ವಿಶ್ವದ ಮಾರುಕಟ್ಟೆಗೆ ವಾರದ ಹಿಂದೆ ಕಾಲಿಟ್ಟಿದ್ದ Poco X3 Pro ಮಂಗಳವಾರ (ಮಾ.30) ಭಾರತದ ಮಾರುಕಟ್ಟೆಗೂ ಬಂದಿದೆ. ಸಾಕಷ್ಟು ಫೀಚರ್ಗಳನ್ನು ಹೊಂದಿರುವ ಈ ಮೊಬೈಲ್ ಜನಸಾಮಾನ್ಯರಿಗೆ ಹೇಳಿ ಮಾಡಿಸಿದಂತಿದೆ. 20 ಸಾವಿರದ ಒಳಗೆ ಸಿಗುತ್ತಿರುವ ಅತ್ಯುತ್ತಮ ಮೊಬೈಲ್ಗಳಲ್ಲಿ Poco X3 Pro ಕೂಡ ಇದೆ ಅನ್ನೋದು ವಿಶೇಷ.
Poco X3 Pro ಕ್ವಾಲ್ಕಾಮ್ ಸ್ನಾಪ್ಡ್ರ್ಯಾಗನ್ 860 ಎಸ್ಒಎಸ್ ಅನ್ನು ಹೊಂದಿದೆ. 250 ಜಿಬಿ ವರೆಗೆ ಇಂಟರ್ನಲ್ ಸ್ಟೋರೆಜ್ ಸಿಗಲಿದೆ. ಪ್ರತಿಷ್ಠಿತ ಕಂಪೆನಿಯ ಮಾಡೆಲ್ಗಳಾದ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಫ್62, ರಿಯಲ್ಮಿ ಎಕ್ಸ್7 ಮತ್ತು ವಿವೋ ವಿ20ಗೆ Poco X3 Pro ಕಾಂಪಿಟೇಷನ್ ನೀಡಲಿದೆ.
ಭಾರತದಲ್ಲಿ ಬೆಲೆ ಎಷ್ಟು?
Poco X3 Pro 6GB RAM + 128GB ಸ್ಟೋರೆಜ್ನ ಬೆಲೆ 18,999 ರೂಪಾಯಿ. 8GB RAM + 128GB ಸ್ಟೋರೆಜ್ನ ಮೊಬೈಲ್ಗೆ 20,999 ರೂಪಾಯಿ. ಚಿನ್ನದ ಬಣ್ಣ ಹೋಲುವ ಕಂಚು, ಗ್ರ್ಯಾಫೈಟ್ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಈ ಮೊಬೈಲ್ ಲಭ್ಯವಾಗುತ್ತಿದೆ. ಏಪ್ರಿಲ್ 6ರ ಮಧ್ಯಾಹ್ನ 12 ಗಂಟೆಯಿಂದ ಮೊಬೈಲ್ ಆನ್ಲೈನ್ನಲ್ಲಿ ಲಭ್ಯವಾಗುತ್ತಿದೆ.
ನಿಮಗೆ ಸಿಗಲಿದೆ ಆಫರ್
ಫ್ಲಿಪ್ಕಾರ್ಟ್ನಲ್ಲಿ ಈ ಮೊಬೈಲ್ ಖರೀದಿ ಮಾಡುವವರಿಗೆ ಭಾರೀ ಆಫರ್ ಸಿಗಲಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಈ ಮೊಬೈಲ್ ಖರೀದಿ ಮಾಡಿದರೆ ಶೇ.10 ಆಫರ್ ಸಿಗಲಿದೆ. ಗರಿಷ್ಠ 1000 ರೂಪಾಯಿವರೆಗೆ ಆಫರ್ ದೊರೆಯಲಿದೆ.
ವಿಶೇಷತೆಗಳು
ಎರಡು ಸಿಮ್ (ನ್ಯಾನೋ) , ಪೊಕೋ ಎಕ್ಸ್ ಪ್ರೋ ಆ್ಯಂಡ್ರಾಯ್ಡ್ 11 ಇದೆ. 6.67ಇಂಚಿನ ಪೂರ್ಣ ಎಚ್ಡಿ ಡಿಸ್ ಪ್ಲೇ ಇದೆ. 120Hz ರಿಫ್ರೆಶ್ ರೇಟ್ ಇದೆ. ಗೋರಿಲ್ಲಾ ಗ್ಲಾಸ್ 6 ಈ ಮೊಬೈಲ್ಗಿದೆ. 48 ಮೆಗಾ ಫಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8 ಮೆಗಾ ಫಿಕ್ಸೆಲ್ ಅಲ್ಟ್ರಾ ವೈಡ್ ಶೋಟರ್ ಕ್ಯಾಮೆರಾ, 2 ಮೆಗಾ ಫಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾ ಈ ಮೊಬೈಲ್ಗೆ ಇದೆ. Poco X3 Pro 5,160mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 215 ಗ್ರಾಂ ತೂಕವನ್ನು ಮೊಬೈಲ್ ಹೊಂದಿದೆ.
ಇದನ್ನೂ ಓದಿ: ಮೊಬೈಲ್ ಕಳವಾದರೆ ಏನು ಮಾಡಬೇಕು? ಮೊಬೈಲ್ನಲ್ಲಿರುವ ನಿಮ್ಮ ಮುಖ್ಯ ಮಾಹಿತಿಗಳನ್ನು ಸಂರಕ್ಷಿಸುವುದು ಹೇಗೆ?