Kannada News Technology Poco F4 5G there is a chance that you can get it at a cheaper price along with freebies
POCO F4 5G: ರಿಲೀಸ್ ಆದ ಎರಡೇ ದಿನಕ್ಕೆ ಪೋಕೋ F4 5G ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್
ಪೋಕೋ ಎಫ್4 5ಜಿ (POCO F4 5G) ಸ್ಮಾರ್ಟ್‌ಫೋನ್ ಜೂನ್ 27 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಆದರೆ, ಇದಕ್ಕೂ ಮುನ್ನವೇ ಈ ಫೋನ್ ಮೇಲೆ ಬಂಪರ್ ಆಫರ್ ಘೋಷಿಸಲಾಗಿದೆ.
ಭಾರತದಲ್ಲಿ ಹೆಚ್ಚಾಗಿ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್ಫೋನ್ಗಳನ್ನು (Smartphone) ಅನಾವರಣ ಮಾಡುವ ಪೋಕೋ ಸಂಸ್ಥೆ ಎರಡು ದಿನಗಳ ಹಿಂದೆಯಷ್ಟೆ ಮಧ್ಯಮ ಬೆಲೆಗೆ ಪೋಕೋ ಎಫ್4 5ಜಿ (POCO F4 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಈ ಫೋನ್ ಜೂನ್ 27 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಆದರೆ, ಇದಕ್ಕೂ ಮುನ್ನವೇ ಈ ಫೋನ್ ಮೇಲೆ ಬಂಪರ್ ಆಫರ್ ಘೋಷಿಸಲಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ HDR10 ಪ್ಲಸ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಡಾಲ್ಬಿ ವಿಷನ್ ಅನ್ನು ಬೆಂಬಲಿಸಲಿದೆ. ಹಾಗಾದ್ರೆ ಈ ಫೋನಿಗೆ ಏನು ಆಫರ್ ನೀಡಲಾಗಿದೆ?, ವಿಶೇಷತೆ ಏನು ಎಂಬುದನ್ನ ನೋಡೋಣ.
ಭಾರತದಲ್ಲಿ ಪೋಕೋ F4 5G ಸ್ಮಾರ್ಟ್‌ಫೋನ್ ಮೂರು ಮಾದರಿಯಲ್ಲಿ ಅನಾವರಣಗೊಂಡಿದೆ. ಇದರ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಆಗಿದೆ. 8GB + 128GB ಮಾದರಿಗೆ 29,999 ರೂ. ನಿಗದಿ ಮಾಡಲಾಗಿದೆ ಹಾಗೆಯೆ 12GB + 256GB ಆಯ್ಕೆಯ ಬೆಲೆ 33,999 ರೂ. ಇದೆ.
ಈ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರದ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಈ ಫೋನನ್ನು HDFC ಅಥವಾ SBI ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 3,000 ರೂ. ಗಳ ರಿಯಾಯಿತಿ ಸಿಗಲಿದೆ. ಅಂತೆಯೆ 1,000 ರೂ. ಗಳ ಪ್ರಿಪೈಡ್ ಆಫರ್ ನೀಡಲಾಗಿದೆ. ಪೋಕೋ F4 5G ಫೋನನ್ನು ನೀವು 23,999 ರೂ. ಗೆ ಖರೀದಿಸಬಹುದು.
ಈ ಸ್ಮಾರ್ಟ್‌ಫೋನ್ ನೆಬ್ಯುಲಾ ಗ್ರೀನ್ ಮತ್ತು ನೈಟ್ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪೋಕೋ F4 5G ಸ್ಮಾರ್ಟ್‌ಫೋನ್ ಇದೇ ಜೂನ್ 27 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.
ಪೋಕೋ F4 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ HD+ E4 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಿಂದ ಕೂಡಿದೆ.
ಇದನ್ನೂ ಓದಿ
Realme Narzo 50i Prime: ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜೆಟ್ ಬೆಲೆಯ ರಿಯಲ್ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್
Reliance JIO: 56 GB ಡೇಟಾ, ಅನ್ಲಿಮಿಟೆಡ್ ಕಾಲ್: ಇದು ಜಿಯೋ ಕಂಪನಿಯ ಬಂಪರ್ ಆಫರ್
WhatsApp: ನೀವು ವಾಟ್ಸ್ಆ್ಯಪ್ ಕಂಪ್ಯೂಟರ್ನಲ್ಲಿ ಉಪಯೋಗಿಸ್ತೀರ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Amazon: 9,499 ರೂ. ವಿನ ರೆಡ್ಮಿ 9 ಆಕ್ಟೀವ್ ಫೋನ್ ಮೇಲೆ ಮತ್ತಷ್ಟು ಡಿಸ್ಕೌಂಟ್: ಇದು ಲಿಮಿಟೆಡ್ ಆಫರ್
ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 12 ಬೆಂಬಲದೊಂದಿಗೆ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮಾಲಿ-G610 MC6 GPU ಸಪೋರ್ಟ್ ಅನ್ನು ಪಡೆದಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ f/1.8 ಲೆನ್ಸ್‌ನೊಂದಿಗೆ ಬರುತ್ತದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.
ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮೆರಾಗಳು ನೈಟ್ ಮೋಡ್, AI ಸ್ಕೈಸ್ಕೇಪಿಂಗ್ 4.0 ಮತ್ತು AI ಎರೇಸ್ 2.0 ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಜೊತೆಗೆ ಎಲ್ಇಡಿ ಫ್ಲ್ಯಾಷ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಕೂಡ ಸೇರಿದೆ.
ಪೊಕೊ F4 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಬ್ಯಾಟರಿ ಕೇವಲ 38 ನಿಮಿಷಗಳಲ್ಲಿ 0% to 100% ಚಾರ್ಜ್ ಮಾಡಲಿದೆ ಎಂದು ಕಂಪನಿ ಹೇಳಿದೆ.