Redmi 12C: ಶವೋಮಿಯಿಂದ ಅತಿ ಕಡಿಮೆ ದರಕ್ಕೆ ರೆಡ್ಮಿ 12C ಸ್ಮಾರ್ಟ್‌ಫೋನ್​ ಬಿಡುಗಡೆ: ಬೆಲೆ ಕೇಳಿ ದಂಗಾದ ಗ್ರಾಹಕರು

|

Updated on: Mar 31, 2023 | 12:41 PM

Redmi 12C Price: ಭಾರತದಲ್ಲಿ ಹೊಸ ರೆಡ್ಮಿ 12ಸಿ (Redmi 12C) ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌, ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ.

Redmi 12C: ಶವೋಮಿಯಿಂದ ಅತಿ ಕಡಿಮೆ ದರಕ್ಕೆ ರೆಡ್ಮಿ 12C ಸ್ಮಾರ್ಟ್‌ಫೋನ್​ ಬಿಡುಗಡೆ: ಬೆಲೆ ಕೇಳಿ ದಂಗಾದ ಗ್ರಾಹಕರು
Redmi 12C
Follow us on

ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಹೊಸ ತನವನ್ನು ಪ್ರಯತ್ನ ಮಾಡುವುದರಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಸಂಸ್ಥೆ ಎತ್ತಿದ ಕೈ. ಈಗಂತು ಅಪರೂಪಕ್ಕೆ ಮೊಬೈಲ್​ಗಳನ್ನು ಪರಿಚಯಿಸುತ್ತಿರುವ ಶವೋಮಿ ಸಮಯ ತೆಗೆದುಕೊಂಡ ವಿಭಿನ್ನವಾದ ಮೊಬೈಲ್​ನೊಂದಿಗೆ ಬರುತ್ತದೆ. ಇದೀಗ ಕೆಲ ಸಮಯದ ಬಳಿಕ ತನ್ನ ರೆಡ್ಮಿ ಬ್ರ್ಯಾಂಡ್​ನಡಿಯಲ್ಲಿ ಹೊಸ ಸ್ಮಾರ್ಟ್​​ಫೋನ್ (Smartphone) ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಹೊಸ ರೆಡ್ಮಿ 12C (Redmi 12C) ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌, ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ರೆಡ್ಮಿ 12C ಸ್ಮಾರ್ಟ್​ಫೋನ್ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 4GB RAM + 64GB ವೇರಿಯಂಟ್‌ಗೆ ಕೇವಲ 8,999 ರೂ. ಇದೆ. ಅಂತೆಯೆ 6GB RAM + 128GB ಸ್ಟೋರೇಜ್ ಮಾದರಿಗೆ 10,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಏಪ್ರಿಲ್ 6 ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್, ಅಮೆಜಾನ್ ಸೇರಿದಂತೆ ಎಮ್​ಐ ಅಧಿಕೃತ ವೆಬ್​ಸೈಟ್​ನಲ್ಲಿ ಖರೀದಿಗೆ ಸಿಗಲಿದೆ. ಮೊದಲ ಸೇಲ್ ಪ್ರಯುಕ್ತ 500 ರಿಯಾಯಿತಿ ಲಭ್ಯವಾಗಲಿದೆ. ಈ ಫೋನ್ ಮ್ಯಾಟ್ ಬ್ಲಾಕ್, ಮಿಂಟ್ ಗ್ರೀನ್, ರಾಯಲ್ ಬ್ಲೂ ಮತ್ತು ಲ್ಯಾವೆಂಡರ್ ಪರ್ಪಲ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ
Honor Play 7T: ಮಾರುಕಟ್ಟೆಗೆ ಬಂತು ಹಾನರ್ ನೂತನ ಸ್ಮಾರ್ಟ್​ಫೋನ್ ಹಾನರ್​ ಪ್ಲೇ 7ಟಿ
Tree Scooter: ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!
OnePlus Nord CE 3 Lite: ಭಾರತೀಯ ಮಾರುಕಟ್ಟೆಗೆ ಬರುತ್ತಿದೆ 108MP ಕ್ಯಾಮೆರಾದ ಹೊಚ್ಚ ಹೊಸ ಸ್ಮಾರ್ಟ್​ಫೋನ್
IPL 2023: ಐಪಿಎಲ್ ಫ್ರೀ ವೀಕ್ಷಿಸುವುದು ಹೇಗೆ? ಯಾವ ಚಾನೆಲ್​ಗಳಲ್ಲಿ ನೇರ ಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ

Redmi Note 12 4G: ಶಓಮಿ ರೆಡ್ಮಿ ನೂತನ ಸ್ಮಾರ್ಟ್​ಫೋನ್ ಖರೀದಿಗೆ ₹1,000 ಡಿಸ್ಕೌಂಟ್

ಫೀಚರ್ಸ್ ಏನು?:

ರೆಡ್ಮಿ 12C ಸ್ಮಾರ್ಟ್‌ಫೋನ್​ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 1,600*720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.71 ಇಂಚಿನ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್‌ಪ್ಲೇ ಹೊಂದಿದೆ. 60Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಮೀಡಿಯಾಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. 1TB ವರೆಗೆ ಮೆಮೋರಿ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್​ ಸೆನ್ಸಾರ್​ನಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್​ನಲ್ಲಿದೆ. ಇವುಗಳ ಜೊತಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ನು ಈ ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 10W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುವುದಿಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್, ಜಿಪಿಎಸ್ ಅನ್ನು ಬೆಂಬಲಿಸುತ್ತದೆ. ರಿಯರ್ ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ನೀವು ಬಜೆಟ್ ಬೆಲೆಗೆ ಒಂದೊಳ್ಳೆ ಫೋನನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆ ಇದೊಂದು ಅತ್ಯುತ್ತಮ ಆಯ್ಕೆ ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ