Redmi Smart TV: ಭಾರತದಲ್ಲಿ ಬಿಡುಗಡೆ ಆಯ್ತು ಅತ್ಯಂತ ಕಡಿಮೆ ಬೆಲೆ, ಭರ್ಜರಿ ಫೀಚರ್ಸ್​ನ ಹೊಸ ರೆಡ್ಮಿ ಸ್ಮಾರ್ಟ್​ ಟಿವಿ

| Updated By: Vinay Bhat

Updated on: Sep 23, 2021 | 1:30 PM

ಶವೋಮಿಯ ಹೊಸ 32 ಇಂಚಿನ ರೂಪಾಂತರದ ರೆಡ್ಮಿ ಸ್ಮಾರ್ಟ್​ ಟಿವಿ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 43 ಇಂಚಿನ ರೂಪಾಂತರವು ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.

Redmi Smart TV: ಭಾರತದಲ್ಲಿ ಬಿಡುಗಡೆ ಆಯ್ತು ಅತ್ಯಂತ ಕಡಿಮೆ ಬೆಲೆ, ಭರ್ಜರಿ ಫೀಚರ್ಸ್​ನ ಹೊಸ ರೆಡ್ಮಿ ಸ್ಮಾರ್ಟ್​ ಟಿವಿ
Redmi Smart TV
Follow us on

ಕೇವಲ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಸ್ಮಾರ್ಟ್​ ಟಿವಿ (Smart TV) ಕ್ಷೇತ್ರದಲ್ಲೂ ಭರ್ಜರಿ ಯಶಸ್ಸು ಸಾಧಿಸಿರುವ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪೆನಿ ದಿನದಿಂದ ದಿನಕ್ಕೆ ತನ್ನ ಬ್ರ್ಯಾಂಡ್ ಅನ್ನು ಹೆಚ್ಚಿಸುತ್ತಿದೆ. ಭಾರತದ ಸ್ಮಾರ್ಟ್​ಫೋನ್ ವಿಭಾಗದಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿರುವ ಶವೋಮಿ ಸದ್ಯ ಟಿವಿ ಮಾರುಕಟ್ಟೆಯಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಭಾರತದಲ್ಲಿ ಎರಡು ಹೊಸ ರೆಡ್ಮಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ರೆಡ್ಮಿ ಟಿವಿ 32 ಇಂಚು (Redmi Smart TV 32) ಮತ್ತು 43 ಇಂಚಿನದ್ದಾಗಿದೆ (Redmi Smart TV 43).ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿರುವ ಈ ಎರಡೂ ಸ್ಮಾರ್ಟ್​ ಟಿವಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು ಆಕರ್ಷಕ ಫೀಚರ್​ಗಳನ್ನು ಒಳಗೊಂಡಿದೆ.

ಶವೋಮಿಯ 32 ಇಂಚಿನ ರೂಪಾಂತರದ ರೆಡ್ಮಿ ಸ್ಮಾರ್ಟ್​ ಟಿವಿ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 43 ಇಂಚಿನ ರೂಪಾಂತರವು ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಹೊಸ ಸ್ಮಾರ್ಟ್ ಟಿವಿಗಳು “ಆಲ್-ರೌಂಡ್ ಎಂಟರ್ಟೈನ್ಮೆಂಟ್” ನೀಡುವ ಗುರಿಯನ್ನು ಹೊಂದಿವೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೋ, IMDb ಇಂಟಿಗ್ರೇಷನ್ ಮತ್ತು ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ನೀಡುವ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ.

ವಿಶೇಷವಾಗಿ ಡಾಲ್ಬಿ 5.1 ಸರೌಂಡ್ ಸೌಂಡ್ ಅನುಭವವನ್ನು ನೀಡಲಿವೆ. ಜೊತೆಗೆ ಇತ್ತೀಚಿನ ಪ್ಯಾಚ್ ವಾಲ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಮಿ ರಿಮೋಟ್‌ನೊಂದಿಗೆ ಸಂಯೋಜಿಸುತ್ತಿರುವ ಈ ಟಿವಿಯು ರಿಮೋಟ್‌ ಗೂಗಲ್ ಅಸಿಸ್ಟೆಂಟ್ ಬಟನ್ ಮತ್ತು ಕ್ವಿಕ್ ಮ್ಯೂಟ್ ಮತ್ತು ಕ್ವಿಕ್ ವೇಕ್ ಸೇರಿದಂತೆ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಕಸ್ಟಮೈಸೆಬಲ್‌ ಪಿಕ್ಚರ್‌ ಕಂಟ್ರೋಲ್‌ ಅನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI, 3.5mm ಜಾಕ್, USB, AV, ಈಥರ್ನೆಟ್ ಮತ್ತು ಆಂಟೆನಾ ಪೋರ್ಟ್‌ಗಳನ್ನು ಬೆಂಬಲಿಸಲಿದೆ.

ಡ್ಯುಯಲ್ ಬ್ಯಾಂಡ್ ವೈ-ಫೈ, 20W ಸ್ಪೀಕರ್‌ಗಳು ಪ್ರಮುಖ ಹೈಲೇಟ್ಸ್. ಸ್ಮಾರ್ಟ್ ಟಿವಿ ವೀಕ್ಷಕರಿಗೆ ಚಲನಚಿತ್ರಗಳ ರೇಟಿಂಗ್‌ಗಳನ್ನು ಮತ್ತು ಕಂಟೆಂಟ್‌ ಪೇಜ್‌ನಿಂದ ನೇರವಾಗಿ ಶೋ ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡಲಿದೆ. ಆಡಿಯೋ ಸಿಸ್ಟಮ್ ಡಿಟಿಎಸ್ ವರ್ಚುವಲ್: ಎಕ್ಸ್ ಸರೌಂಡ್ ಸೌಂಡ್ಸ್ಮ ಅನ್ನು ಕೂಡ ಹೊಂದಿದೆ. ಈ ಸ್ಮಾರ್ಟ್‌ಟಿವಿ ಕ್ವಿಕ್‌ ಮ್ಯೂಟ್‌ ಹೊಂದಿರುವುದರಿಂದ, ಇದನ್ನು ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ಟಿವಿಯನ್ನು ಮ್ಯೂಟ್ ಮಾಡುತ್ತದೆ. ರಿಮೋಟ್ ಕೂಡ ಕ್ವಿಕ್ ವೇಕ್ ಫೀಚರ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ರೆಡ್ಮಿ ಸ್ಮಾರ್ಟ್ ಟಿವಿ ಬೆಲೆ 32 ಇಂಚಿನ ರೂಪಾಂತರಕ್ಕೆ 15,999 ರೂ. ಬೆಲೆಯನ್ನು ಹೊಂದಿದೆ. ಹಾಗೆಯೇ ರಡ್ಮಿ ಟಿವಿಯ 43 ಇಂಚಿನ ರೂಪಾಂತರವು 25,999 ರೂ. ಬೆಲೆಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಟಿವಿ ಯಾವಾಗ ಮಾರಾಟವಾಗಲಿದೆ ಅನ್ನೊದನ್ನ ಇನ್ನೂ ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಇದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಸೇಲ್‌ನಲ್ಲಿ ಮೊದಲ ಸೇಲ್ ಕಾಣುವ ನಿರೀಕ್ಷೆ ಇದೆ.

Flipkart Big Billion Days Sale: ಫ್ಲಿಪ್‌ಕಾರ್ಟ್​ ಬಿಗ್ ಬಿಲಿಯನ್ ಡೇಸ್​ಗೆ ದಿನಗಣನೆ: ಹೊಸದಾಗಿ ಲಾಂಚ್ ಆಗಲಿದೆ ಈ ಪ್ರಾಡಕ್ಟ್​ಗಳು

Oppo F19: ಭಾರತದಲ್ಲಿ ಭರ್ಜರಿ ಮಾರಾಟ: ಒಪ್ಪೋ ಕಂಪೆನಿಯ ಎರಡು ಸ್ಮಾರ್ಟ್​ಫೋನ್ ಬೆಲೆಯಲ್ಲಿ ಏರಿಕೆ

(Redmi Smart TV Xiaomi sub-brand launched The 32-inch and 43-inch Redmi Smart TV in India)