Redmi Note 10T 5G: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯ್ತು ಭರ್ಜರಿ ಫೀಚರ್​ನ ರೆಡ್ನಿ ನೋಟ್ 10T ‘5G’ ಸ್ಮಾರ್ಟ್​ಫೋನ್

| Updated By: Vinay Bhat

Updated on: Jul 20, 2021 | 1:43 PM

ಒಟ್ಟು ಎರಡು ಮಾದರಿಯಲ್ಲಿ ರೆಡ್ಮಿ ನೋಟ್ 10T 5G ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ 13,999 ರೂ. ಆಗಿದೆ.

Redmi Note 10T 5G: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯ್ತು ಭರ್ಜರಿ ಫೀಚರ್​ನ ರೆಡ್ನಿ ನೋಟ್ 10T ‘5G’ ಸ್ಮಾರ್ಟ್​ಫೋನ್
Redmi Note 10T 5G
Follow us on

ಭಾರತೀಯ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಕಳೆದೊಂದು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದ ಶವೋಮಿ (Xiaomi) ಕಂಪೆನಿಯ ರೆಡ್ಮಿ ನೋಟ್ 10T 5G ಸ್ಮಾರ್ಟ್​ಫೋನ್ ಭಾರತದಲ್ಲಿ ಲಾಂಚ್ ಆಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ಈ ಸ್ಮಾರ್ಟ್​ಫೋನ್ ಬಿಡುಗಡೆ ಆಗಿದ್ದು, ಇದು ರೆಡ್ನಿ ನೋಟ್ (Redmi Note) ಸರಣಿಯಲ್ಲಿನ ಐದನೇ ಫೋನ್ ಆಗಿದೆ. ಈ ಹಿಂದೆ ಇದೇ ಸರಣಿಯಲ್ಲಿ ರೆಡ್ಮಿ ನೋಟ್ 10, ರೆಡ್ಮಿ ನೋಟ್ 10 ಪ್ರೊ, ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಮತ್ತು ರೆಡ್ಮಿ ನೋಟ್ 10s ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಿದ್ದವು.

ರಡ್ಮಿ ನೋಟ್ 10 ಸರಣಿಯಲ್ಲಿ ಬಿಡುಗಡೆ ಆಗಿದ್ದ ಸ್ಮಾರ್ಟ್​ಫೋನ್​ಗಳು 4G ನೆಟ್​ವರ್ಕ್​ ಹೊಂದಿದ್ದವು. ಆದರೆ, ಇಂದು ಲಾಂಚ್ ಮಾಡಿರುವ ರೆಡ್ಮಿ ನೋಟ್ 10T ಚೊಚ್ಚಲ 5G ಮೊಬೈಲ್ ಆಗಿದೆ. ಅಲ್ಲದೆ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5G ಸ್ಮಾರ್ಟ್​ಫೋನ್​ಗಳ ಪೈಕಿ ಇದುಕೂಡ ಒಂದು.

ಬೆಲೆ ಎಷ್ಟು?:

ಒಟ್ಟು ಎರಡು ಮಾದರಿಯಲ್ಲಿ ರೆಡ್ಮಿ ನೋಟ್ 10T ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ 13,999 ರೂ. ಆಗಿದೆ. ಅಂತೆಯೆ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ. ಜುಲೈ 26 ರಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಈ ಫೋನ್ ಸೇಲ್ ಕಾಣಲಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ದಾರರು 1,000 ರೂ. ಡಿಸ್ಕೌಂಟ್​ನಲ್ಲಿ ಖರೀದಿಸಬಹುದು.

ಏನು ವಿಶೇಷತೆ?:

ರೆಡ್ಮಿ ನೋಟ್ 10T 5G ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್​ನಿಂ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 11 ನಲ್ಲಿ MIUI ಬೆಂಬಲ ಪಡೆದಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಎಫ್ / 1.79 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

ರೆಡ್ಮಿ ನೋಟ್ 10ಟಿ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಬಾಕ್ಸ್ ಒಳಗಡೆ 22.5W ಫಾಸ್ಟ್​ ಚಾರ್ಜರ್ ಕೂಡ ಇರಲಿದೆ.

ನೀವುಹೋದ ಲಾಡ್ಜ್ ಅಥವಾ ಮಾಲ್​ನ ಟ್ರಯಲ್ ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಇದೆಯೇ?: ಹೀಗೆ ಪತ್ತೆ ಹಚ್ಚಿ

One Plus Nord 2: ಬಿಡುಗಡೆಗೆ ಎರಡೇ ದಿನ ಬಾಕಿ: ರೋಚಕತೆ ಸೃಷ್ಟಿಸುತ್ತಿದೆ ಹೊಸ ಒನ್​ಪ್ಲಸ್ ನಾರ್ಡ್ 2

(Redmi Note 10T 5G launched in India sales via Amazon price starts at Rs 13999)