Samsung Galaxy A52: ಬಿಡುಗಡೆ ಆಗಿರುವ ಸ್ಮಾರ್ಟ್​ಫೋನ್ ಬೆಲೆಯನ್ನು ಹೆಚ್ಚಿಸುತ್ತಿರುವ ಕಂಪೆನಿ: ಈಗ ಸ್ಯಾಮ್​ಸಂಗ್ ಸರದಿ

| Updated By: Vinay Bhat

Updated on: Sep 04, 2021 | 3:19 PM

ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ತನ್ನ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಢೀರ್‌ ಏರಿಕೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆಯಲ್ಲಿ 1,000 ರೂಗಳನ್ನು ಹೆಚ್ಚಿಸಲಾಗಿದೆ.

Samsung Galaxy A52: ಬಿಡುಗಡೆ ಆಗಿರುವ ಸ್ಮಾರ್ಟ್​ಫೋನ್ ಬೆಲೆಯನ್ನು ಹೆಚ್ಚಿಸುತ್ತಿರುವ ಕಂಪೆನಿ: ಈಗ ಸ್ಯಾಮ್​ಸಂಗ್ ಸರದಿ
samsung galaxy a52
Follow us on

ಭಾರತ ಸ್ಮಾರ್ಟ್​ಫೋನ್ (Smartphone) ಕಂಪೆನಿಗಳ ನೆಚ್ಚಿನ ತಾಣ ಎಂದರೆ ತಪ್ಪಾಗಲಾರದು. ದೇಶದಲ್ಲಿ ವಾರಕ್ಕೆ ಕನಿಷ್ಠ ಎಂದರೂ ಎರಡರಿಂದ ಮೂರು ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತವೆ. ಅದರಲ್ಲೂ ಬಜೆಟ್ ಬೆಲೆಯ ಫೋನುಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ. ಹೀಗಾಗಿಯೇ ಕಡಿಮೆ ಬೆಲೆಯ ಆಕರ್ಷಕ ಫೀಚರ್​ಗಳಿರುವ ಸ್ಮಾರ್ಟ್​ಫೋನ್ ಭಾರತದಲ್ಲಿ ಬೇಜಾನ್ ಸೇಲ್ ಕಾಣುತ್ತವೆ. ಇದೇ ಕಾರಣದಿಂದ ಕೆಲ ಕಂಪೆನಿಗಳು ಫೋನನ್ನು ಬಿಡುಗಡೆ ಮಾಡಿ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ ಎಂಬೊತ್ತಿಗೆ ಇದರ ಬೆಲೆಯನ್ನು ಏರಿಕೆ ಮಾಡುತ್ತವೆ. ಈ ಪ್ರಕ್ರಿಯೆ ಈಗಂತು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಶವೋಮಿ (Xiaomi), ರಿಯಲ್ ಮಿ (Realme), ಪೊಕೊ ಕಂಪನಿಯ ಫೋನುಗಳ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಸದ್ಯ ಸ್ಯಾಮ್​ಸಂಗ್ (Samsung) ಸರದಿ.

ಹೌದು, ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ತನ್ನ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಢೀರ್‌ ಏರಿಕೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆಯಲ್ಲಿ 1,000 ರೂಗಳನ್ನು ಹೆಚ್ಚಿಸಲಾಗಿದೆ. ಗ್ರಾಹಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿರುವ ಗ್ಯಾಲಕ್ಸಿ A52ಯ 8GB RAM ಮತ್ತು 8GB RAM ಮಾದರಿಯಲ್ಲಿ ಬೆಲೆ ಹೆಚ್ಚಿಸಲಾಗಿದೆ.

ಸದ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್​ನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 27,499ರೂ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ಫೋನ್ ಪ್ರಾರಂಭದಲ್ಲಿ 26,499 ರೂ. ಬೆಲೆಗೆ ಲಾಂಚ್‌ ಮಾಡಲಾಗಿತ್ತು. ಅದರ ಮೂಲ ರೂಪಾಂತರದಂತೆಯೇ 8GB + 128GB ಸಂಗ್ರಹ ಆಯ್ಕೆಯು ಈಗ 28,999 ರೂ. ಬೆಲೆಯನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದ್ದು, ಇದು 6.46 ಇಂಚಿನ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720G ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ. ಇದು ಆಂಡ್ರಾಯ್ಡ್‌ 11 ಓಎಸ್‌ ಹಾಗೂ ಓನ್‌ UI 3.1.ಸಪೋರ್ಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಫೋನಿನ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಪಡೆದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ.

ಇನ್ನೂ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಇತ್ತೀಚಿಗಿನ ಕನೆಕ್ಟಿವಿಟಿ ಆಯ್ಕೆಗಳಾದ 4ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್ /ಎ-ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಪ್ರಮುಖ ಆಯ್ಕೆಗಳನ್ನು ನೀಡಲಾಗಿದೆ.

Facebook: “ನಮ್ಮಿಂದ ತಪ್ಪಾಗಿದೆ”: ಬಳಕೆದಾರರ ಬಳಿ ಕ್ಷಮೆಯಾಚಿಸಿದ ಫೇಸ್​ಬುಕ್ ಸಂಸ್ಥೆ

Vivo X70: ಬಿಡುಗಡೆಗೂ ಮುನ್ನ ಫೀಚರ್ಸ್​ಗಳಿಂದಲೇ ಕಿಕ್ಕೇರಿಸುತ್ತಿದೆ ವಿವೋ X70 ಸರಣಿ ಸ್ಮಾರ್ಟ್​ಫೋನ್

(Samsung Galaxy A52 Price in India Increased by Rs 1000 here is the new price)