Redmi Note 12 4G: ಶಓಮಿ ರೆಡ್ಮಿ ನೂತನ ಸ್ಮಾರ್ಟ್ಫೋನ್ ಖರೀದಿಗೆ ₹1,000 ಡಿಸ್ಕೌಂಟ್
ಶಓಮಿ ರೆಡ್ಮಿ ಮತ್ತು ಎಂಐ ಫೋನ್ಗಳು ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಬಜೆಟ್ ದರದಿಂದ ತೊಡಗಿ, ಪ್ರೀಮಿಯಂ ಫೀಚರ್ಸ್ ಇರುವ ಮಾದರಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೆ, ಸ್ಯಾಮ್ಸಂಗ್ಗೆ ಹೆಚ್ಚಿನ ಸ್ಪರ್ಧೆಯನ್ನು ಒಡ್ಡಿರುವ ಶಓಮಿ, ನೋಟ್ ಸರಣಿಯಲ್ಲಿ ವಿವಿಧ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.
ಶಓಮಿ ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ಶಓಮಿ ರೆಡ್ಮಿ Note 12 4G (Redmi Note 12 4G) ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಈಗಾಗಲೇ ರೆಡ್ಮಿ Note 12 5G, ರೆಡ್ಮಿ Note 12 Pro 5G ಮತ್ತು ರೆಡ್ಮಿ Note 12 Pro+ 5G ಬಿಡುಗಡೆಯಾಗಿದೆ. ಈ ಬಾರಿ ಹೊಸ 4G ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನೂತನ ಫೋನ್ ದರ ₹14,999ರಿಂದ ಆರಂಭವಾಗುತ್ತದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿದರೆ ₹1,000 ಡಿಸ್ಕೌಂಟ್ ದೊರೆಯುತ್ತದೆ. ಏಪ್ರಿಲ್ 6ರಿಂದ ಅಮೆಜಾನ್ ಮತ್ತು ಎಂಐ ಸ್ಟೋರ್ ಮೂಲಕ ನೂತನ ಫೋನ್ ಖರೀದಿಸಬಹುದು. ಜತೆಗೆ, ಎಂಐ , ರೆಡ್ಮಿ ಫೋನ್ ಎಕ್ಸ್ಚೇಂಜ್ ₹1,500 ಬೋನಸ್ ಕೂಡ ಲಭ್ಯವಿದೆ.
ಶಓಮಿ ರೆಡ್ಮಿ ನೋಟ್ 12 4G ವೈಶಿಷ್ಟ್ಯಗಳು
ಶಓಮಿ ರೆಡ್ಮಿ ನೋಟ್ ಸರಣಿಯಲ್ಲಿ Note 12 4G ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿ 6.67 ಇಂಚಿನ ಸೂಪರ್ ಅಮೊಲೆಡ್ ಡಿಸ್ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ, Android 13 ಆದಾರಿತ MIUI 14 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 685 ಪ್ರೊಸೆಸರ್ ಬಳಕೆ ಮಾಡಿ, Adreno 610 ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಹೀಗಾಗಿ ಅತ್ಯುತ್ತಮ ಸ್ಪೀಡ್ ಬಳಕೆದಾರರಿಗೆ ದೊರೆಯುತ್ತದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8 MP+2 MP ಹಿಂಬದಿ ಕ್ಯಾಮೆರಾ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಇದೆ. ಉಳಿದಂತೆ, 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ರೆಡ್ಮಿ Note 12 4G ಸ್ಮಾರ್ಟ್ಫೋನ್ನಲ್ಲಿದೆ.
ಶಓಮಿ ರೆಡ್ಮಿ ನೋಟ್ 12 4G ಬೆಲೆ ಮತ್ತು ಲಭ್ಯತೆ
ಹೊಸದಾಗಿ ಬಿಡುಗಡೆಯಾದ ಶಓಮಿ ರೆಡ್ಮಿ ನೋಟ್ 12 4G ಸ್ಮಾರ್ಟ್ಫೋನ್, 5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. 6GB + 64GB ಆವೃತ್ತಿಗೆ ₹14,999 ಮತ್ತು 6GB + 128GB ಆವೃತ್ತಿಗೆ ₹16,999 ದರ ಹೊಂದಿದೆ. 6GB + 64GB RAM ಮತ್ತು 6GB + 128GB ಎಂಬ ಎರಡು ಸ್ಟೋರೇಜ್ ಮಾದರಿಯ ಆಯ್ಕೆ ಗ್ರಾಹಕರಿಗೆ ದೊರೆಯುತ್ತಿದೆ. ಐಸ್ ಬ್ಲೂ, ಸನ್ರೈಸ್ ಗೋಲ್ಡ್, ಲೂನಾರ್ ಬ್ಲ್ಯಾಕ್ ಬಣ್ಣದಲ್ಲಿ ನೂತನ ಸ್ಮಾರ್ಟ್ಪೋನ್ ಲಭ್ಯವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Thu, 30 March 23