Kannada News Technology Poco C50 Smartphone will be launched in january 2023 check price and specs Technology News in Kannada
Poco C50: ಹೊಸ ವರ್ಷಕ್ಕೆ ಪೋಕೋದಿಂದ ಹೊಸ ಸ್ಮಾರ್ಟ್‌ಫೋನ್: ದಂಗಾದ ಬಜೆಟ್ ಪ್ರಿಯರು
ಇದೇ ಜನವರಿ ತಿಂಗಳಲ್ಲಿ ಪೋಕೋ ಸಿ50 (Poco C50) ಫೋನ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಆದರೆ, ಕಂಪನಿ ಈ ಫೋನ್ ಬಗ್ಗೆ ಯಾವುದೇ ಫೀಚರ್ಸ್ ಅನ್ನು ಬಹಿರಂಗ ಪಡಿಸಿಲ್ಲ.
POCO C50
Follow us on
ಪೋಕೋ (Poco) ಸಂಸ್ಥೆ 2022 ರಲ್ಲಿ ಬಿಡುಗಡೆ ಮಾಡಿರುವುದು ಅತಿ ಕಡಿಮೆ ಮೊಬೈಲ್ಗಳನ್ನು. ಅಪರೂಪಕ್ಕೆ ಒಂದೊಂದು ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡುತ್ತಿತ್ತು. ಆದರೀಗ ಹೊಸ ವರ್ಷದ ಮೊದಲ ತಿಂಗಳಲ್ಲೇ ಪೋಕೋ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ತಯಾರಿ ನಡೆಸುತ್ತಿದೆ. ಪೋಕೋಸಿ50 (Poco C50) ಎಂಬ ಹೊಸ ಸ್ಮಾರ್ಟ್ಫೋನ್ನೊಂದಿಗೆ (Smartphone) ಸಂಸ್ಥೆ ಮತ್ತೆ ಬಂದಿದೆ. ಇದೇ ಜನವರಿ ತಿಂಗಳಲ್ಲಿ ಈ ಫೋನ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಆದರೆ, ಕಂಪನಿ ಈ ಫೋನ್ ಬಗ್ಗೆ ಯಾವುದೇ ಫೀಚರ್ಸ್ ಅನ್ನು ಬಹಿರಂಗ ಪಡಿಸಿಲ್ಲ. ಕೆಲವು ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಈ ಹೊಸ ಫೋನ್ ರೆಡ್ಮಿ A1+ ರೀಬ್ರಾಂಡೆಡ್ ವರ್ಷನ್ ಆಗಿರುಬಹುದು ಎನ್ನಲಾಗಿದೆ.
ಈ ಸ್ಮಾರ್ಟ್‌ಫೋನ್ ಫೋನ್ ವಾಟರ್‌ಡ್ರಾಪ್ ನಾಚ್ ಆಯ್ಕೆಯ ಜೊತೆಗೆ 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಸ್ಕ್ರಾಚ್ ರೆಸಿಸ್ಟೆಂಟ್ ಗ್ಲಾಸ್ ಆಯ್ಕೆ ಪಡೆದುಕೊಂಡಿರಬಹುದು.
ಪೋಕೋ C50 ಮೀಡಿಯಾ ಟೆಕ್ ಹಿಲಿಯೋ A22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಫೋನ್ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ಪ್ಯಾಕ್ ಆಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
ಒಟ್ಟು ಎಷ್ಟು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಆಗಲಿದೆ ಎಂಬುದು ತಿಳಿದಿಲ್ಲ. ಆದರೆ, 64GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರುವುದು ಖಚಿತ.
ಇದರೊಂದಿಗೆ 8MP ರಿಯರ್ ಕ್ಯಾಮೆರಾ, 2MP ಡೆಪ್ತ್ ಸೆನ್ಸರ್ ಆಯ್ಕೆಯ ಸೆಕೆಂಡರಿ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಹಾಗೆಯೇ ರಿಯರ್ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್ ನೀಡಲಾಗಿದೆ.
ಮತ್ತೊಂದು ವಿಶೇಷ ಎಂದರೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 10W ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ.
ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದ್ದು, 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.
ಪೋಕೋ C50 ಒಂದು ಬಜೆಟ್ ಬೆಲೆಯ ಫೋನಾಗಿ ಲಾಂಚ್ ಆಗಲಿದ್ದು, ಬೆಲೆ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಮೂಲಗಳ 15,000 ರೂ. ಗಿಂತ ಕಡಿಮೆಯಿರಬಹುದು ಎನ್ನಲಾಗಿದೆ.