Realiance JIO: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಜಿಯೋದಿಂದ ಬಂಪರ್ ಆಫರ್ ಘೋಷಣೆ: ಇಲ್ಲಿದೆ ಮಾಹಿತಿ

| Updated By: Vinay Bhat

Updated on: Aug 12, 2022 | 1:29 PM

ಈಗಾಗಲೇ ಕಡಿಮೆ ಬೆಲೆಗೆ ಅನೇಕ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿರುವ ಜಿಯೋ ಇನ್ನಷ್ಟು ಬಳಕೆದಾರರನ್ನು ಸೆಳೆಯಲು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೆಲ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯವಾಗಿ 750 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ (Prepaid Plans) ಎಲ್ಲರ ಗಮನ ಸೆಳೆಯುತ್ತಿದೆ.

Realiance JIO: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಜಿಯೋದಿಂದ ಬಂಪರ್ ಆಫರ್ ಘೋಷಣೆ: ಇಲ್ಲಿದೆ ಮಾಹಿತಿ
Reliance JIO
Follow us on

75ನೇ ಸ್ವಾತಂತ್ರ್ಯೋತ್ಸವ (Independence Day) ಪ್ರಯುಕ್ತ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಒಡೆತನದ ಜಿಯೋ (Realiance JIO) ತನ್ನ ಗ್ರಾಹಕರಿಗೆ ಆಕರ್ಷಕ ಆಫರ್​ಗಳನ್ನು ಘೋಷಣೆ ಮಾಡಿದೆ. ಈಗಾಗಲೇ ಕಡಿಮೆ ಬೆಲೆಗೆ ಅನೇಕ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿರುವ ಜಿಯೋ ಇನ್ನಷ್ಟು ಬಳಕೆದಾರರನ್ನು ಸೆಳೆಯಲು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೆಲ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯವಾಗಿ 750 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ (Prepaid Plans) ಎಲ್ಲರ ಗಮನ ಸೆಳೆಯುತ್ತಿದೆ. 90 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್​ನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆಯಬಹುದು. ಅಂದರೆ ಒಟ್ಟು 180GB ಡೇಟಾ ಸಿಗಲಿದೆ. ಜೊತೆಗೆ ಯಾವುದೇ ನೆಟ್​ವರ್ಕ್​ಗೆ ಅನಿಯಮಿತ ಕರೆ ಮಾಡಬಹುದು. ದಿನಕ್ಕೆ 100 ಎಸ್​ಎಮ್​ಎಸ್ ಉಚಿತ ನೀಡಲಾಗಿದೆ.

ಜಿಯೋ ಚಂದಾದಾರರು 2,999ರೂ. ಪ್ಲಾನ್‌ ಅನ್ನು ರಿಚಾರ್ಜ್ ಮಾಡಿದರೆ ಅದೇ ಮೊತ್ತದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ಲಾನ್​​ನಲ್ಲಿ ನಾಲ್ಕು ಕೂಪನ್‌ಗಳು ಒಳಗೊಂಡಿದೆ. ನೀವು ರೀಚಾರ್ಜ್‌ ಮಾಡಿದ 72 ಗಂಟೆಗಳ ಒಳಗೆ ಅರ್ಹ ಚಂದಾದಾರರ MyJio ಅಪ್ಲಿಕೇಶನ್‌ಗೆ ನೇರವಾಗಿ ಕ್ರೆಡಿಟ್ ಮಾಡಲಾಗುತ್ತದೆ. ಈ ಪ್ಲಾನ್‌ ಅನ್ನು ನೀವು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ರಿಚಾರ್ಜ್ ಮಾಡಿದರೂ ಕೂಡ ಆಫರ್‌ ಕೂಪನ್‌ಗಳನ್ನು ಪಡೆದುಕೊಳ್ಳಬಹುದು.

ಇನ್ನು ಜಿಯೋದಲ್ಲಿ ಆಕರ್ಷಕವಾದ 666 ರೂ. ಪ್ರಿಪೇಯ್ಡ್‌ ಯೋಜನಯಿದ್ದು ಇದು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 126GB ಡೇಟಾ ಪ್ರಯೋಜನ ಸಿಗುತ್ತದೆ.

ಇದನ್ನೂ ಓದಿ
JIO: ಆಗಸ್ಟ್ 15ಕ್ಕೆ ಜಿಯೋದಿಂದ 5G ಸೇವೆ: ಹೊಸ ಯೋಜನೆ ಬೆಲೆ ಎಷ್ಟು?, ಹೊಸ ಸಿಮ್ ಖರೀದಿಸಬೇಕೇ?
Motorola X30 Pro: ಮಾರುಕಟ್ಟೆಗೆ ಬಂದೇ ಬಿಡ್ತು ಬರೋಬ್ಬರಿ 200MP ಕ್ಯಾಮೆರಾ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?
OnePlus 10 Ace Pro: ವಿದೇಶದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ ಒನ್‌ಪ್ಲಸ್‌ ಏಸ್‌ ಪ್ರೊ ಸ್ಮಾರ್ಟ್​ಫೋನ್: ಏನಿದೆ ವಿಶೇಷತೆ?
HP ಪರಿಚಯಿಸುತ್ತಿದೆ ಆಲ್-ಇನ್-ಒನ್ ಪಿಸಿ: ಏನಿದರ ವಿಶೇಷತೆ?, ಬೆಲೆ ಎಷ್ಟು?

ಅಂತೆಯೆ 783 ರೂ. ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 126 GB ಡೇಟಾ ಪ್ರಯೋಜನ ಸಿಗುತ್ತದೆ.

ಜಿಯೋ ಟೆಲಿಕಾಂನ 1066 ರೂ. ಪ್ರಿಪೇಯ್ಡ್‌ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಇದರಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯವಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 173 GB ಡೇಟಾ ದೊರೆಯುತ್ತದೆ.

ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್

Published On - 1:29 pm, Fri, 12 August 22