ್ಯವರ್ತಿಗಳಾಗಿ ತಮ್ಮ ವಿವೇಚನೆಯನ್ನು ಬಳಸಿ, ಮಾರ್ಪಾಟು ಮಾಡಿಕೊಳ್ಳುವುದಕ್ಕೆ ಮತ್ತು ಮಾಹಿತಿ ಬಗ್ಗೆ ತೀರ್ಪು ತೆಗೆದುಕೊಳ್ಳುವ ಸಂಗತಿಗೆ ಸಂಬಂಧಿಸಿದಂತೆ ಸುರಕ್ಷತೆಯನ್ನು ಸಮರ್ಥಿಸಿಕೊಂಡರೂ ಭಾರತೀಯ ಸಂವಿಧಾನ ಮತ್ತು ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ತಂದಿರುವ ಹೊಸ ನಿಯಮದಲ್ಲಿ ಭಾರತ ಮೂಲದ ಅಧಿಕಾರಿಗಳ ನೇಮಕ, ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ವಿಲೇವಾರಿ, ಆಕ್ಷೇಪಾರ್ಹ ಮಾಹಿತಿಯ ನಿಗಾ, ನಿಯಮಾವಳಿಗಳ ವರದಿ ಮತ್ತು ಆಕ್ಷೇಪಾರ್ಹ ಮಾಹಿತಿಯನ್ನು ತೆಗೆದುಹಾಕುವುದು ಇವೆಲ್ಲವೂ ಸೇರಿಕೊಂಡಿದೆ.

ಹೊಸ ಕಾನೂನು ಪ್ರಕಾರ, ಮೇಲುಸ್ತುವಾರಿ ಸಮಿತಿಯಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸದಸ್ಯರಿರುತ್ತಾರೆ. ಯಾವುದಾದರೂ ಕಂಪೆನಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಈ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಂಡು, ವಿಚಾರಣೆ ನಡೆಸಬಹುದು. ಸರ್ಕಾರದಿಂದ ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯವರನ್ನು ನೇಮಕ ಮಾಡುತ್ತದೆ. ಅವರಿಗೆ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರ ಇರುತ್ತದೆ. ಮೇಲ್ಮನವಿ ಸಮಿತಿಗೆ ಯಾವುದೇ ಸೋಷಿಯಲ್ ಮೀಡಿಯಾ ಕಂಪೆನಿಯು ಮಾಹಿತಿ ವಿಚಾರದಲ್ಲಿ ಕಾನೂನು ಮೀರುತ್ತಿರುವುದು ಕಂಡುಬಂದಲ್ಲಿ ಅಂಥದ್ದನ್ನು ತಡೆಹಿಡಿಯುವಂತೆ ಸರ್ಕಾರದ ನಿಯಂತ್ರಣದಲ್ಲಿರುವ ಸಮಿತಿಗೆ ಕೇಳಬಹುದು.

ಫೆಬ್ರವರಿ 25, 2021ರಂದು ಎಲೆಕ್ಟ್ರಾನಿಕ್ಸ್ ಮತ್ತು ಇನ್​ಫರ್ಮೇಷನ್ ಟೆಕ್ನಾಲಜಿ ಸಚಿವಾಲಯವು ನಿಯಮಾವಳಿಗಳ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಈ ನಿಯಮಾವಳಿಗೆ ಬದ್ಧವಾಗುವಂತೆ, ಮೇ 25ನೇ ತಾರೀಕಿಗೆ ಕೊನೆಯಾಗುವಂತೆ ಮೂರು ತಿಂಗಳ ಗಡುವು ಕೂಡ ನೀಡಿತ್ತು. ಈ ತನಕ ಒಂದು ಕಂಪೆನಿಯನ್ನು ಹೊರತುಪಡಿಸಿ, ಉಳಿದ ಯಾವುದೂ ಅಧಿಕಾರಿಗಳನ್ನು ನೇಮಕ ಮಾಡಿಲ್ಲ ಎಂದು ಕಂಪೆನಿ ಹೇಳಿದೆ. ಪ್ಲಾಟ್​ಫಾರ್ಮ್​ಗಳು ಆರು ತಿಂಗಳ ಗಡುವು ಕೇಳಿವೆ. ಕಂಪೆನಿಯ ಕೇಂದ್ರ ಇರುವ ಅಮೆರಿಕದಿಂದ ಆದೇಶ ಬರುವುದಕ್ಕೆ ಎದುರು ನೋಡುತ್ತಿವೆ. “ಈ ಕಂಪೆನಿಗಳು ಭಾರತದಲ್ಲಿ ಕೆಲಸ ಮಾಡುತ್ತಿವೆ. ಇಲ್ಲೇ ಲಾಭ ಮಾಡುತ್ತಿದ್ದು, ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದಕ್ಕೆ ಕೇಂದ್ರ ಕಚೇರಿಯಿಂದ ಹಸಿರು ನಿಶಾನೆ ತೋರಿಸಬೇಕು,” ಎಂದು ಮೂಲಗಳು ಹೇಳಿವೆ. ಟ್ವಿಟ್ಟರ್​​ನಂಥ ಕಂಪೆನಿಗಳು ತನ್ನದೇ ಫ್ಯಾಕ್ಟ್​ ಚೆಕರ್​ಗಳನ್ನು ನೇಮಿಸಿಕೊಂಡಿದೆ. ಆದರೆ ಅದರ ಪರೀಕ್ಷೆ ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಜತೆಗೆ ಸಮಸ್ಯೆಯಾದರೆ ಎಲ್ಲಿ ದೂರಬೇಕು ಮತ್ತು ಅದಕ್ಕೆ ಎಲ್ಲಿ ಪರಿಹಾರ ಸಿಗುತ್ತದೆ ಎಂಬುದು ಕೂಡ ಸೋಷಿಯಲ್ ಮೀಡಿಯಾ ಬಳಕೆ ಮಾಡುವವರಿಗೆ ಗೊತ್ತಿಲ್ಲ ಎಂದು ಸೇರಿಸಲಾಗಿದೆ.

ಇದನ್ನೂ ಓದಿ: ಡಿಜಿಟಲ್, ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಕೇಂದ್ರದ ಕ್ರಮ: ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಇರಬೇಕು ಎಂದ ಸಚಿವ ಪ್ರಕಾಶ್​ ಜಾವಡೇಕರ್​

(May 25, 2021 deadline to comply with central government new rule regarding OTT platform and digital content. If not followed what will happen?)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!