IPL 2023: ಐಪಿಎಲ್ ಫ್ರೀ ವೀಕ್ಷಿಸುವುದು ಹೇಗೆ? ಯಾವ ಚಾನೆಲ್ಗಳಲ್ಲಿ ನೇರ ಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ
IPL 2023 Live Channels: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
IPL 2023 Live: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಗೆ ಶುಕ್ರವಾರ (ಮಾ.31) ಚಾಲನೆ ಸಿಗಲಿದೆ. 10 ತಂಡಗಳ ನಡುವೆ ಮೊದಲ ಹಂತದಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಪ್ಲೇಆಫ್ ಪಂದ್ಯಗಳು ಜರುಗಲಿದೆ. ಈ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಆದರೆ ಈ ಬಾರಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಐಪಿಎಲ್ ಲೈವ್ ಸ್ಟ್ರೀಮಿಂಗ್ ಇರುವುದಿಲ್ಲ. ಏಕೆಂದರೆ ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಡುವಿನ ಜಂಟಿ ಉದ್ಯಮವಾಗಿರುವ ವಯೋಕಾಮ್18 ಮೀಡಿಯಾ ಪ್ರೈ. ಈ ಬಾರಿಯ ಐಪಿಎಲ್ ಡಿಜಿಟಲ್ ಪ್ರಸಾರ ಹಕ್ಕುಗಳನ್ನು 20,500 ಕೋಟಿ ರೂ.ಗೆ ಖರೀದಿಸಿದೆ. ಅಲ್ಲದೆ ಐಪಿಎಲ್ ಅನ್ನು ಉಚಿತವಾಗಿ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಅದರಂತೆ ಈ ಬಾರಿಯ ಐಪಿಎಲ್ ಅನ್ನು ಜಿಯೋ ಸಿನಿಮಾ ಆ್ಯಪ್ನಲ್ಲಿ ಲೈವ್ ವೀಕ್ಷಿಸಬಹುದು. ಇನ್ನು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನಲ್ಲೂ ಜಿಯೋ ಸಿನಿಮಾ ವೆಬ್ ಮೂಲಕ ಐಪಿಎಲ್ ಅನ್ನು ಉಚಿತವಾಗಿ ನೋಡಬಹುದು.
ಇನ್ನು ವಿದೇಶದಲ್ಲಿರುವವರು ಈಗಾಗಲೇ ಜಿಯೋ ಸಿನಿಮಾ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದರೆ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಇದಾಗ್ಯೂ ನೀವಿರುವ ದೇಶಗಳಲ್ಲಿ ಜಿಯೋ ಸ್ಟ್ರೀಮಿಂಗ್ ಲಭ್ಯವಿರದಿದ್ದರೆ ವಿಪಿಎನ್ ಬಳಸುವ ಮೂಲಕ ಉಚಿತ ನೇರ ಪ್ರಸಾರವನ್ನು ನೋಡಬಹುದು. ಹಾಗೆಯೇ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳ ಮೂಲಕ ಟಿವಿಯಲ್ಲೂ ಪಂದ್ಯಗಳಲ್ಲೂ ವೀಕ್ಷಿಸಬಹುದು.
ಯಾವೆಲ್ಲಾ ಚಾನೆಲ್ಗಳಲ್ಲಿ ನೇರ ಪ್ರಸಾರ?
- ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1 HD
- ಸ್ಟಾರ್ ಸ್ಪೋರ್ಟ್ಸ್ 1 SD
- ಸ್ಟಾರ್ ಸ್ಪೋರ್ಟ್ಸ್ 1 HD
- ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ
- ಸ್ಟಾರ್ ಸ್ಪೋರ್ಟ್ಸ್ ಕನ್ನಡ
- ಸ್ಟಾರ್ ಸ್ಪೋರ್ಟ್ಸ್ 1
- ಸ್ಟಾರ್ ಸ್ಪೋರ್ಟ್ಸ್ ತೆಲುಗು
- ಸ್ಟಾರ್ ಸ್ಪೋರ್ಟ್ಸ್ 1 HD (ಹಿಂದಿ)
- ಸ್ಟಾರ್ ಸ್ಪೋರ್ಟ್ಸ್ ತಮಿಳು
- ಸ್ಟಾರ್ ಸ್ಪೋರ್ಟ್ಸ್ 3
- ಸ್ಟಾರ್ ಸ್ಪೋರ್ಟ್ಸ್ HD 3 (ಇಂಗ್ಲಿಷ್)
ಈ ಎಲ್ಲಾ ಚಾನೆಲ್ಗಳಲ್ಲಿ ಐಪಿಎಲ್ ನೇರ ಪ್ರಸಾರ ಇರಲಿದೆ. ಇನ್ನು ವಿದೇಶಗಳಲ್ಲಿದ್ದರೆ ಈ ಕೆಳಗಿನ ಚಾನೆಲ್ ಹಾಗೂ ಆ್ಯಪ್ಗಳಲ್ಲಿ ಐಪಿಎಲ್ ಲೈವ್ ಇರಲಿದೆ.
- ಯುಕೆ- ITVX
- ಆಸ್ಟ್ರೇಲಿಯಾ- Fox Sports
- ಕೆನಡಾ- Willow Tv
- ಮಧ್ಯ ಪ್ರಾಚ್ಯ (Middle East)- beIN ಸ್ಪೋರ್ಟ್ಸ್ 3
- ದಕ್ಷಿಣ ಆಫ್ರಿಕಾ- Super Sports
- ನ್ಯೂಜಿಲ್ಯಾಂಡ್- Sky Sports NZ, Sky Sports 2
- ಪಾಕಿಸ್ತಾನ- GEO Super (TBC)
- ಬಾಂಗ್ಲಾದೇಶ- Channel 9
- ಮಾಲ್ಡೀವ್ಸ್- YuppTv, Medianet
ಜಿಯೋ ಸಿನಿಮಾ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
ನೀವು ಅಂಡಾಯ್ಡ್ ಬಳಕೆದಾರರಾಗಿದ್ದ ಪ್ಲೇಸ್ಟೋರ್ಗೆ ಹೋಗಿ JIO Cinema App ಅಂತ ಸರ್ಚ್ ಮಾಡಿ. ಅಲ್ಲಿ ಕಾಣಿಸುವ ಜಿಯೋ ಸಿನಿಮಾ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ. ಆ ಬಳಿಕ ಹೋಮ್ ಪೇಜ್ಗೆ ಹೋದರೆ ಟಾಟಾ ಐಪಿಎಲ್ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಪಂದ್ಯಗಳನ್ನು ವೀಕ್ಷಿಸಬಹುದು. ಇನ್ನು ಆ್ಯಪಲ್ ಫೋನ್ ಬಳಕೆದಾರರು ಆ್ಯಪಲ್ಸ್ಟೋರ್ ಮೂಲಕ ಜಿಯೋ ಸಿನಿಮಾ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.