IPL 2023: ಅತೀ ಹೆಚ್ಚು ಸಿಕ್ಸ್ ಬಾರಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?
IPL 2023 Kannada: ಬ್ಯಾಟಿಂಗ್ಗೆ ಸಹಕಾರಿಯಾಗಿರುವ ಕೆಲ ಮೈದಾನದಲ್ಲಿ ಸಿಕ್ಸ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದಾಗಿದೆ. ಹೀಗೆ ಐಪಿಎಲ್ನಲ್ಲಿ ಕೆಲ ತಂಡಗಳು ಸಿಕ್ಸ್ಗಳ ಸುರಿಮಳೆ ಸುರಿಸಿದ ಇತಿಹಾಸವನ್ನು ಹೊಂದಿದೆ.
Updated on:Mar 29, 2023 | 9:25 PM

IPL 2023: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ 16 ಕ್ಕೆ ಮಾರ್ಚ್ 31 ರಂದು ಚಾಲನೆ ಸಿಗಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯಲಿದೆ. ಈ ಬಾರಿ ಭಾರತದಲ್ಲೇ ಎಲ್ಲಾ ಪಂದ್ಯಗಳು ನಡೆಯಲಿದ್ದು, ಹೀಗಾಗಿ ಭಾರತೀಯ ಆಟಗಾರರಿಂದ ಒಂದಷ್ಟು ದಾಖಲೆಗಳು ನಿರೀಕ್ಷಿಸಬಹುದು.

ಅದರಲ್ಲೂ ಬ್ಯಾಟಿಂಗ್ಗೆ ಸಹಕಾರಿಯಾಗಿರುವ ಕೆಲ ಮೈದಾನದಲ್ಲಿ ಸಿಕ್ಸ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದಾಗಿದೆ. ಹೀಗೆ ಐಪಿಎಲ್ನಲ್ಲಿ ಕೆಲ ತಂಡಗಳು ಸಿಕ್ಸ್ಗಳ ಸುರಿಮಳೆ ಸುರಿಸಿದ ಇತಿಹಾಸವನ್ನು ಹೊಂದಿದೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ತಂಡಗಳ ಪಟ್ಟಿ ಈ ಕೆಳಗಿನಂತಿದೆ...

1- ಮುಂಬೈ ಇಂಡಿಯನ್ಸ್: ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ತಂಡ ಎಂಬ ದಾಖಲೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿದೆ. 231 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಿಂದ ಇದುವರೆಗೆ 1408 ಸಿಕ್ಸ್ಗಳು ಮೂಡಿಬಂದಿವೆ.

2- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಈ ಪಟ್ಟಿಯಲ್ಲಿ ಆರ್ಸಿಬಿ ತಂಡವು 2ನೇ ಸ್ಥಾನದಲ್ಲಿದೆ. 227 ಪಂದ್ಯಗಳನ್ನಾಡಿರುವ ಆರ್ಸಿಬಿ ಕಡೆಯಿಂದ ಒಟ್ಟು 1377 ಸಿಕ್ಸ್ಗಳು ಮೂಡಿಬಂದಿವೆ.

3- ಪಂಜಾಬ್ ಕಿಂಗ್ಸ್: ಐಪಿಎಲ್ನಲ್ಲಿ 218 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ಆಟಗಾರರಿಂದ ಒಟ್ಟು 1276 ಸಿಕ್ಸ್ಗಳು ಸಿಡಿದಿವೆ.

4- ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ತಂಡವು ಐಪಿಎಲ್ನಲ್ಲಿ ಒಟ್ಟು 209 ಪಂದ್ಯಗಳನ್ನಾಡಿದ್ದು, ಈ ವೇಳೆ 1268 ಸಿಕ್ಸ್ಗಳು ಮೂಡಿಬಂದಿವೆ.

5- ಕೊಲ್ಕತ್ತಾ ನೈಟ್ ರೈಡರ್ಸ್: ಐಪಿಎಲ್ನಲ್ಲಿ 223 ಪಂದ್ಯಗಳನ್ನಾಡಿರುವ ಕೆಕೆಆರ್ ತಂಡದ ಆಟಗಾರರು ಒಟ್ಟು 1226 ಸಿಕ್ಸ್ಗಳನ್ನು ಬಾರಿಸಿದ್ದಾರೆ.

6- ಡೆಲ್ಲಿ ಕ್ಯಾಪಿಟಲ್ಸ್: ಐಪಿಎಲ್ನಲ್ಲಿ 224 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಕಡೆಯಿಂದ 1147 ಸಿಕ್ಸ್ಗಳು ಮೂಡಿಬಂದಿವೆ.

7- ರಾಜಸ್ಥಾನ್ ರಾಯಲ್ಸ್: ರಾಜಸ್ಥಾನ್ ತಂಡವು ಇದುವರೆಗೆ 192 ಪಂದ್ಯಗಳನ್ನು ಆಡಿದ್ದು, ಈ ವೇಳೆ ಒಟ್ಟು 1011 ಸಿಕ್ಸ್ಗಳನ್ನು ಬಾರಿಸಿದ್ದಾರೆ.

8- ಸನ್ರೈಸರ್ಸ್ ಹೈದರಾಬಾದ್: 152 ಐಪಿಎಲ್ ಪಂದ್ಯಗಳನ್ನಾಡಿರುವ ಎಸ್ಆರ್ಹೆಚ್ ಆಟಗಾರರಿಂದ ಮೂಡಿಬಂದಿರುವುದು 777 ಸಿಕ್ಸ್ಗಳು.

9- ಲಕ್ನೋ ಸೂಪರ್ ಜೈಂಟ್ಸ್: ಕಳೆದ ಸೀಸನ್ನಿಂದ ಐಪಿಎಲ್ ಅಭಿಯಾನ ಆರಂಭಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರು 15 ಪಂದ್ಯಗಳಲ್ಲಿ ಒಟ್ಟು 115 ಸಿಕ್ಸ್ ಸಿಡಿಸಿದ್ದಾರೆ.

10- ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ನಲ್ಲಿ 16 ಪಂದ್ಯಗಳನ್ನು ಆಡಿದ್ದು, ಈ ವೇಳೆ ಒಟ್ಟು 79 ಸಿಕ್ಸ್ಗಳನ್ನು ಬಾರಿಸಿದ್ದಾರೆ.
Published On - 9:23 pm, Wed, 29 March 23



















