ಭಾರತದಲ್ಲಿ ರಿಯಲ್ ಮಿ ನಾರ್ಜೊ 60x ಫೋನಿನ ಮಾರಾಟ ಆರಂಭ: ಖರೀದಿಗೆ ಕ್ಯೂ ಗ್ಯಾರಂಟಿ

|

Updated on: Sep 12, 2023 | 1:51 PM

Realme Narzo 60x 5G Sale: ರಿಯಲ್ ಮಿ ನಾರ್ಜೊ 60x 5G ಬೆಲೆ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ 12,999 ರೂ. ಇದೆ. ಈ ಫೋನ್ ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ 1,000 ರೂ. ರಿಯಾಯಿತಿಯನ್ನು ನೀಡುತ್ತಿದೆ.

ಭಾರತದಲ್ಲಿ ರಿಯಲ್ ಮಿ ನಾರ್ಜೊ 60x ಫೋನಿನ ಮಾರಾಟ ಆರಂಭ: ಖರೀದಿಗೆ ಕ್ಯೂ ಗ್ಯಾರಂಟಿ
Realme Narzo 60x 5G
Follow us on

ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿ ಮಾರಾಟ ಮಾಡುತ್ತಿದೆ. ಕಳೆದ ವಾರ ದೇಶದಲ್ಲಿ ರಿಯಲ್ ಮಿ ನಾರ್ಜೊ 60x (Realme Narzo 60x 5G) ಫೋನನ್ನು ಅನಾವರಣ ಮಾಡಿತ್ತು. ಬಜೆಟ್ ಬೆಲೆಗೆ ಲಭ್ಯವಿರುವ ಈ ಆಕರ್ಷಕ ಸ್ಮಾರ್ಟ್​ಫೋನ್ ಇದೀಗ ಮಾರಾಟ ಕಾಣುತ್ತಿದೆ. ಕಡಿಮೆ ಬೆಲೆ ಆಗಿದ್ದರೂ ಈ ಫೋನಿನಲ್ಲಿ ದೊಡ್ಡ ಬ್ಯಾಟರಿ ಬ್ಯಾಕಪ್, 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ನೀಡಲಾಗಿದೆ. ಹಾಗಾದರೆ, ನಾರ್ಜೊ 60x ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ರಿಯಲ್ ಮಿ ನಾರ್ಜೊ 60x 5G ಬೆಲೆ, ಲಭ್ಯತೆ:

ರಿಯಲ್ ಮಿ ನಾರ್ಜೊ 60x 5G ಬೆಲೆ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ 12,999 ರೂ. ಇದೆ. ಅಂತೆಯೆ 6GB RAM + 128GB ಮಾದರಿಗೆ 14,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಸ್ಟೆಲ್ಲರ್ ಗ್ರೀನ್ ಮತ್ತು ನೆಬ್ಯುಲಾ ಪರ್ಪಲ್ ಬಣ್ಣಗಳಲ್ಲಿ ಬರುತ್ತದೆ. ಈ ಫೋನ್ ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ 1,000 ರೂ. ರಿಯಾಯಿತಿಯನ್ನು ನೀಡುತ್ತಿದೆ.

ರಿಯಲ್ ಮಿ ನಾರ್ಜೊ 60x 5G ಫೀಚರ್ಸ್:

ಡಿಸ್‌ಪ್ಲೇ: ರಿಯಲ್ ಮಿ ನಾರ್ಜೊ 60x ಸ್ಮಾರ್ಟ್​ಫೋನ್ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.72-ಇಂಚಿನ FHD+ IPS LCD ಡಿಸ್‌ಪ್ಲೇ, 180Hz ಟಚ್ ಸ್ಯಾಂಪ್ಲಿಂಗ್ ರೇಟ್, 1080 X 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 680nits ಬ್ರೈಟ್​ನೆಸ್ ಅನ್ನು ಹೊಂದಿದೆ.

ಇದನ್ನೂ ಓದಿ
ಇಂದು ರಾತ್ರಿ ಐಫೋನ್ 15 ಸರಣಿ ರಿಲೀಸ್: ಭಾರತದಲ್ಲಿ ಬೆಲೆ ಎಷ್ಟು ಗೊತ್ತೇ?
ಇಂದು ಬಹುನಿರೀಕ್ಷಿತ ಐಫೋನ್ 15 ಸರಣಿ ಬಿಡುಗಡೆ: ಭಾರತದಲ್ಲಿ ಎಷ್ಟು ಗಂಟೆಗೆ?
ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ ಗೂಗಲ್ ಪಿಕ್ಸೆಲ್ 8 ಸರಣಿ
ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ

ನೋಕಿಯಾ ಕಮ್​ಬ್ಯಾಕ್: ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ

ಪ್ರೊಸೆಸರ್: ಹೊಸ ನಾರ್ಜೊ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಯೊಂದಿಗೆ 6GB ಯ LPDDR4X RAM ಮೂಲಕ ಜೋಡಿಸಲ್ಪಟ್ಟಿದೆ.

RAM ಮತ್ತು ಸಂಗ್ರಹಣೆ: ಈ ಚಿಪ್‌ಸೆಟ್ ಅನ್ನು 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ. 6GB ವರೆಗೆ ವರ್ಚುವಲ್ RAM ಇದೆ.

OS: ರಿಯಲ್ ಮಿ ನಾರ್ಜೊ 60x 5G ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI 4.0 ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತದೆ.

ಕ್ಯಾಮೆರಾಗಳು: ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದೆ. 50MP ಪ್ರಾಥಮಿಕ ಸಂವೇದಕವನ್ನು 5P ಲೆನ್ಸ್ ಮತ್ತು f/1.8 ಅಪರ್ಚರ್ ಮತ್ತು 2MP ಡೆಪ್ತ್ ಶೂಟರ್​ನೊಂದಿಗೆ ನೀಡಲಾಗಿದೆ.

ಸೆಲ್ಫಿ ಕ್ಯಾಮೆರಾ: ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗ 8MP ಕ್ಯಾಮೆರಾ ಆಯ್ಕೆ ಇದೆ.

ಬ್ಯಾಟರಿ: ಈ ಫೋನ್​ನಲ್ಲಿ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ.

ಕನೆಕ್ಟಿವಿಟಿ: 5G ಸಪೋರ್ಡ್ ಮಾಡುತ್ತದೆ, 4G LTE, ಬ್ಲೂಟೂತ್, GPS ಮತ್ತು ಚಾರ್ಜ್ ಮಾಡಲು USB ಟೈಪ್-C ಪೋರ್ಟ್, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Tue, 12 September 23