Realme C30
ಟೆಕ್ ಮಾರುಕಟ್ಟೆಯಲ್ಲಿ ಪ್ರಸಿದ್ಧ ರಿಯಲ್ ಮಿ (Realme) ಕಂಪನಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವೈವಿಧ್ಯಮಯ ಫೀಚರ್ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು (Smartphone) ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಕಳೆದ ವಾರವಷ್ಟೆ ರಿಯಲ್ ಮಿ ಕಂಪನಿ ಭಾರತದಲ್ಲಿ ರಿಯಲ್ ಮಿ ಸಿ 30 (Realme C30) ಫೋನನ್ನು ಲಾಂಚ್ ಮಾಡಿತ್ತು. ಇದೀಗ ಈ ಫೋನ್ ತನ್ನ ಮೊದಲ ಸೇಲ್ ಅನ್ನು ಆರಂಭಿಸಲಿದೆ. ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ವೆಬ್‌ಸೈಟ್ ರಿಯಲ್ ಮಿ.ಕಾಮ್ ಮೂಲಕ ಮಾರಾಟ ಕಾಣುತ್ತಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ನೀಡಲಾಗಿದೆ. ಹಾಗಿದ್ರೆ ಇದರ ಬೆಲೆ ಎಷ್ಟು?, ಮೊದಲ ಸೇಲ್ನಲ್ಲಿ ಏನು ಆಫರ್ ನೀಡಲಾಗಿದೆ ಎಂಬುದನ್ನು ನೋಡೋಣ.
- ಭಾರತದಲ್ಲಿ ರಿಯಲ್ ಮಿ C30 ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ ಕೇವಲ 7,499 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 3GB RAM ಮತ್ತು 32GB ರೂಪಾಂತರದ ಬೆಲೆ 8,299 ರೂ. ಆಗಿದೆ.
- ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸ ಖರೀದಿಸಿದರೆ ಗ್ರಾಹಕರು 5% ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಅಂತೆಯೆ ICICI ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸಿದರೆ 5% ತ್ವರಿತ ರಿಯಾಯಿತಿ, ಜೊತೆಗೆ 4,999 ರೂಗಳಲ್ಲಿ ಗೂಗಲ್ ನೆಕ್ಸ್ಟ್ ಹಬ್ ಅನ್ನು ನೀವು ಖರೀದಿಸಬಹುದಾಗಿದೆ.
- ರಿಯಲ್ ಮಿ C30 ಸ್ಮಾರ್ಟ್‌ಫೋನ್ 900×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಒಳಗೊಂಡಿದೆ.
- ಆಕ್ಟಾ-ಕೋರ್ ಯೂನಿಸೋಕ್ T612 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಈ ಪ್ರೊಸೆಸರ್ ಲೊ-ಲೇವೆಲ್ ಆಗಿದೆ, ಅಂದರೆ ಹಗುರವಾದ ಕಾರ್ಯಗಳಿಗೆ ಸೂಕ್ತವಾಗಿದೆ.
- ಇನ್ನು ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಇದಲ್ಲದೆ ವಾಟರ್‌ಡ್ರಾಪ್ ಶೈಲಿಯ ನಾಚ್‌ನೊಳಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.
- 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದು ಒಂದು ದಿನ ಸುಲಭವಾಗಿ ಬಾಳಿಕೆ ಬರುತ್ತದೆ. ಈ ಬ್ಯಾಟರಿ 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕನಿಷ್ಠ ಎರಡು ಗಂಟೆಗಳ ಕಾಲ ಬೇಕಾಗುತ್ತದೆ.
Best Smartphone: 12,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ