Redmi 12: ಬಿಡುಗಡೆಗೆ ಸಿದ್ದವಾದ ಶವೋಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಸದ್ಯದಲ್ಲೇ ರೆಡ್ಮಿ 12 ಫೋನ್ ರಿಲೀಸ್

ಶೀಘ್ರದಲ್ಲೇ ದೇಶದಲ್ಲಿ ಹೊಸ ರೆಡ್ಮಿ 12 (Redmi 12) ಫೋನ್‌ ಲಾಂಚ್‌ ಆಗಲಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌, ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ.

Redmi 12: ಬಿಡುಗಡೆಗೆ ಸಿದ್ದವಾದ ಶವೋಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಸದ್ಯದಲ್ಲೇ ರೆಡ್ಮಿ 12 ಫೋನ್ ರಿಲೀಸ್
Redmi 12
Follow us
|

Updated on: Jun 04, 2023 | 2:09 PM

ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರೆಡ್ಮಿ A2 ಎಂಬ ಮೊಬೈಲ್ ಅನಾವರಣ ಮಾಡಿದ್ದ ಕಂಪನಿ ಇದೀಗ ಮತ್ತೊಂದು ಸ್ಮಾರ್ಟ್​ಫೋನ್ (Smartphone) ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ. ಶೀಘ್ರದಲ್ಲೇ ದೇಶದಲ್ಲಿ ಹೊಸ ರೆಡ್ಮಿ 12 (Redmi 12) ಫೋನ್‌ ಲಾಂಚ್‌ ಆಗಲಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌, ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ರೆಡ್ಮಿ 12 ಸ್ಮಾರ್ಟ್​ಫೋನ್​ನ ಬೆಲೆ ಅಥವಾ ಫೀಚರ್ಸ್ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಈ ಸ್ಮಾರ್ಟ್‌ಫೋನ್​ನ 8GB RAM ಮತ್ತು 256GB ಬೆಲೆ ಯುರೋ 209.99. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 18,600ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಕಪ್ಪು, ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆಯಂತೆ.

ಇದನ್ನೂ ಓದಿ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಡಿಸ್ ಪ್ಲೇ ಸ್ಕ್ರಾಚ್​ ಆಗಿದ್ದರೆ ಬದಲಾಯಿಸಬೇಕಿಲ್ಲ: ಜಸ್ಟ್ ಹೀಗೆ ಮಾಡಿ
Image
Honor 90: ಕ್ಯಾಮೆರಾ ಪ್ರಿಯರಿಗಾಗಿ 200 ಮೆಗಾಪಿಕ್ಸೆಲ್​ನ ಹೊಸ ಹಾನರ್‌ 90 ಸರಣಿ ಅನಾವರಣ
Image
Nokia C300: ನೋಕಿಯಾದಿಂದ ಎರಡು ಜಬರ್ದಸ್ತ್ ಸ್ಮಾರ್ಟ್​ಫೋನ್ಸ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
Image
Flipkart: ಫ್ಲಿಪ್​​ಕಾರ್ಟ್​ನಲ್ಲಿ ಶುರುವಾಗಿದೆ ಬಿಗ್ ಎಂಡ್ ಆಫ್ ಸೀಸನ್ ಸೇಲ್: ಅನೇಕ ಪ್ರಾಡಕ್ಟ್​ಗಳಿಗೆ ಬಂಪರ್ ಡಿಸ್ಕೌಂಟ್

Tech Tips: ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹೈಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ?

ಫೀಚರ್ಸ್ ಏನಿದೆ?:

ರೆಡ್ಮಿ 12 ಸ್ಮಾರ್ಟ್‌ಫೋನ್‌ ದೊಡ್ಡದಾದ 6.79 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಬೆಲೆಗೆ ತಕ್ಕಂತೆ ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. 8GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿರಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದರ ಜೊತೆಗೆ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಬದಿಯ ಕ್ಯಾಮೆರಾದಲ್ಲಿ ಫ್ಲ್ಯಾಷ್‌ಲೈಟ್‌ ಅನ್ನು ಇರಿಸಿರುವ ಸಾಧ್ಯತೆ ಇದೆ.

ರೆಡ್ಮಿ 12 ಸ್ಮಾರ್ಟ್‌ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡಲಿದೆಯೇ ಎಂಬ ಬಗ್ಗೆ ಮಾಹಿತಿಯೊಲ್ಲ. NFC ಮತ್ತು ಬ್ಲೂಟೂತ್ v5.3 ಸಂಪರ್ಕವನ್ನು ನೀಡಲಾಗಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ