Kannada News Technology Paytm has announced 100 per cent cash back to its users who pay electricity bills Technology News in Kannada
Paytm: ಪೇಟಿಎಂನಿಂದ ಧಮಾಕ ಆಫರ್: ವಿದ್ಯುತ್ ಬಿಲ್ ಪಾವತಿಸಿದರೆ ಅಷ್ಟೂ ಹಣ ವಾಪಸ್
Electricity Bill: ಪೇಟಿಎಂ ಧಮಾಕ ಆಫರ್ ಒಂದನ್ನು ಪರಿಚಯಿಸಿದೆ. ಬಳಕೆದಾರರು ಪ್ರತಿ ತಿಂಗಳ 10 ರಿಂದ 15 ನೇ ತಾರೀಖಿನ ನಡುವೆ ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಮತ್ತು ಹೆಚ್ಚುವರಿ ಬಹುಮಾನಗಳನ್ನು ಪಡೆಯಬಹುದು.
ಪ್ರತೀ ತಿಂಗಳು ನಾವು ಅಗತ್ಯವಾಗಿ ಪಾವತಿಸಬೇಕಾದ ಸೇವೆಗಳು ಹಲವಿದೆ. ಗ್ಯಾಸ್ ಬಿಲ್, ವಾಟರ್ ಬಿಲ್, ಮೊಬೈಲ್ ರೀಚಾರ್ಜ್ (Mobile Reacharg), ಡಿಟಿಎಚ್ ರೀಚಾರ್ಜ್, ವಿದ್ಯುತ್ ಬಿಲ್ಹೀಗೆ ಅನೇಕ ಬಿಲ್ ಕಟ್ಟಬೇಕಾಗುತ್ತಿದೆ. ಇಂದು ಇವುಗಳನ್ನೆಲ್ಲ ಕೌಂಟರ್‌ಗೆ ಹೋಗಿ ಬಿಲ್ ಕಟ್ಟುವುದು ತೀರ ಕಡಿಮೆ. ಅನೇಕರು ಆನ್ಲೈನ್ ಮೂಲಕ ಬಿಲ್ ಪಾವತಿ (Online Bill Payment) ಮಾಡುತ್ತಾರೆ. ಇದಕ್ಕಾಗಿ ಅನೇಕ ಆ್ಯಪ್ಗಳು ಕೂಡ ಇದೆ. ಅಂತೆಯೆ ಜನರು ಇಂದು ವಿದ್ಯುತ್ ಬಿಲ್ ಪಾವತಿ ಮಾಡಲು ಫೋನ್ ಪೇ, ಗೂಗಲ್ ಪೇ, ಪೇಟಿಎಂ (Paytm) ನಂತರ ಅಪ್ಲೆಕೇಶನ್ಗಳನ್ನು ಉಪಯೋಗಿಸುತ್ತಾರೆ. ಹೀಗಿರುವಾಗ ವಿದ್ಯುತ್ ಬಿಲ್ ಕಟ್ಟುವವರಿಗೆ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಒಡೆತನದಲ್ಲಿರುವ ಪೇಟಿಎಂ ಧಮಾಕ ಆಫರ್ ಒಂದನ್ನು ಪರಿಚಯಿಸಿದೆ.
ಬಳಕೆದಾರರು ಪ್ರತಿ ತಿಂಗಳ 10 ರಿಂದ 15 ನೇ ತಾರೀಖಿನ ನಡುವೆ ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಮತ್ತು ಹೆಚ್ಚುವರಿ ಬಹುಮಾನಗಳನ್ನು ಪಡೆಯಬಹುದು. ಪ್ರತಿದಿನ ಬಿಜ್ಲೀ ಡೇಸ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದ 50 ಬಳಕೆದಾರರಿಗೆ 100 ಪ್ರತಿಶತ ಕ್ಯಾಶ್‌ಬ್ಯಾಕ್ ಮತ್ತು 2,000 ರೂ. ಹೆಚ್ಚುವರಿಯಾಗಿ, ಬಳಕೆದಾರರಿಗೆ ಟಾಪ್ ಶಾಪಿಂಗ್ ಮತ್ತು ಟ್ರಾವೆಲ್ ಬ್ರ್ಯಾಂಡ್‌ಗಳಿಂದ ರಿಯಾಯಿತಿ ವೋಚರ್‌ಗಳನ್ನು ಪಡೆಯಬಹುದು. ಅಂತೆಯೆ ನೀವು ಮೊದಲ ಬಾರಿಗೆ ಪೇಟಿಎಂ ಆ್ಯಪ್ ಮೂಲಕ ವಿದ್ಯುತ್ ಬಿಲ್ ಕಟ್ಟುವವರಾಗಿದ್ದರೆ 200 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಕ್ಕಾಗಿ ನೀವು ‘ELECNEW200’ ಕೋಡ್ ಬಳಸಬೇಕು.