ChatGPT: ಪ್ರಯಾಣದ ಯೋಜನೆ ಮಾಡಲು ಚಾಟ್ ಜಿಪಿಟಿ ಬಳಸಬಹುದೇ? ವಾಸ್ತವದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?

ಚಾಟ್ ಜಿಪಿಟಿ ಹೆಸರನ್ನು ನೀವು ಕೇಳಿರಬಹುದು ಇತ್ತೀಚೆಗೆ ಎಲ್ಲಿ ನೋಡಿದರು ಇದರದ್ದೇ ಮಾತು. ಈ ಸಾಫ್ಟವೇರ್ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಇದರ ಬಳಕೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಇದು ಖಾಸಗಿ ಪ್ರವಾಸಕ್ಕೂ ನಿಮಗೆ ಸಹಾಯ ಮಾಡಬಲ್ಲುದು.

ChatGPT: ಪ್ರಯಾಣದ ಯೋಜನೆ ಮಾಡಲು ಚಾಟ್ ಜಿಪಿಟಿ ಬಳಸಬಹುದೇ? ವಾಸ್ತವದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Mar 31, 2023 | 4:57 PM

ಪ್ರಯಾಣ ಮಾಡುವಾಗ ನಮ್ಮ ಪ್ರವಾಸ ಎಂದಿಗೂ ಮಾಸದ ನೆನಪು ನೀಡಲಿ ಎಂಬುದು ಸಾಮಾನ್ಯವಾಗಿ ಎಲ್ಲರ ಹಂಬಲ. ಹಾಗಾಗಿ ಪ್ರಯಾಣಕ್ಕೆ ಸಿದ್ಧತೆಗಳು ತಿಂಗಳ ಹಿಂದೆಯೇ ಆರಂಭ ಮಾಡುತ್ತೇವೆ. ಹೇಗೆ ಹೋಗುವುದು? ಯಾವ ಸ್ಥಳಗಳನ್ನು ನೋಡಬಹುದು? ಹೀಗೆ ಹತ್ತಾರು ಕಡೆಗಳಲ್ಲಿ ಹುಡುಕಿ, ಅಲ್ಲಿ ಹೋಗಿ ಬಂದವರ ಬಳಿ ಸಹಾಯ ತೆಗೆದುಕೊಂಡು ನಮ್ಮ ಪ್ರವಾಸವನ್ನು ಆಯೋಜನೆ ಮಾಡುತ್ತಿದ್ದೇವು ಆದರೆ ಇವೆಲ್ಲದಕ್ಕೂ ಕ್ಷಣದಲ್ಲಿ ಮಾಹಿತಿ ನೀಡಲು ಚಾಟ್ ಜಿಪಿಟಿ ಹುಟ್ಟಿಕೊಂಡಿದೆ. ಈ ಹೆಸರನ್ನು ನೀವು ಕೇಳಿರಬಹುದು ಇತ್ತೀಚೆಗೆ ಎಲ್ಲಿ ನೋಡಿದರು ಇದರದ್ದೇ ಮಾತು. ಈ ಸಾಫ್ಟವೇರ್ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಅದರಲ್ಲಿಯೂ ಮುಂದಿನ ವಾರ ಇದರ ಹೊಸ ಆವೃತಿಯೂ ಬಿಡುಗಡೆಯಾಗಲಿದೆ. ಹಾಗಾಗಿ ಇದರ ಬಳಕೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಈಗ ಖಾಸಗಿ ಪ್ರವಾಸಕ್ಕೂ ನಿಮಗೆ ಸಹಾಯ ಮಾಡಬಲ್ಲುದು. ನೀವು ಏನೇ ಕೇಳಿದರು ಅದಕ್ಕೆ ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ವಾಸ್ತವದಲ್ಲಿ ನಾವು ಎಲ್ಲದರಲ್ಲಿಯೂ ಹೊಸತನ ಹುಡುಕುತ್ತೇವೆ. ನಮ್ಮ ಕನಸುಗಳು ನಮ್ಮ ಬಜೆಟ್‌ಗಳಿಗಿಂತ ದೊಡ್ಡದಾಗಿರುವುದರಿಂದ ನಮಗೆ ಇಂತಹ ಸಾಫ್ಟವೇರ್ ಆವಶ್ಯಕತೆ ಇದೆ. ಇದು ವಿವಿಧ ಪ್ರಯಾಣ ಯೋಜನೆಯನ್ನು ಮಾಡಿಕೊಟ್ಟು ಅದನ್ನು ಹೇಗೆ ನಿಭಾಯಿಸಿಬಹುದು ಎಂಬುದರ ಬಗ್ಗೆಯೂ ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಯಾವ ರೀತಿಯಲ್ಲಿ ಪ್ರಯಾಣ ಇರಬೇಕು ಎಂಬುದನ್ನು ತಿಳಿಸಿದರೆ ಅದಕ್ಕೆ ತಕ್ಕಂತೆ ಅದು ನಿಮಗೆ ಯೋಜನೆ ಹಾಕಿಕೊಡುತ್ತದೆ.

ಚಾಟಿಜಿಪಿಟಿ ಬಳಸಿಕೊಂಡು ಯಶಸ್ಸು ಕಂಡವರು ಇದ್ದಾರೆ. ಹುಡುಕಿದರೆ ನಮಗೆ ಪಂಚತಾರಾ ಹೋಟೆಲ್ ಸಿಗುತ್ತದೆ ಆದರೆ ನಿಜವಾಗಿ ಅದರಲ್ಲಿ ಯಾವ ರೀತಿಯ ಸೌಲಭ್ಯವಿದೆ ಎಂಬುದನ್ನು ಚಾಟಿಜಿಪಿಟಿ ತಿಳಿಸಿಕೊಡುತ್ತದೆ. ಚಿಕ್ಕ ಮಕ್ಕಳನ್ನು ನಿಮ್ಮ ಜೊತೆ ತೆರೆಳುತ್ತಿದ್ದಾರೆ ಎಂದರೆ ಅವರಿಗೆ ಯಾವ ರೀತಿಯ ಸೌಲಭ್ಯವಿದೆ ಆಟವಾಡಲು ಕ್ಲಬ್, ಆಟದ ಮೈದಾನ ಹೀಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಇದನ್ನೂ ಓದಿ:Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ

ಊದಾಹರಣೆಗೆ ನಿಮಗೆ ಯೂರೋಪ್ ಪ್ರವಾಸ ಹೋಗಬೇಕು ನಿಮ್ಮ ಬಳಿ ಸಾಕಷ್ಟು ಹಣವಿಲ್ಲ ಆಗ ನೀವು ಚಾಟಿಜಿಪಿಟಿ ಗೆ ನಿಮ್ಮ ಪ್ರವಾಸದ ಬಗ್ಗೆ ತಿಳಿಸಿದರೆ ನಿಮ್ಮ ಬಜೆಟ್ ಗೆ ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸುತ್ತದೆ. ಹೇಗೆ ಪ್ರವಾಸ ಮಾಡಿದರೆ ಚಂದ ಎಂಬುದನ್ನು ಹೇಳುತ್ತದೆ. ನಿಮಗೆ ಬೋಟ್ ನಲ್ಲಿಯೇ ಪ್ರಯಾಣ ಮಾಡಬೇಕೆಂದರೆ ಅದಕ್ಕೂ ಯೋಜನೆ ಸಿದ್ದ ಮಾಡುತ್ತದೆ. ಹಾಗೆಯೇ ಇದರಲ್ಲಿ ವೈಫಲ್ಯಕಂಡವರು ಇದ್ದಾರೆ. ಒಬ್ಬರು ತಮಗೆ ಮೇ ತಿಂಗಳಿನಲ್ಲಿ ಐಷಾರಾಮಿ ರೆಸಾರ್ಟ್‌ನಲ್ಲಿ ಉತ್ತಮ ಯೋಗ ನಡೆಸಿಕೊಂಡುವರಿದ್ದಾರಾ? ಎಂಬ ಪ್ರಶ್ನೆಗೆ ದುರದೃಷ್ಟವಶಾತ್, ಚಾಟಿಜಿಪಿಟಿ ಅವರಿಗೆ ಹಿಮಾಲಯದಲ್ಲಿರುವ ರಿಮೋಟ್ ಡೆಸ್ಟಿನೇಶನ್ ಸ್ಪಾ ಗಳನ್ನು ನೀಡಿತು. ಪ್ರಶ್ನೆಯನ್ನು ಮರುಹೊಂದಿಸಿ ಕೇಳಿದಾಗಲೂ ಶ್ರೀಲಂಕಾ ಮತ್ತು ಥೈಲ್ಯಾಂಡ್‌ನಲ್ಲಿರುವ ರೆಸಾರ್ಟ್‌ಗಳ ವಿವರ ನೀಡಿದ್ದು ಅವರಿಗೆ ಸರಿಯಾದ ಮಾಹಿತಿ ದೊರಕಿಲ್ಲ.

ಯಾವುದೇ ಸಾಫ್ಟವೇರ್ ಆಗಲಿ ಪ್ರಯಾಣದ ವಿಷಯಕ್ಕೆ ಬಂದಾಗ ನಾವು ಇನ್ನೊಮ್ಮೆ ಯೋಚಿಸಿ ಬೇರೆ ಬೇರೆ ಕಡೆಯಿಂದ ಮಾಹಿತಿ ಪಡೆದುಕೊಳ್ಳಬೇಕು ಏಕೆಂದರೆ ಕೆಲವು ಸಮಯದಲ್ಲಿ ಅದರ ಅಗತ್ಯವಿರುತ್ತದೆ. ಮತ್ತು ಯಾವುದನ್ನೋ ನಂಬಿ ಅಲ್ಲಿಗೆ ಹೋದ ಮೇಲೆ ಯೋಚಿಸುವ ಹಾಗಾಗಬಾರದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೇಖನ: ಪ್ರೀತಿ ಭಟ್​, ಗುಣವಂತೆ

Published On - 1:41 pm, Fri, 31 March 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ