ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಗಳ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಲಿನಲ್ಲಿ ಒಪ್ಪೋ (Oppo) ಸಂಸ್ಥೆ ಕೂಡ ಮುಂಚೂಣಿಯಲ್ಲಿದೆ. ಮುಖ್ಯವಾಗಿ ಕ್ಯಾಮೆರಾ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಒಪ್ಪೋ ಕಳೆದ ವರ್ಷ ಒಪ್ಪೋ ಎಫ್21 ಪ್ರೊ (Oppo F21 Pro) ಎಂಬ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನ ಹಿಂಭಾಗದಲ್ಲಿ ಆರ್ಬಿಟ್ ಲೈಟ್ ಒಳಗೊಂಡಿದೆ. ಆಕರ್ಷಕ ಡಿಸೈನ್ ಕೂಡ ಈ ಫೋನಿನ ಪ್ರಮುಖ ಹೈಲೇಟ್. ಹೀಗೆ ನಾನಾ ವಿಚಾರಗಳಿಂದ ಸದ್ದು ಮಾಡಿದ್ದ ಈ ಸ್ಮಾರ್ಟ್‌ಫೋನ್ (Smartphone) ಈಗ ಭರ್ಜರಿ ಡಿಸ್ಕೌಂಟ್ನಲ್ಲಿ ಸೇಲ್ ಕಾಣುತ್ತಿದೆ. ಹಾಗಾದರೆ ಈ ಫೋನನ್ನು ಎಷ್ಟು ರೂ. ಗೆ ಖರೀದಿಸಬಹುದು?, ಇದರ ಫೀಚರ್ಸ್ ಏನೇನು ಎಂಬುದನ್ನು ನೋಡೋಣ.
ಭಾರತದಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿತ್ತು. ಇದಕ್ಕೆ 27,999 ರೂ. ನಿಗದಿ ಮಾಡಲಾಗಿತ್ತು. ಆದರೀಗ ಈ ಫೋನಿನ ಮೇಲೆ 25% ರಿಯಾಯಿತಿ ಪಡೆದುಕೊಂಡಿದ್ದು, 20,999 ರೂ. ಗಳಿಗೆ ಲಭ್ಯವಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಈ ಆಫರ್ ಘೋಷಣೆ ಮಾಡಿದ್ದು ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಈ ಫೋನ್ ಖರೀದಿಯ ಮೇಲೆ 2,000 ರೂ. ಗಳ ತ್ವರಿತ ರಿಯಾಯಿತಿ ಕೂಡ ಪಡೆದುಕೊಳ್ಳಬಹುದಾಗಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಬರುತ್ತದೆ.
Tech Tips: ವಾಟ್ಸ್ಆ್ಯಪ್ನಲ್ಲಿ ಚಾಟ್ ಹೈಡ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ನೋಡಿ ಟ್ರಿಕ್
ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ನಿಂದ ಕೂಡಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಲರ್ OS 12.1 ಜೊತೆಗೆ ರನ್ ಆಗುತ್ತದೆ.
ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ